ಶಿರಸಿ : ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರವಾರದ ಆಝಾದ್ ಯುತ್ ಕ್ಲಬ್ ಹಾಗೂ ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನೀಡಲಾಗುವ ಪತ್ರಿಕಾ ದಿನಾಚರಣೆಯ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಪತ್ರಕರ್ತ, ಜನಮಾಧ್ಯಮ ಪತ್ರಿಕೆ ಸಂಪಾದಕ ಅಶೋಕ ಹಾಸ್ಯಗಾರ ಅವರಿಗೆ ನೀಡಿ ಗೌರವಿಸಲಾಯಿತು. ಕೊವಿಡ್ ೧೯ ಹಿನ್ನೆಲೆಯಲ್ಲಿ ಕಾರವಾರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದು ಪಡಿಸಿ, ಇಲ್ಲಿನ ನೆಮ್ಮದಿ ಕುಟೀರದಲ್ಲಿ ಅತ್ಯಂತ ಸರಳವಾಗಿನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಹಾಸ್ಯಗಾರ ಅವರಿಗೆ ಆಝಾದ್ ಯುತ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ನಜೀರ್ ಅಹ್ಮದ್ ಯು. ಶೇಖ್ ಹಾಗೂ ಅತಿಥಿಗಳು ಶಾಲು ಹೊದೆಸಿ, ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅಶೋಕ ಹಾಸ್ಯಗಾರ ಅವರು, ಈಗ ಕೊವಿಡ್ ನಂತಹ ಕಠಿಣ ಸಂದರ್ಭವಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಯವರೂ ಒಂದು ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡಿದ್ದಾರೆ.ತಮ್ಮ ಜೀವನದ ಹಂಗು ತೊರೆದು ಕೊರೊನಾಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪ್ರಪಂಚಕ್ಕೆ ತಿಳಿಸಲು ಹೋರಾಡಿದ್ದಾರೆ. ಎಷ್ಟೋ ಸ್ನೇಹಿತರು ಅದರಲ್ಲೇ ತೀರಿಕೊಂಡಿದ್ದಾರೆ. ಆದ ಕಾರಣ ಪತ್ರಿಕೆಯ ಕೆಲಸ ಬಹಳ ಅಧ್ಬುತವಾದದ್ದು ಎಂದರು. ಕಾರವಾರದಲ್ಲಿ ಪತ್ರಿಕಾ ಕೆಲಸ ಮಾಡುವಾಗ ಆಝಾದ್ ಯುತ್ ಕ್ಲಬ್ಬಿನ ನಜೀರ್ ಅವರು ಒಟ್ಟಾಗಿ ಕೆಲಸ ಮಾಡಿದ್ದೇವೆ.


ನಾನು ಪತ್ರಿಕೆಯಲ್ಲಿ ಅವರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅಂತವರ ಈ ಸಮ್ಮಾನವನ್ನು ನಾನು ಪ್ರೀತಿಯಿಂದ ಸ್ವೀಕರಿಸಿದ್ದು, ಇದು ನನ್ನ ಭಾಗ್ಯ ಎಂದು ತಿಳಿದಿದ್ದೇನೆ. ಅಲ್ಲದೇ ಅವರ ಕ್ಲಬ್ ಇನ್ನಷ್ಟು ಸಮಾಜಮುಖಿ ಕೆಲಸದಿಂದ ಗುರುತಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿರಸಿ ಎಮ್.ಇ.ಎಸ್. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಅಶೋಕ ಭಟ್ಕಳ, ಅಶೋಕ ಹಾಸ್ಯಗಾರರಿಗೆ ಸಮ್ಮಾನಿಸುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಭೆ ಇದ್ದಲ್ಲಿ ಯಾವುದೂ ಅಡ್ಡಿಯಾಗದು ಎಂಬುದಕ್ಕೆ ಹಾಸ್ಯಗಾರ ಅವರೇ ಕಾರಣರಾಗಿದ್ದು, ಪ್ರಶಸ್ತಿಗೆ ಅವರು ಅರ್ಹರಾಗಿದ್ದಾರೆ. ಬೇರೆ ಬೇರೆ ಪತ್ರಿಕೆ ಸೇರಿದಂತೆ ಸಾಹಿತ್ಯದಲ್ಲಿಯೂ ಕೆಲಸ ಮಾಡಿದ್ದು, ಒಂದು ಉತ್ತಮ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ ಎಂದರು. ಪತ್ರಿಕಾ ರಂಗ ಸಮಾಜದ ನಾಲ್ಕನೇ ರಂಗವಾಗಿದ್ದು, ಪ್ರಶಸ್ತಿ ಎನ್ನುವುದು ಅವರ ಕರ್ತವ್ಯದ ಸಾಕ್ಷಿಯಾಗಿದೆ. ಹಾಸ್ಯಗಾರ ಅವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಲಭ್ಯವಾಗಬೇಕಿದ್ದು, ಶಿರಸಿಗೆ ಅವರು ಹೆಮ್ಮೆ ಎಂದ ಭಟ್ಕಳ್, ಆಝಾದ್ ಯುತ್ ಕ್ಲಬ್ ಸಮಾಜಮುಖಿ ಸಂಸ್ಥೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಂತಹ ಸಂಸ್ಥೆಯಿಂದ ಹಾಸ್ಯಗಾರ ಅವರಿಗೆ ಸಮ್ಮಾನ ಸಿಕ್ಕಿರುವುದು ಎಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಉಪೇಂದ್ರ ಪೈ, ನೆಮ್ಮದಿ ಕುಟೀರದ ವಿ.ಪಿ.ಹೆಗಡೆ ವೈಶಾಲಿ ಇದ್ದರು. ಪ್ರಾರಂಭದಲ್ಲಿ ಕಾರವಾರದ ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಮ್ ಶೇಖ್ ಪ್ರಾಸ್ತವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ವಿಜೇತ ಮೊಹಮ್ಮದ್ ಹಸನ್ ಮತ್ತು ಮತ್ತೆ ಎಂ. ಲಿಂಗರಾಜ್ ಸೆಕ್ಷನ್ ಆಫೀಸರ್ ಹೆಸ್ಕಾಂ ಉಪಸ್ಥಿತರಿದ್ದರು. ಪತ್ರಿಕೆಯಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡು ಕೆಲಸ ಮಾಡುವುದು ಕಷ್ಟದ ಕೆಲಸವಾಗಿದ್ದು, ಅಂತಹ ಕೆಲಸ ಹಾಸ್ಯಗಾರ ಅವರು ಮಾಡಿದ್ದಾರೆ. ಪ್ರಾಮಾಣಿಕ ವಾಗಿದ್ದು ಇಷ್ಟು ಸಾಧನೆ ಮಾಡುವುದು ಕಷ್ಟದ ಕೆಲಸ. ಗೌರವ ಸಿಗಬೇಕಾದಾಗ ವ್ಯಕ್ತಿ ಪ್ರಾಮಾಣಿಕವಾಗಿ ಇರಬೇಕು. ಅಂತವರು ಹಾಸ್ಯಗಾರರು ಎಂದರು ಜಿ.ಸುಬ್ರಾಯ ಭಟ್ ಬಕ್ಕಳ, ಸುಮುಖ ಟಿವಿ ಸಂಪಾದಕ.
Leave a Comment