• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ಯಾಕೇಜಿಂಗ್‌ ಗೆ ಕಡ್ಡಾಯವಾಗಿ ಸೆಣಬು ಚೀಲಗಳ ಬಳಕೆ ನಿಯಮಗಳ ವಿಸ್ತರಣೆಗೆ ಸಚಿವ ಸಂಪುಟದ ಅನುಮೋದನೆ

October 30, 2020 by Sachin Hegde Leave a Comment

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿಯು, ಶೇ. 100ರಷ್ಟು ಆಹಾರ ಧಾನ್ಯಗಳು ಮತ್ತು ಶೇ 20ರಷ್ಟು ಸಕ್ಕರೆಯನ್ನು ಕಡ್ಡಾಯವಾಗಿ ವೈವಿಧ್ಯಮಯ ಸೆಣಬಿನ ಚೀಲಗಳ ಬಳಕೆಗೆ ಅನುಮೋದನೆ ನೀಡಿದೆ.
ಸಕ್ಕರೆಯನ್ನು ವೈವಿದ್ಯಮಯ ಸೆಣಬಿನ ಚೀಲಗಳಲ್ಲಿ ಪ್ಯಾಕೇಜಿಂಗ್‌ ನಿರ್ಧಾರವು ವೈವಿಧ್ಯತೆಯ ಸೆಣಬು ಕೈಗಾರಿಕೆಗೆ ಚೈತನ್ಯ ನೀಡುತ್ತದೆ. ಜೊತೆಗೆ, ಆಹಾರ ಧಾನ್ಯಗಳನ್ನು ಪೊಟ್ಟಣ ಮಾಡಲು ಆರಂಭದಲ್ಲಿ ಸೆಣಬಿನ ಚೀಲಗಳ ಇಂಡೆಂಟ್ ಗಳಲ್ಲಿ ಶೇ.10ನ್ನು ಜೆಮ್ ಪೋರ್ಟಲ್‌ ನಲ್ಲಿ ವ್ಯತಿರಿಕ್ತ ಹರಾಜಿನ ಮೂಲಕ ಇಡಬೇಕೆಂದು ನಿರ್ಧಾರ ಆದೇಶಿಸುತ್ತದೆ. ಇದು ಕ್ರಮೇಣ ಬೆಲೆ ಆವಿಷ್ಕಾರದ ಆಡಳಿತಕ್ಕೆ ಕಾರಣವಾಗುತ್ತದೆ. ಸೆಣಬಿನ ಪ್ಯಾಕೇಜಿಂಗ್ ಮೆಟೀರಿಯಲ್ (ಜೆಪಿಎಂ) ಕಾಯ್ದೆ, 1987ರ ಅಡಿಯಲ್ಲಿ ಕಡ್ಡಾಯ ಪ್ಯಾಕೇಜಿಂಗ್‌ ಮಾನದಂಡಗಳ ವ್ಯಾಪ್ತಿಯನ್ನು ಸರ್ಕಾರ ವಿಸ್ತರಿಸಿದೆ.

ಸೆಣಬು ಚೀಲ


ಪೊಟ್ಟಣ ಮಾಡುವ ಸೆಣಬು ವಸ್ತುವಿನಲ್ಲಿ ಯಾವುದೇ ರೀತಿಯ ಕೊರತೆ ಅಥವಾ ಪೂರೈಕೆಯಲ್ಲಿ ಅಡಚಣೆ ಇದ್ದಲ್ಲಿ ಅಥವಾ ಇನ್ನಾವುದೇ ಆಕಸ್ಮಿಕ/ ತುರ್ತು ಇದ್ದಲ್ಲಿ, ಜವಳಿ ಸಚಿವಾಲಯವು ಬಳಕೆದಾರ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಈ ನಿಬಂಧನೆಯನ್ನು ಉತ್ಪಾದನೆಯ ಗರಿಷ್ಠ ಶೇ.30ವರೆಗೆ ಆಹಾರ ಧಾನ್ಯಗಳ ನಿಬಂಧನೆಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸಡಿಲ ಮಾಡಬಹುದಾಗಿರುತ್ತದೆ.
3.7 ಲಕ್ಷ ಕಾರ್ಮಿಕರು ಮತ್ತು ಹಲವು ಲಕ್ಷ ರೈತ ಕುಟುಂಬಗಳ ಜೀವನೋಪಾಯ ಈ ಸೆಣಬು ವಲಯದ ಮೇಲೆ ಅವಲಂಬಿತವಾಗಿರುವುದನ್ನು ಪರಿಗಣಿಸಿ, ಸರ್ಕಾರ ಸೆಣಬು ವಲಯದ ಅಭಿವೃದ್ಧಿಗೆ ಕಚ್ಚಾ ಸೆಣಬಿನ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಸೆಣಬು ವಲಯದ ವೈವಿಧ್ಯೀಕರಣ ಮತ್ತು ಸೆಣಬಿನ ಉತ್ಪನ್ನಗಳಿಗೆ ಬೇಡಿಕೆಯನ್ನು ಹೆಚ್ಚಿಸುವುದು ಮತ್ತು ಉಳಿಸುವುದು ಸೇರಿದಂತೆ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ.
ಪ್ರಯೋಜನಗಳು:
ಈ ಅನುಮೋದನೆ ದೇಶದ ಪೂರ್ವ ಮತ್ತು ಈಶಾನ್ಯ ವಲಯದಲ್ಲಿ ವಾಸಿಸುತ್ತಿರುವ ರೈತರು ಮತ್ತು ಕಾರ್ಮಿಕರಿಗೆ ಅದರಲ್ಲೂ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಅಸ್ಸಾಂ, ಆಂಧ್ರಪ್ರದೇಶ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಿಗೆ ಪ್ರಯೋಜನಕಾರಿಯಾಗಿದೆ.
ಸೆಣಬಿನ ಚೀಲಗಳಲ್ಲಿ ಸಾಮಗ್ರಿಗಳ (ಪ್ಯಾಕಿಂಗ್ ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ, 1987 (ಇನ್ನು ಮುಂದೆ “ಜೆಪಿಎಂ ಕಾಯಿದೆ”) ಅಡಿಯಲ್ಲಿ, ಕೆಲವು ಸರಕುಗಳ ಪೂರೈಕೆ ಮತ್ತು ವಿತರಣೆಯಲ್ಲಿ ಸೆಣಬಿನ ಪೊಟ್ಟಣೀಕರಣ ವಸ್ತುಗಳನ್ನು ಕಡ್ಡಾಯವಾಗಿ ಬಳಸುವುದನ್ನು ಕಚ್ಚಾ ಸೆಣಬಿನ ಮತ್ತು ಸೆಣಬಿನ ಪೊಟ್ಟಣೀಕರಣ ವಸ್ತುಗಳ ಉತ್ಪಾದನೆಯ ಆಸಕ್ತಿ ಮತ್ತು ಅದರ ಉತ್ಪಾದನೆಯಲ್ಲಿ ತೊಡಗಿರುವ ವ್ಯಕ್ತಿಗಳ ಹೀತಾಸಕ್ತಿಯನ್ನು ಸರ್ಕಾರವು ಪರಿಗಣಿಸಬೇಕು ಮತ್ತು ಒದಗಿಸಬೇಕು. ಆದ್ದರಿಂದ ಪ್ರಸಕ್ತ ಪ್ರಸ್ತಾಪದಲ್ಲಿನ ಈ ನಿಯಮಗಳ ಪರಿಷ್ಕರಣೆಯು ಭಾರತದಲ್ಲಿ ಸೆಣಬು ಪ್ಯಾಕೇಜಿಂಗ್‌ ವಸ್ತುಗಳ ಮತ್ತು ಕಚ್ಚಾ ಸೆಣಬಿನ ದೇಶೀಯ ಉತ್ಪಾದನೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ, ಆ ಮೂಲಕ ಭಾರತವನ್ನು ಆತ್ಮ ನಿರ್ಭರತ ಭಾರತದ ದೃಷ್ಟಿಕೋನದಡಿ ಸ್ವಾವಲಂಬಿಯನ್ನಾಗಿಸುತ್ತದೆ.
ಸೆಣಬಿನ ಕೈಗಾರಿಕೆ ಪ್ರಧಾನವಾಗಿ ಸರ್ಕಾರಿ ವಲಯದ ಮೇಲೆ ಅವಲಂಬಿತವಾಗಿದೆ, ಇದು ಆಹಾರ ಧಾನ್ಯಗಳನ್ನು ಪೊಟ್ಟಣ ಮಾಡಲು ಪ್ರತಿ ವರ್ಷ 7,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸೆಣಬಿನ ಚೀಲಗಳನ್ನು ಖರೀದಿ ಮಾಡುತ್ತದೆ. ಸೆಣಬಿನ ವಲಯದ ಪ್ರಮುಖ ಬೇಡಿಕೆಯನ್ನು ಉಳಿಸಿಕೊಳ್ಳಲು ಮತ್ತು ಈ ವಲಯವನ್ನು ಅವಲಂಬಿಸಿರುವ ಕಾರ್ಮಿಕರು ಮತ್ತು ರೈತರ ಜೀವನೋಪಾಯಕ್ಕೆ ಬೆಂಬಲಿಸುವ ಸಲುವಾಗಿ ಇದನ್ನು ಮಾಡಲಾಗುತ್ತಿದೆ.
ಸೆಣಬು ವಲಯಕ್ಕೆ ಒದಗಿಸಲಾದ ಇತರ ನೆರವು:
ಕಚ್ಚಾ ಸೆಣಬಿನ ಉತ್ಪಾದಕತೆ ಮತ್ತು ಗಣಮಟ್ಟವನ್ನು ಹೆಚ್ಚಿಸುವ ಸಲುವಾಗಿ, ಜಾಗರೂಕತೆಯಿಂದ ರೂಪಿಸಿದ ಜೂಟ್ ಐಕೇರ್ ಎಂಬ ಮಧ್ಯಸ್ಥಿಕೆಯೊಂದಿಗೆ ಸರ್ಕಾರ ಸೀಡ್ ಡ್ರಿಲ್‌ ಗಳನ್ನು ಬಳಸಿಕೊಂಡು ಸಾಲು ಬಿತ್ತನೆ, ವೀಲ್ ಹೋಯಿಂಗ್ ಮತ್ತು ನೈಲ್ ವೀಡರ್ಸ್ ಬಳಸಿಕೊಂಡು ಕಳೆ ನಿರ್ವಹಣೆ ಮೂಲಕ, ಗುಣಮಟ್ಟದ ಪ್ರಮಾಣೀಕೃತ ಬೀಜಗಳ ವಿತರಣೆ ಮತ್ತು ಸೂಕ್ಷ್ಮಜೀವಿಯ ನೆರವಿನ ಹಿಮ್ಮೆಟ್ಟಿಸುವಿಕೆಯನ್ನು ಒದಗಿಸುವಂತಹ ಸುಧಾರಿತ ಸಾವಯವ ಕೃಷಿ ಪದ್ಧತಿಗಳನ್ನು ಪ್ರಸಾರ ಮಾಡುವ ಮೂಲಕ ಎರಡು ಲಕ್ಷ ಸೆಣಬು ಬೆಳೆಗಾರ ರೈತರಿಗೆ ನೆರವಾಗುತ್ತಿದೆ. ಈ ಮಧ್ಯಸ್ಥಿಕೆಗಳು ಕಚ್ಚಾ ಸೆಣಬಿನ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಮತ್ತು ಸೆಣಬಿನ ರೈತರ ಆದಾಯವನ್ನು ಹೆಕ್ಟೇರ್‌ಗೆ 10,000 ರೂ ಹೆಚ್ಚಿಸುತ್ತಿವೆ.
ಇತ್ತೀಚೆಗೆ, ಭಾರತೀಯ ಸೆಣಬು ನಿಗಮ, ರಾಷ್ಟ್ರೀಯ ಬೀಜ ನಿಗಮದೊಂದಿಗೆ 10,000 ಕ್ವಿಂಟಾಲ್ ಪ್ರಮಾಣೀಕೃತ ಬೀಜಗಳನ್ನು ವಾಣಿಜ್ಯ ಆಧಾರದ ಮೇಲೆ ವಿತರಿಸಲು ಒಪ್ಪಂದ ಮಾಡಿಕೊಂಡಿದೆ. ತಂತ್ರಜ್ಞಾನದ ಉನ್ನತೀಕರಣ ಮತ್ತು ಪ್ರಮಾಣೀಕೃತ ಬೀಜಗಳ ವಿತರಣೆಯ ಮಧ್ಯಸ್ಥಿಕೆಯು ಸೆಣಬಿನ ಬೆಳೆಗಳ ಉತ್ಪಾದಕತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರೈತರ ಆದಾಯವನ್ನೂ ಹೆಚ್ಚಿಸುತ್ತದೆ.
ಸೆಣಬಿನ ಕ್ಷೇತ್ರದ ವೈವಿಧ್ಯೀಕರಣವನ್ನು ಬೆಂಬಲಿಸುವ ಉದ್ದೇಶದಿಂದ, ರಾಷ್ಟ್ರೀಯ ಸೆಣಬು ಮಂಡಳಿಯು ರಾಷ್ಟ್ರೀಯ ವಿನ್ಯಾಸ ಸಂಸ್ಥೆಯೊಂದಿಗೆ ಸಹಕರಿಸುತ್ತಿದ್ದು ಗಾಂಧಿನಗರದಲ್ಲಿ ಸೆಣಬಿನ ವಿನ್ಯಾಸ ಕೋಶವನ್ನು ತೆರೆಯಲಾಗಿದೆ. ಇದಲ್ಲದೆ, ಸೆಣಬಿನ ಜಿಯೋ ಜವಳಿ ಮತ್ತು ಕೃಷಿ-ಜವಳಿಗಳ ಪ್ರಚಾರವನ್ನು ವಿಶೇಷವಾಗಿ ಈಶಾನ್ಯ ವಲಯದ ರಾಜ್ಯ ಸರ್ಕಾರಗಳೊಂದಿಗೆ ಮತ್ತು ರಸ್ತೆ ಸಾರಿಗೆ ಸಚಿವಾಲಯ ಮತ್ತು ಜಲಸಂಪನ್ಮೂಲ ಸಚಿವಾಲಯದಂತಹ ಇಲಾಖೆಗಳೊಂದಿಗೆ ಕೈಗೆತ್ತಿಕೊಳ್ಳಲಾಗಿದೆ.
ಸೆಣಬು ವಲಯದಲ್ಲಿ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತ ಸರ್ಕಾರ 2017 ರ ಜನವರಿ 5 ರಿಂದ ಜಾರಿಗೆ ಬರುವಂತೆ ಬಾಂಗ್ಲಾದೇಶ ಮತ್ತು ನೇಪಾಳದಿಂದ ಆಮದು ಮಾಡಿಕೊಳ್ಳುವ ಸೆಣಬಿನ ಸರಕುಗಳ ಮೇಲೆ ಡೆಫಿನಿಟ್ಯು ಆಂಟಿ ಡಂಪಿಂಗ್ ಡ್ಯೂಟಿ ವಿಧಿಸಿದೆ.
ಸೆಣಬು ವಲಯದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಜ್ಯೂಟ್ ಸ್ಮಾರ್ಟ್, ಇ-ಗೌರ್ನಮೆಂಟ್ ಉಪಕ್ರಮವನ್ನು ಡಿಸೆಂಬರ್, 2016ರಲ್ಲಿ ಪ್ರಾರಂಭಿಸಲಾಯಿತು, ಇದು ಸರ್ಕಾರಿ ಸಂಸ್ಥೆಗಳಿಂದ ಬಿ-ಟಿ ವಜಾ ಮಾಡುವಿಕೆಯ ಸಮಗ್ರ ವೇದಿಕೆಯನ್ನು ಒದಗಿಸುತ್ತದೆ. ಜೊತೆಗೆ ಜೆಸಿಐ ಸೆಣಬು ಬೆಳೆಗಾರ ರೈತರಿಗಾಗಿ ಎಂ.ಎಸ್.ಪಿ. ಮತ್ತು ವಾಣಿಜ್ಯ ಕಾರ್ಯಾಚರಣೆಗಳ ಅಡಿ ಆನ್ ಲೈನ್ ಸೆಣಬು ದಾಸ್ತಾನಿಗಾಗಿ ಶೇ.100ರಷ್ಟು ನಿಧಿಯನ್ನು ಪರಿವರ್ತಿಸುತ್ತಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, ಕೃಷಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...