ಹಳಿಯಾಳ: ತಾಂತ್ರಿಕತೆ ಯುಗದಲ್ಲಿ ನಾವೂಗಳು ಎಷ್ಷೇ ದೂರವಾದರೂ ಸಹ ಸಮೀಪದಿಂದ ವ್ಯಹರಿಸಬಹುದು ಆ ನಿಟ್ಟಿನಲ್ಲಿ ಭಾರತ ಸರ್ಕಾರ 235 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ ಫೋನ್ ನೀಡುತ್ತಿದೆ. ಇದರಿಂದ ಸುಲಭವಾಗಿ ಮಾಹಿತಿಗಳನ್ನು ನಿಡಬಹುದು ಎಂದು ಶಾಸಕ ಆರ್ ವ್ಹಿ ದೇಶಪಾಂಡೆ ಹೇಳಿದರು.

ಸೋಮವಾರ ತಾಲೂಕಾಡಳಿತ ಕಛೇರಿಯಲ್ಲಿ ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಳಿಯಾಳ 2020 ಮಾಸಾಚಾರಣೆ ಅಡಿಯಲ್ಲಿ ತಾಲೂಕಿನ 231 ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ-ಫೋನ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಶತಮಾನದಲ್ಲಿ ಬೆಳೆಯುವ ಮಕ್ಕಳ ಹೆಚ್ಚಿನ ಕಾಳಜೀ ಹಾಗೂ ಗರ್ಭಿಣಿ ಮಹಿಳೆಯರಿಗೆ ಬೇಕಾಗುವ ಸೌಲಭ್ಯಗಳನ್ನು ನೀಡಲು ಈ ಯೋಜನೆ ಉತ್ತಮವಾಗಿದೆ ಎಂದು ಹೇಳಿದರು.
ಸಿ.ಡಿ.ಪಿ.ಓ ಡಾ.ಲಕ್ಷ್ಮೀದೇವಿ.ಎಸ್. ತಹಶೀಲ್ದಾರ ವಿದ್ಯಾಧರ ಗುಳುಗುಳಿ, ತಾ.ಪ. ಕಾರ್ಯನಿರ್ವಾಹಕ ಅಧಿಕಾರಿ ಪ್ರವಿಣಕುಮಾರ ಸಾಲಿ, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
Leave a Comment