ಹಳಿಯಾಳ:- ಹಳಿಯಾಳ ಮತ್ತು ದಾಂಡೇಲಿಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಆನಲೈನ ಓಸಿ-ಮಟಕಾ ಆಟದಲ್ಲಿ ದಾಂಡೇಲಿಯ ಮಾದೇವ ಹಾಗೂ ಸೈಯದ್ ಎನ್ನುವವರೇ ಕಿಂಗ್ ಪಿನ್‍ಗಳೆಂದು ಹೇಳಲಾಗುತ್ತಿದೆ.
ಅಲ್ಲದೇ ಇವರಿಬ್ಬರು ತಾಲೂಕಿನ ಗ್ರಾಮಾಂತರ ಭಾಗವಾದ ಮುರ್ಕವಾಡ, ಬೆಳವಟಗಿ, ಕಾವಲವಾಡ, ಭಾಗವತಿ, ಅಂಬಿಕಾನಗರ ಭಾಗದಲ್ಲಿ ಆನಲೈನ್ ಓಸಿ ಆಟ ಅವ್ಯಾಹತವಾಗಿ ನಡೆಸುತ್ತಿದ್ದಾರೆಂದು ಕೆಲವು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.


ಗ್ರಾಮಾಂತರ ಭಾಗದ ಮುರ್ಕವಾಡ, ಕಾವಲವಾಡ ಮತ್ತು ಬೆಳವಟಗಿ ಭಾಗದ ಕೆಲವು ಪ್ರಜ್ಞಾವಂತ ಜನರು ತಮ್ಮ ಗ್ರಾಮಗಳಲ್ಲಿ ನಡೆಯುತ್ತಿರುವ ಮಟಕಾ ಆಟದ ಬಗ್ಗೆ ವಿವರಿಸುತ್ತಾ ದಾಂಡೇಲಿ ನಗರದ ಸೈಯದ್ ಹಾಗೂ ಮಾದೇವ ಎನ್ನುವ ಇಬ್ಬರು ಈ ಭಾಗದಲ್ಲಿ ಮಟಕಾ-ಓಸಿ ಆಟ ನಡೆಸುತ್ತಿದ್ದಾರೆ ಇವರ ಮೇಲೆ ಬುಕ್ಕಿಗಳೆಂದು ಈಗಾಗಲೇ ಹಳಿಯಾಳ-ದಾಂಡೇಲಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ ಆದರೂ ಇವರು ರಾಜಾರೋಷವಾಗಿ ದಂಧೆ ನಡೆಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದಿರುವ ಅವರುಗಳು ಈ ಬಗ್ಗೆ ನಾವುಗಳು ಧ್ವನಿ ಎತ್ತಿದರೇ ತಮಗೆ ಸಮಸ್ಯೆ ಮಾಡುತ್ತಾರೆ ಹೀಗಾಗಿ ತಾವು ಮಾತನಾಡದೆ ಸುಮ್ಮನೆ ಇರಬೇಕಾದ ಸಂದಿಗ್ದ ಪರಿಸ್ಥಿತಿ ಇದ್ದು ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.
ಇಂತಹವರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಿದೆ ಈಗಾಗಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಡಿವೈಎಸ್ಪಿ ಶಿವಾನಂದ ಚಲವಾದಿ ಅವರು ಆನ್‍ಲೈನ್ ಓಸಿ ಬಂದ ಮಾಡಿಸುವ ಬಗ್ಗೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ತಾವು ಕಾದು ನೋಡುತ್ತೇವೆ. ಕ್ರಮಗಳು ಜರುಗಿಸದೆ ಇದ್ದರೇ ಶಾಸಕ ಆರ್ ವಿ ದೇಶಪಾಂಡೆ ಅವರಲ್ಲಿ ದೂರು ನೀಡಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
Leave a Comment