ಭಟ್ಕಳ : ತನ್ನ ಮೋಜು ಮಸ್ತಿಗಾಗಿ ಮಾಡಿರುವ ಸಾಲ ತಿರುಸುವ ಸಲುವಾಗಿ ದೇವರ ಅಭರಣ ಕದ್ದ ಅರ್ಚಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ಭಟ್ಕಳ ತಾಲೂಕಿನ ಮುಂಡಳ್ಳಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿನ ದೇವಈ ಗರ್ಭಗುಡಿಯಲ್ಲಿದ್ದ ಚಿನ್ನಾಭರಣ ನಾಪತ್ತೆದ ಪ್ರಕರಣವನ್ನು ಭಟ್ಕಳ ಪೊಲೀಸರು ಭೇದಿಸಿದ್ದು.ಆರೋಪಿ ಅರ್ಚಕನನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿ ಸತೀಶ ರಾಮಚಂದ್ರ ಭಟ್ ಈತ ಜೂಜು ಕೊರನಾಗಿದ್ದು ತಾನು ಮಾಡಿರುವ ಜೂಜಾತದ ಸಾಲ ತೀರಿಸಲು ಈ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಆರೋಪಿ ಇಲ್ಲಿತನಕ ಯಲ್ಲಾಪುರ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು. ಎಲ್ಲಾ ಕಡೆಗಳಲ್ಲಿ ಸಾಲ ಮಾಡಿದ್ದು. ಸಾಲಗಾರರು ಈತ ಭಟ್ಕಳದಲ್ಲಿರುವ ವಿಳಾಸ ತಿಳಿದು ಹುಡುಕಿಕೊಂಡು ಬಂದಿದ್ದರು ಎನ್ನಲಾಗಿದೆ. ಈತ ಒನ್ಲೈನ್ ಜೂಜು, ಮೋಜು ಮಸ್ತಿಗೆ ದಾಸನಾಗಿದ್ದು. ಈ ಹಿಂದೆ ಅನೇಕರ ಬಳಿ ಕೈ ಸಾಲ ಮಾಡಿದ್ದ ಎನ್ನಲಾಗಿದೆ.
ತನ್ನ ಸಾಲವನ್ನು ಮರುಪಾವತಿ ಮಾಡಲು ದೇವಸ್ಥಾನದ ಚಿನ್ನಾಭರಣ ಕದ್ದು ಯಲ್ಲಾಪುರದ ಫೈನಾನ್ಸ್ ಒಂದರಲ್ಲಿ ಬೇರೆಯವರ ಹೆಸರಿನಲ್ಲಿಟ್ಟು ಹಣ ಪಡೆದಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈತ ಕಳೆದ ಜೂನ್ ತಿಂಗಳಲ್ಲೇ ದೇವಸ್ಥಾನದ ಪೀಠದ ಹಿಂಬದಿಯ ಟ್ರಂಕನಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದು. ಸಾಲಗಾರರ ಕಾಟ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆ ಆಗಸ್ಟ್ ನಲ್ಲಿ ಚಿನ್ನವನ್ನು ಸಾಗಿಸಿದ್ದ ಎನ್ನಲಾಗಿದೆ. ಲಾಕ್ ದೌನ್ ಸಂದರ್ಭ ಮತ್ತು ದೇವಸ್ಥಾನದಲ್ಲಿ ಕೋವಿಡ್ ಹಿನ್ನೆಲೆ ಪೂಜೆ ಹಾಗೂ ಸೇವೆ ನಿಷೇಧ ಇರುವುದನ್ನು ಬಳಸಿಕೊಂಡ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.
ಈತನ ಬಗ್ಗೆ ಚಿತ್ರದುರ್ಗಾ, ಬೆಂಗಳೂರು, ತುಮಕೂರು, ಮುಂತಾದ ಕಡೆ ಜಾಲಾಡಿ ಪೊಲೀಸರು ಅಂತಿಮವಾಗಿ ಸಾಗರ ಬಸ್ ನಿಲ್ದಾಣದಲ್ಲಿ ಬೇರೆ ಊರಿಗೆ ಹೋಗಲು ಸಂಚು ರೂಪಿಸಿದವನನ್ನು ಹಿಡಿದು ಭಟ್ಕಳಕ್ಕೆ ಕರೆತಂದಿದ್ದಾರೆ
Leave a Comment