ವರದಿ :- ಯೋಗರಾಜ.ಎಸ್.ಕೆ.
ಹಳಿಯಾಳ:- ಹಳಿಯಾಳ ಪುರಸಭೆಯಲ್ಲಿ ಕಾಂಗ್ರೇಸ್ ಪಕ್ಷ ಆಡಳಿತ ಮಂಡಳಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಮತ್ತೋಮ್ಮೆ ಹಳಿಯಾಳ ಕ್ಷೇತ್ರ ಕಾಂಗ್ರೇಸ್‍ನ ಭದ್ರಕೋಟೆಯಾಗಿದೆ ಎಂದು ಸಾಬಿತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹೇಳಿದರು.

ಇಲ್ಲಿಯ ಪುರಸಭಾ ಭವನದಲ್ಲಿ ನೂತನ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಹಾಗೂ ಉಪಾಧ್ಯಕ್ಷೆ ಸುವರ್ಣಾ ಮಾದರ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ ಕ್ಷೇತ್ರದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಸೋಲು ಅನುಭವಿಸುತ್ತಿದೆ. ಬಿಜೆಪಿಯ ಸ್ಥಳೀಯ ನಾಯಕರ ಅಸಮರ್ಥತೆಗೆ ಇದು ಸಾಕ್ಷೀಯಾಗಿದೆ. ಮುಂದೆಯೂ ಕಾಂಗ್ರೇಸ್ ಎಲ್ಲೆಡೆ ವಿಜಯದ ಪತಾಕೆ ಹಾರಿಸಲಿದೆ ಅಲ್ಲದೇ ಕಾಂಗ್ರೇಸ್ ಎಲ್ಲೆಡೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು ಕಾಂಗ್ರೇಸ್ ತನ್ನ ಶಕ್ತಿಯನ್ನು ವಿರೋಧಿಗಳಿಗೆ ಮನವರಿಕೆ ಮಾಡುತ್ತಿದೆ ಎಂದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆಯಿಂದ, ಪಕ್ಷಾತೀತವಾಗಿ ಎಲ್ಲರ ಕೆಲಸಗಳನ್ನು ಮಾಡಲಿ, ಮೇಲಾಗಿ ಬಡವರ, ಹಿಂದೂಳಿದವರ ಕಷ್ಟಗಳಿಗೆ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಕರೆ ನೀಡಿದ ಘೊಟ್ನೇಕರ ಪಟ್ಟಣದಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಲಿ, ಆಶ್ರಯ ಮನೆಗಳ ಬಗ್ಗೆ ಗಮನ ಹರಿಸಲಿ, ಕೊಳಚೆ ಪ್ರದೇಶಗಳ ಅಭಿವೃದ್ದಿಗೆ ಮುಂದಾಗಲಿ ಎಂದು ಸಲಹೆ ನೀಡಿದರು.

155 ವರ್ಷಗಳ ಇತಿಹಾಸ ಹೊಂದಿರುವ ಹಳಿಯಾಳ ಪುರಸಭೆಯ ಹೆಸರಿಗೆ ಕಳಂಕ ತರದಂತೆ ಪ್ರಮಾಣಿಕವಾಗಿ ತಮಗೆ ನೀಡಿರುವ ಜವಾಬ್ದಾರಿ ನಿರ್ವಹಿಸಲಿ ಹಾಗೂ ಪಕ್ಷಾತೀತವಾಗಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಿ ಎಂದು ಘೋಟ್ನೇಕರ ಅವರು ಕರೆ ನೀಡಿದರು.
ಈವರೆಗೆ ಕೆಲಸ ಮಾಡಿದ ಎಲ್ಲ ಆಡಳಿತ ಮಂಡಳಿ ಉತ್ತಮ ಕಾರ್ಯ ನಿರ್ವಹಿಸಿದ್ದು ಈಗಿನ ನೂತನ ಕಾಂಗ್ರೇಸ್ ಆಡಳಿತ ಮಂಡಳಿಯೂ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Leave a Comment