• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಾರತದಿಂದ ಹೊಸ ಮಹತ್ವದ ಮೈಲಿಗಲ್ಲು ಸ್ಥಾಪನೆ;ಕೊವಿಡ್-19 ಮೂರು ತಿಂಗಳ ನಂತರ ಮೊದಲ ಬಾರಿಗೆ ತಗ್ಗಿದ ಹೊಸ ಪ್ರಕರಣಗಳು

October 20, 2020 by Sachin Hegde Leave a Comment

ಕೋವಿಡ್-19 ರೋಗಾಣು ನಿಯಂತ್ರಣ ಹೋರಾಟದಲ್ಲಿ ಭಾರತ ಹಲವಾರು ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಕಳೆದ 24 ತಾಸುಗಳಲ್ಲಿ ದೃಢಪಟ್ಟ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಮೂರು ತಿಂಗಳ ನಂತರ ಇದೇ ಮೊದಲ ಬಾರಿಗೆ 50 ಸಾವಿರ (46,790) ಮಟ್ಟದಿಂದ ಕೆಳಕ್ಕೆ ಇಳಿದಿದೆ. ಜುಲೈ 28ರಂದು ಒಂದೇ ದಿನ ಹೊಸ ಪ್ರಕರಣಗಳ ಸಂಖ್ಯೆ 47,703ರಷ್ಟು ದಾಖಲಾಗಿತ್ತು.

image001CXC1

ಪ್ರತಿದಿನ ಅಧಿಕ ಸಂಖ್ಯೆಯ ಕೋವಿಡ್ ಸೋಂಕಿತರು ಗುಣಮುಖರಾಗುತ್ತಿರುವುದರಿಂದ, ಮರಣ ಪ್ರಮಾಣ ಸುಸ್ಥಿರವಾಗಿ ಇಳಿಕೆ ಆಗುತ್ತಿದೆ. ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಇಳಿಕೆ ಕಾಣುತ್ತಿರುವ ಸ್ಥಿರ ಪ್ರವೃತ್ತಿ ದಾಖಲಾಗುತ್ತಿರುವುದು ಮುಂದುವರಿದಿದೆ.
ಮತ್ತೊಂದು ಬೆಳವಣಿಗೆಯಲ್ಲಿ, ಸಕ್ರಿಯ ಪ್ರಕರಣಗಳ ಶೇಕಡಾವಾರು ಪ್ರಮಾಣ ತಗ್ಗುತ್ತಿದ್ದು, ಅದೀಗ 10%ಗಿಂತ ಕೆಳಕ್ಕೆ ಇಳಿದಿದೆ. ದೇಶಾದ್ಯಂತ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು 7.5 ಲಕ್ಷ (7,48,538) ಕ್ಕಿಂತ ಕಡಿಮೆ ದಾಖಲಾಗಿದೆ. ಇದು ಈವರೆಗಿನ ಒಟ್ಟು ಪ್ರಕರಣಗಳ ಶೇಕಡ 9.85 ರಷ್ಟಿದೆ.

total case are active

ಕೇಂದ್ರ ಸರಕಾರದ ದೇಶವ್ಯಾಪಿ ನಡೆಸುತ್ತಿರುವ ಸಮಗ್ರ ಮತ್ತು ಉನ್ನತ ಮಟ್ಟದ ಗಂಟಲು ದ್ರವ ಪರೀಕ್ಷೆ, ಪ್ರಾಮಾಣಿಕ ಮತ್ತು ಪರಿಣಾಮಕಾರಿ ನಿಗಾ ಮತ್ತು ರೋಗ ಪತ್ತೆ ವ್ಯವಸ್ಥೆ, ತ್ವರಿತವಾಗಿ ಆಸ್ಪತ್ರೆಗಳಿಗೆ ರೋಗಿಗಳ ದಾಖಲು ಮತ್ತು ಕೇಂದ್ರ ಸರಕಾರ ಹೊರಡಿಸಿರುವ ಗುಣಾತ್ಮಕ ಚಿಕಿತ್ಸಾ ಸೌಲಭ್ಯ ಮತ್ತಿತರ ಕಾರ್ಯತಂತ್ರಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತಿರುವ ಪರಿಣಾಮಕಾರಿ ಮತ್ತು ಕೇಂದ್ರೀಕೃತ ಕ್ರಮಗಳು ಹಾಗೂ ಸಹಭಾಗಿತ್ವದ ಫಲವಾಗಿ ಈ ಎಲ್ಲಾ ಸಾಧನೆ ಸಾಧ್ಯವಾಗಿದೆ. ಜತೆಗೆ, ದೇಶಾದ್ಯಂತ ವೈದ್ಯ ಸಮುದಾಯ, ಅರೆವೈದ್ಯರು, ಸ್ವಯಂಸೇವಕರು, ಆಶಾ ಕಾರ್ಯಕರ್ತೆಯರು ಮತ್ತು ಎಲ್ಲಾ ಕೊವಿಡ್-19 ವಾರಿಯರ್ ಗಳು ಸಲ್ಲಿಸುತ್ತಿರುವ ನಿಸ್ವಾರ್ಥ ಮತ್ತು ಅನುಪಮ ಸೇವೆ ಮತ್ತು ಸಮರ್ಪಣಾ ಭಾವವೇ ಈ ಸಾಧನೆಗೆ ಕಾರಣವಾಗಿದೆ.

image0034X5Y

ಕೋವಿಡ್-19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣದಿಂದಲೇ ಸಕ್ರಿಯ ಪ್ರಕರಣಗಳ ಪ್ರಮಾಣ ಇಳಿಕೆ ಕಾಣುತ್ತಿದೆ. ಒಟ್ಟಾರೆ, ಚೇತರಿಕೆ ಪ್ರಕರಣಗಳ ಸಂಖ್ಯೆ 67 ಲಕ್ಷದ ಗಡಿ ದಾಟಿದೆ (67,33,328). ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಪ್ರಕರಣಗಳ ನಡುವಿನ ವ್ಯತ್ಯಾಸದಲ್ಲಿ ಸ್ಥಿರ ಏರಿಕೆ ಕಾಣುತ್ತಿದ್ದು, ಅದೀಗ 59,84,790ಕ್ಕೆ ಬಂದು ನಿಂತಿದೆ.
ಕಳೆದ 24 ತಾಸುಗಳಲ್ಲಿ 69,720 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ರಾಷ್ಟ್ರೀಯ ಚೇತರಿಕೆ ದರ 88.63%ಗೆ ಸುಧಾರಣೆ ಕಂಡಿದೆ.
ಹೊಸದಾಗಿ ಚೇತರಿಸಿಕೊಂಡಿರುವ 78% ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ.
ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಒಂದೇ ದಿನ 15,000ಕ್ಕಿಂತ ಹೆಚ್ಚಿನ ಸೋಂಕಿತರು ಗುಣಮುಖರಾಗಿ, ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 8,000ಕ್ಕಿಂತ ಹೆಚ್ಚಿನ ಮಂದಿ ಚೇತರಿಸಿಕೊಂಡು, 2ನೇ ಸ್ಥಾನದಲ್ಲಿದೆ.

recovered chat

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ 75% ಹೊಸ ದೃಢಪಟ್ಟ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದಲ್ಲಿ 5,000ಕ್ಕಿಂತ ಹೆಚ್ಚಿನ ಹೊಸ ಪ್ರಕರಣಗಳು ದೃಢಪಟ್ಟಿವೆ.

new case 10 states

ಕಳೆದ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 587 ಸಾವುಗಳು ಸಂಭವಿಸಿವೆ. ಅದರಲ್ಲಿ 81% ಸಾವುಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ ಪತ್ತೆಯಾಗಿವೆ. ಸತತ 2ನೇ ದಿನದಲ್ಲಿ ಸಾವುಗಳ ಸಂಖ್ಯೆ 600ರ ಮಟ್ಟದಿಂದ ಕೆಳಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಒಂದೇ ದಿನ ಗರಿಷ್ಠ ಅಂದರೆ 125 ಸಾವುಗಳು ವರದಿಯಾಗಿವೆ.

deaths in 10 stats

ಇಡೀ ವಿಶ್ವದಲ್ಲೇ ಕೊರೊನಾ ಸೋಂಕಿತರು ಗರಿಷ್ಠ ಪ್ರಮಾಣದಲ್ಲಿ ಗುಣಮುಖರಾಗುತ್ತಿರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ. ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಸಾವುಗಳು ದಾಖಲಾಗುತ್ತಿರುದು ಭಾರತದಲ್ಲೇ. ಸಾವಿನ ಪ್ರಮಾಣ ಇಂದು ಶೇಕಡ 1.52ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ತಗ್ಗುತ್ತಿರುವುದೇ ಸಾವಿನ ಪ್ರಮಾಣ ಇಳಿಮುಖವಾಗಲು ಕಾರಣ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending Tagged With: Coronavirus maximum in the world, death toll steadily in Maharashtra, ಕೊವಿಡ್-19 ಮೂರು ತಿಂಗಳ ನಂತರ ಮೊದಲ ಬಾರಿಗೆ ತಗ್ಗಿದ, ಮರಣ ಪ್ರಮಾಣ ಸುಸ್ಥಿರವಾಗಿ ಇಳಿಕೆ, ಮಹಾರಾಷ್ಟ್ರ ರಾಜ್ಯವೊಂದರಲ್ಲೇ, ವಿಶ್ವದಲ್ಲೇ ಕೊರೊನಾ ಸೋಂಕಿತರು ಗರಿಷ್ಠ ಪ್ರಮಾಣ, ಹೊಸ ಪ್ರಕರಣಗಳು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...