
ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಗುರುವಾರ ಕೊರೊನಾ ಬಾಂಬ್ ಸ್ಪೋಟವಾಗಿದ್ದು ಒಂದೇ ದಿನ ಪಟ್ಟಣದ 11 ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ 23 ಜನರಲ್ಲಿ ಒಟ್ಟೂ_34_ಜನರಲ್ಲಿ ಕೊರೊನಾ ಸೊಂಕು ದೃಢಪಡುವ ಮೂಲಕ ಹಳಿಯಾಳ ಸೊಂಕಿತರ ಸಂಖ್ಯೆ ಶತಕದ_ಗಡಿ_ದಾಟಿ_128ಕ್ಕೆ_ತಲುಪಿ ಹಳಿಯಾಳಿಗರ ನಿದ್ದೆಗೆಡುವಂತೆ ಮಾಡಿದೆ.
ಬುಧವಾರ ಮಾತ್ರ ಒಂದೇ ಒಂದು ಪ್ರಕರಣ ಪತ್ತೆಯಾಗಿ ಕೊಂಚ ಬಿಡುವು ನೀಡಿದ್ದ ಡೆಡ್ಲಿ ವೈರಸ್ ಇಂದು ಮತ್ತೇ ತನ್ನ ಪ್ರಕೋಪ ತೊರಿಸಿದ್ದು ಬರೊಬ್ಬರಿ 34 ಜನರನ್ನು ಖೇಡ್ಡಾಕ್ಕೆ ಬಿಳಿಸಿದೆ.
ಕಳೆದ ಒಂದು ವಾರದಿಂದ ಹಳಿಯಾಳ ಹಾಗೂ ದಾಂಡೇಲಿ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಸೊಂಕಿತರು ಪತ್ತೆಯಾಗುತ್ತಿದ್ದು ಈವರೆಗೆ ಈ ಎರಡೇ ತಾಲೂಕುಗಳಲ್ಲಿ ಸೊಂಕಿತರ ಸಂಖ್ಯೆ 400 ರ ಗಡಿ ದಾಟಿದೆ.

ಗುರುವಾರ ಹಳಿಯಾಳ ಪಟ್ಟಣದಲ್ಲಿ ೧೧, ತಾಲೂಕಿನ ಭಾಗವತಿ ಗ್ರಾಮದಲ್ಲಿ ಬರೊಬ್ಬರಿ ೧೪, ತೆರಗಾಂವ ಗ್ರಾಮದಲ್ಲಿ ೪ ಹಾಗೂ ಉಳಿದ ಗರಡೊಳ್ಳಿ, ತತ್ವಣಗಿ, ಹಂಪಿಹೊಳಿ, ಅರ್ಲವಾಡ ಗ್ರಾಮಗಳಲ್ಲಿ ತಲಾ ಒಂದು ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ.
ತಾಲೂಕಿನ ಯಡೋಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ವೈದ್ಯರೊಬ್ಬರಿಗೆ, ಸರ್ಕಾರಿ ಆಸ್ಪತ್ರೆಯ ಓರ್ವ ಅಧಿಕಾರಿ, ದಾಂಡೇಲಿಯಿAದ ಬರುವ ಓರ್ವ ಮಹಿಳಾ ಸಿಬ್ಬಂದಿಗೆ ಹಾಗೂ ಇಬ್ಬರು ಸುಶ್ರೂಷಕಿ(ನರ್ಸ)ಯರಿಗೆ ಜೊತೆಗೆ ಹಳಿಯಾಳ ಪೋಲಿಸ್ ಠಾಣೆಯ ಓರ್ವ ಎಎಸ್‌ಐ ಅವರಿಗೂ ಸೊಂಕು ದೃಢಪಟ್ಟಿದೆ.
ಪಟ್ಟಣದ ಜವಾಹರಗಲ್ಲಿ(ಗೌರಿಗುಡಿ ರಸ್ತೆ) ಯಲ್ಲಿ ಇತ್ತೀಚೆಗೆ ಕೊರೊನಾದಿಂದ ವೃದ್ದನೊರ್ವ ಮೃತಪಟ್ಟಿದ್ದ ಇವರ ಸಂಪರ್ಕಕ್ಕೆ ಬಂದ ಪತ್ನಿ ಹಾಗೂ ಪಕ್ಕದ ಮನೆಯವರಿಗೆ ಹಾಗೂ ಭಾಡಿಗೆ ಮನೆಯಲ್ಲಿರುವ ಓರ್ವರಿಗೆ ಸೊಂಕು ದೃಢಪಟ್ಟಿದೆ ಎನ್ನಲಾಗಿದೆ.

ಪಟ್ಟಣದ ಜವಳಿಗಲ್ಲಿ ೩, ಕಸಭಾಗಲ್ಲಿ-೧, ಮರಡಿಗುಡ್ಡ ಪ್ರದೇಶ-೧, ಕೊಟ್ಟಣ ಲೆಔಟ್-೧, ಆನೆಗುಂದಿ ಬಡಾವಣೆ-೧, ಬ್ರಾಹ್ಮಣಗಲ್ಲಿ-೧ ಹೀಗೆ ಸೊಂಕಿತರು ಪತ್ತೆಯಾಗಿದ್ದಾರೆ.
ಪಟ್ಟಣದ ಪ್ರಕರಣಗಳ ಸೊಂಕಿತರ ವಯಸ್ಸು ೩೩, ೬೦, ೫೨, ಮತ್ತು ೫೩ ವರ್ಷದ ನಾಲ್ವರು ಮಹಿಳೆಯರು ಮತ್ತು ೨೪, ೪೪, ೫೧, ೩೫, ೪೮, ೨೭, ೪೨, ವರ್ಷದ ಏಳು ಪುರುಷರಿದ್ದಾರೆ.
ಈ ಎಲ್ಲ ಪ್ರಕರಣಗಳಲ್ಲಿ ಕೆಲವೊಂದು ಗ್ರಾಮಾಂತರ ಭಾಗದಲ್ಲಿ ಬ್ಯಾಂಕ್, ಆಸ್ಪತ್ರೆ, ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುವವರು ಇದ್ದಾರೆ. ಅವರು ಕೆಲಸ ಮಾಡುವ ಸ್ಥಳ ಹಾಗೂ ವಾಸವಿರುವ ಸ್ಥಳಗಳು ಬೇರೆ ಆಗಿದ್ದು ಸದ್ಯ ಎರಡೂ ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಭಾಗವತಿ ಗ್ರಾಮದ ೧೪ ಪ್ರಕರಣಗಳ ಪೈಕಿ ೩೮, ೨೦, ೬೦, ೫೮, ೫೫, ಮತ್ತು ೩೨ ವರ್ಷಗಳ ಆರು ಮಹಿಳೆಯರು ಹಾಗೂ ೩೫, ೧೮, ೩೧, ೫೦, ೭೦, ೩೮, ೨೮, ೩೫ ರ ವಯಸ್ಸಿನ ೮ ಪುರುಷರಿಗೆ ಸೋಂಕು ದೃಢಪಟ್ಟಿದೆ.

ತಾಲೂಕಿನ ತೇರಗಾಂವ ಗ್ರಾಮದ ೧೦ವರ್ಷದ ಬಾಲಕ, ೨೮, ೩೫, ೪೮ ವರ್ಷದ ಪುರುಷರಿಗೆ ಕೊರೊನಾ ಒಕ್ಕರಿಸಿದೆ.
ಉಳಿದಂತೆ ತಾಲೂಕಿನ ಗರಡೊಳ್ಳಿ ಗ್ರಾಮದ ೩೪ವ- ಪುರುಷ, ಅರ್ಲವಾಡ ಗ್ರಾಮದ ೬ ವರ್ಷದ ಗಂಡು ಮಗು ಹಾಗೂ ೩೧ ವರ್ಷದ ತಾಯಿಗೆ, ತತ್ವಣಗಿ ಗ್ರಾಮದ ೩೫ವ-ಯುವಕ ಹಾಗೂ ಹಂಪಿಹೊಳಿ ಗ್ರಾಮದ ೪೧ ವರ್ಷದ ಪುರುಷನಲ್ಲಿ ಸೊಂಕು ಪತ್ತೆಯಾಗಿದೆ.
ಸೊಂಕಿತರು ಪತ್ತೆಯಾಗಿರುವ ಎಲ್ಲ ಪ್ರದೇಶಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಹಳಿಯಾಳ ಪೋಲಿಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.

Leave a Comment