ಕಾರವಾರ: ವಾಯುಪಡೆ ನೇಮಕಾತಿ ರ್ಯಾಲಿಯಲ್ಲಿ ಗ್ರೂಪ್ ‘ಎಕ್ಸ್’ (ತಾಂತ್ರಿಕ) ಟ್ರೇಡ್‍ಗಳ ಏರ್ಮನ್ ಹುದ್ದೆಗಳ ನೇಮಕಾತಿಗೆ ಅವಿವಾಹಿತ ಪುರುಷ ಅಭ್ಯರ್ಥಿಗಳು ಆನ್‍ಲೈನ್ ನೋಂದಣಿ ಮಾಡಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಭ್ಯರ್ಥಿಯು ಕರ್ನಾಟಕ ರಾಜ್ಯದವನಾಗಿದ್ದು, 17 ಜನವರಿ 2000 ಮತ್ತು 31 ಡಿಸೆಂಬರ್ 2003(ಈ ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿರಬೇಕು. ಸಿಇಬಿಎಸ್‍ಇಯು ಮಾನ್ಯತೆ ನೀಡಿದ ಶೈಕ್ಷಣಿಕ ಮಂಡಳಿಗಳಿಂದ ಕಡ್ಡಾಯವಾಗಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್‍ನೊಂದಿಗೆ ಇಂಟರ್ ಮೀಡಿಯೇಟ್, ದ್ವಿತೀಯ ಪಿಯುಸಿ, ತತ್ಸಮಾನ ಪರೀಕ್ಷೆಯಲ್ಲಿ ಶೇ. 50 ಅಂಕಗಳು ಮತ್ತು ಇಂಗ್ಲೀಷ್ ಒಂದರಲ್ಲಿಯೇ ಶೇ. 50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು ಅಥವಾ ಸರ್ಕಾರಿ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಎಂಜಿನಿಯರಿಂಗ್, ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟೃಮೆಂಟೇಷನ್ ಟೆಕ್ನಾಲಜಿ, ಇನ್‍ಫಾರಮೇಷನ್ ಟೆಕ್ನಾಲಜಿಯಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಶೇ. 50ರಷ್ಟು ಅಂಕಗಳು ಮತ್ತು ಡಿಪ್ಲೋಮಾ ಇಂಗ್ಲೀಷ್ ವಿಷಯವೊಂದರಲ್ಲಿ ಶೇ. 50 ಅಂಕ ಅಥವಾ ಒಂದು ವೇಳೆ ಡಿಪ್ಲೋಮಾದಲ್ಲಿ ಇಂಗ್ಲೀಷ್ ಇಲ್ಲದಿದ್ದಲ್ಲಿ ಇಂಟರ್ ಮೀಡಿಯೇಟ್, ಮೆಟ್ರಿಕ್ಯುಲೇಷನ್‍ನಲ್ಲಿ ಇಂಗ್ಲೀಷ್ ವಿಷಯದಲ್ಲಿ ಶೇ. 50 ಅಂಕಗಳನ್ನು ಪಡೆದಿರಬೇಕು.ಅರ್ಹ ಅಭ್ಯರ್ಥಿಗಳು https://airmenselection.cdac.in/CASB/index.html ನಲ್ಲಿ ದಿನಾಂಕ 11-09-2020ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:080-25592199ಕ್ಕೆ ಸಂಪರ್ಕಿಸಬಹುದಾಗಿ ತಿಳಿಸಿದ್ದಾರೆ.
Leave a Comment