• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ

October 31, 2020 by Sachin Hegde Leave a Comment

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ವನ್ಯಮೃಗಗಳ ಉದ್ಯಾನ ಮತ್ತು ಭೂಮಿಯಂತೆ ಗೋಳಾಕಾರದ ಪಂಜರ ಉದ್ಘಾಟಿಸಿದರು. ಕೆವಾಡಿಯಾ ಸಮಗ್ರ ಅಭಿವೃದ್ಧಿ ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಪಥದರ್ಶಕ ಕಾಲುವೆ, ನೂತನ ಗೋರಾ ಸೇತುವೆ, ಗರುಡೇಶ್ವರ್ ಅಣೆಕಟ್ಟು, ಸರ್ಕಾರಿ ವಸತಿಗೃಹಗಳು, ಬಸ್ ಬೇ ಟರ್ಮಿನಸ್, ಏಕತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, ಬುಡಕಟ್ಟು ಹೋಂ ಸ್ಟೇ ಸೇರಿವೆ. ಜೊತೆಗೆ ಪ್ರಧಾನಿ ಏಕತಾ ಪ್ರತಿಮೆವರೆಗಿನ ಏಕತಾ ಕ್ರ್ಯೂಸ್ ಸೇವೆಗೂ ಹಸಿರು ನಿಶಾನೆ ತೋರಿದರು.

The Fly High Indian Aviary would be a treat for those interested in birdwatching. Come to Kevadia and visit this aviary, which is a part of the Jungle Safari Complex. It will be a great learning experience. pic.twitter.com/RiZjDTcfOx

— PMO India (@PMOIndia) October 30, 2020

ಜಂಗಲ್ ಸಫಾರಿ ಮತ್ತು ಭೂಮಿಯಂತೆ ಗೋಳಾಕಾರಣ ಪಂಜರ

“ಎತ್ತರಕ್ಕೆ ಹಾರಿ ಗೋಳಾಕಾರದ ಪಂಜರ, ಪಕ್ಷಿಗಳ ವೀಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಒಂದು ತಾಣವಾಗಿದೆ. ಕೆವಾಡಿಯಾಕ್ಕೆ ಬಂದು ಜಂಗಲ್ ಸಫಾರಿ ಸಮುಚ್ಛಯದ ಒಂದು ಭಾಗವಾಗಿರುವ ಈ ಪಂಜರಕ್ಕೆ ಭೇಟಿ ನೀಡಿ. ಇದು ಉತ್ತಮ ಕಲಿಕೆಯ ಅನುಭವವಾಗಿರುತ್ತದೆ.” ಎಂದು ಪ್ರಧಾನಮಂತ್ರಿ ಹೇಳಿದರು.
ಜಂಗಲ್ ಸಫಾರಿ ಅತ್ಯಾಧುನಿಕ ಪ್ರಾಣಿಗಳ ಉದ್ಯಾನವಾಗಿದ್ದು, 375 ಎಕರೆ ಪ್ರದೇಶದಲ್ಲಿ 29ರಿಂದ 180 ಮೀಟರ್ ವರೆಗಿನ ಎತ್ತರದ ಏಳು ವಿವಿಧ ಹಂತಗಳ ಶ್ರೇಣಿಯನ್ನೊಳಗೊಂಡಿದೆ. ಇದರಲ್ಲ 1100 ಹಕ್ಕಿಗಳು ಮತ್ತು ಪ್ರಾಣಿಗಳು ಹಾಗೂ 5 ಲಕ್ಷ ಗಿಡಮರಗಳಿವೆ. ಇದು ಅತ್ಯಂತ ವೇಗವಾಗಿ ನಿರ್ಮಿಸಲಾದ ಜಂಗಲ್ ಸಫಾರಿಯಾಗಿದೆ. ಪ್ರಾಣಿಗಳ ಉದ್ಯಾನದಲ್ಲಿ ಎರಡು ಪಂಜರಗಳಿವೆ – ಒಂದರಲ್ಲಿ ದೇಶೀಯ ಹಕ್ಕಿಗಳಿದ್ದರೆ ಮತ್ತೊಂದರಲ್ಲಿ ವಿಶಿಷ್ಟ ಪಕ್ಷಿಗಳಿವೆ. ಇದು ವಿಶ್ವದ ಅತಿ ದೊಡ್ಡ ಭೂಮಿಯಾಕಾರದ ಪಕ್ಷಿ ಪಂಜರವಾಗಿದೆ. ಈ ಪಂಜರಗಳು ಸಾಕುಪಕ್ಷಿ ವಲಯದಿಂದ ಸುತ್ತುವರಿದಿದ್ದು, ಇಲ್ಲಿ ಮಕಾವ್, ಕಾಕಟೂ, ವಿವಿಧ ಜಾತಿಯ ಮೊಲ ಮುಂತಾದ ಪ್ರಾಣಿ ಪಕ್ಷಿಗಳನ್ನು ಎತ್ತಿ ಮುದ್ದಾಡುವ ವಿಶಿಷ್ಟ ಸ್ಪರ್ಶಾವಕಾಶವಿದೆ ಮತ್ತು ಆಹ್ಲಾದಕರ ಅನುಭವವನ್ನು ನೀಡುತ್ತದೆ.

ಏಕತಾ ಕ್ರ್ಯೂಸ್ ಸೇವೆ
ಏಕತಾ ಕ್ರೂಸ್ ಸೇವೆಯಲ್ಲಿ ಶ್ರೇಷ್ಠ ಭಾರತ್ ಭವನದಿಂದ ಏಕತಾ ಪ್ರತಿಮೆವರೆಗೆ 6 ಕಿ.ಮೀ ದೂರವನ್ನು ಕ್ರಮಿಸಿ ದೋಣಿಯಿಂದ ಏಕತಾ ಪ್ರತಿಮೆಯನ್ನು ವೀಕ್ಷಿಸುವ ಅನುಭವ ಪಡೆಯಬಹುದು. 40 ನಿಮಿಷಗಳ ದೋಣಿ ವಿಹಾರ ಇದಾಗಿದ್ದು, ಫೆರ್ರಿ ಏಕಕಾಲದಲ್ಲಿ 200 ಪ್ರಯಾಣಿಕರನ್ನು ಕರೆದೊಯ್ಯಬಲ್ಲುದಾಗಿದೆ. ದೋಣಿ ಸೇವೆಯ ಕಾರ್ಯಾಚರಣೆಗಾಗಿ ಹೊಸ ಗೋರಾ ಸೇತುವೆಯನ್ನು ನಿರ್ಮಿಸಲಾಗಿದೆ. ಏಕತಾ ಪ್ರತಿಮೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಬೋಟಿಂಗ್ ಸೇವೆಗಳನ್ನು ಒದಗಿಸಲು ಬೋಟಿಂಗ್ ಕಾಲುವೆ ನಿರ್ಮಿಸಲಾಗಿದೆ.

Elk1v8yXEAAkmPz

Elk1v8tW0AM1A6D

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending Tagged With: 4 new projects, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ, Animal Park, Cages, Ekta Cruise Service, Jungle Safari, Jungle Safari india, Kevadia Comprehensive Development, Sardar Vallabhbhai Patel Wildlife Park, Statue, Under 17 projects, ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, ಏಕತಾ ಕ್ರ್ಯೂಸ್ ಸೇವೆ, ಏಕತಾ ಪ್ರತಿಮೆ, ಕೆವಾಡಿಯಾ ಸಮಗ್ರ ಅಭಿವೃದ್ಧಿ, ಜಂಗಲ್ ಸಫಾರಿಯಾಗಿದೆ, ಪಂಜರಗಳಿವೆ, ಪ್ರಾಣಿಗಳ ಉದ್ಯಾನದಲ್ಲಿ, ಭೂಮಿಯಂತೆ ಗೋಳಾಕಾರದ ಪಂಜರ, ವನ್ಯಮೃಗಗಳ ಉದ್ಯಾನ, ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...