
ಹಳಿಯಾಳ:- ಪಶ್ಚಿಮ ಪದವೀಧರ ಕ್ಷೇತ್ರದ ಪದವಿಧರ
ಮತದಾರರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ ಅಭ್ಯರ್ಥಿ
ಎಸ್.ವಿ.ಸಂಕನೂರು ಸೋಲು ನಿಶ್ಚಿತವಾಗಿದ್ದು ಈ ಬಾರಿ ಮತದಾರರು
ಬದಲಾವಣೆ ಬಯಸಿದ್ದು ಕಾಂಗ್ರೇಸ್ ಅಭ್ಯರ್ಥಿ ಆರ್ ಎಂ ಕುಬೇರಪ್ಪ
ಪರ ಒಲುವು ತೊರಿಸುತ್ತಿರುವುದರಿಂದ ಕುಬೇರಪ್ಪ ಗೆಲುವು
ದಾಖಲಿಸಲಿದ್ದಾರೆಂದು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್
ಸದಸ್ಯ ಎಸ್.ಎಲ್.ಘೊಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯ
ಹಿನ್ನೆಲೆ ಹಳಿಯಾಳದ ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾದ
ಮತಗಟ್ಟೆ ಸಂಖ್ಯೆ 110 ರಲ್ಲಿ ಮತದಾನ ಮಾಡಿ
ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರದ ವೈಫಲ್ಯಗಳು ಇಂದು ಪದವಿಧರರ
ಮತದಾರರನ್ನು ಅಭಿವೃದ್ದಿ ಪರ ಇರುವ ಕಾಂಗ್ರೇಸ್ ಪಕ್ಷದ
ಅಭ್ಯರ್ಥಿಯ ಪರ ಇದ್ದು ಕುಬೇರಪ್ಪ ಅವರು ನಿಶ್ಚಿತವಾಗಿ
ಗೆಲುವು ಸಾಧಿಸಲಿದ್ದಾರೆಂದರು.

Leave a Comment