• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

2020 ರ ಅಕ್ಟೋಬರ್ ತಿಂಗಳಲ್ಲಿ 1,05,155 ಕೋಟಿ ರೂ. ಒಟ್ಟು ಜಿಎಸ್ಟಿ ಸಂಗ್ರಹ

November 4, 2020 by Sachin Hegde Leave a Comment

2020 ರ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,05,155 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 19,193 ಕೋಟಿ ರೂ., ರಾಜ್ಯ ಜಿಎಸ್‌ಟಿ 25,411 ಕೋಟಿ ರೂ., ಐಜಿಎಸ್‌ಟಿ 52,540 ಕೋಟಿ ರೂ. (ಸರಕುಗಳ ಆಮದಿನಿಂದ ಸಂಗ್ರಹಿಸಿದ 23375 ಕೋಟಿ ರೂ.ಸೇರಿದಂತೆ) ಮತ್ತು ಸೆಸ್ 8,011 ಕೋಟಿ ರೂ. (ಸರಕುಗಳ ಆಮದಿನಿಂದ ಸಂಗ್ರಹಿಸಿದ 932 ಕೋಟಿ ರೂ. ಸೇರಿದಂತೆ) ಗಳಾಗಿದೆ. 2020 ರ ಅಕ್ಟೋಬರ್ 31 ರವರೆಗೆ ಅಕ್ಟೋಬರ್ ತಿಂಗಳಿಗಾಗಿ ಸಲ್ಲಿಸಲಾದ ಒಟ್ಟು ಜಿ ಎಸ್ ಟಿ ಆರ್ -3 ಬಿ ರಿಟರ್ನ್ಸ್ ಸಂಖ್ಯೆ 80 ಲಕ್ಷವಾಗಿದೆ.
ಕೇಂದ್ರ ಜಿಎಸ್‌ಟಿಗೆ 25,091 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 19,427 ಕೋಟಿ ರೂ.ಗಳನ್ನು ಐಜಿಎಸ್‌ಟಿಯಿಂದ ನಿಯಮಿತ ಇತ್ಯರ್ಥವಾಗಿ ಸರ್ಕಾರ ಇತ್ಯರ್ಥಪಡಿಸಿದೆ. 2020 ರ ಅಕ್ಟೋಬರ್ ತಿಂಗಳಲ್ಲಿ ನಿಯಮಿತ ಇತ್ಯರ್ಥದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಕೇಂದ್ರ ಜಿಎಸ್‌ಟಿಗೆ 44,285 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 44,839 ಕೋಟಿ ರೂ. ಗಳಾಗಿದೆ.
ಕಳೆದ ವರ್ಷದ ಇದೇ ತಿಂಗಳಲ್ಲಿ ಇದ್ದ ಜಿಎಸ್‌ಟಿ ಆದಾಯಕ್ಕಿಂತ ಈ ವರ್ಷದ ಆದಾಯ ಶೇ.10 ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಬಂದ ಆದಾಯಕ್ಕೆ ಹೋಲಿಸಿದರೆ ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇ.9 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಶೇ.11 ರಷ್ಟು ಹೆಚ್ಚಾಗಿದೆ. 2020 ರ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಿಗೆ ಹೋಲಿಸಿದರೆ ಜಿಎಸ್ಟಿ ಆದಾಯದ ಬೆಳವಣಿಗೆಯು ಕ್ರಮವಾಗಿ -14%, -8% ಮತ್ತು 5% ನಷ್ಟಾಗಿದ್ದು, ಇದು ಆರ್ಥಿಕತೆಯ ಚೇತರಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ಆದಾಯ ಹೆಚ್ಚಳವನ್ನೂ ತೋರಿಸುತ್ತಿದೆ.
ಅಂಕಿಅಂಶಗಳು ಪ್ರಸಕ್ತ ವರ್ಷದ ಮಾಸಿಕ ಒಟ್ಟು ಜಿಎಸ್‌ಟಿ ಆದಾಯದ ಪ್ರವೃತ್ತಿಯನ್ನು ತೋರಿಸುತ್ತವೆ. ಅಕ್ಟೋಬರ್, 2019 ಕ್ಕೆ ಹೋಲಿಸಿದರೆ 2020 ರ ಅಕ್ಟೋಬರ್ ತಿಂಗಳಲ್ಲಿ ಮತ್ತು ಸಂಪೂರ್ಣ ವರ್ಷಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿಎಸ್‌ಟಿಯ ರಾಜ್ಯವಾರು ಅಂಕಿಅಂಶಗಳನ್ನು ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ.

gst

ಏಪ್ರಿಲ್ 2020 ರ ರಾಜ್ಯವಾರು ಜಿಎಸ್‌ಟಿ ಸಂಗ್ರಹ [1]

ರಾಜ್ಯಅಕ್ಟೋಬರ್-2019ಅಕ್ಟೋಬರ್-2020ಬೆಳವಣಿಗೆ
ಜಮ್ಮು ಮತ್ತು ಕಾಶ್ಮೀರ31337721%
ಹಿಮಾಚಲ ಪ್ರದೇಶ 6696913%
ಪಂಜಾಬ್1,1891,37616%
ಚಂಡೀಗಢ157152-3%
ಉತ್ತರಾಖಂಡ1,1531,27210%
ಹರಿಯಾಣ4,5785,43319%
ದೆಹಲಿ3,4843,211-8%
ರಾಜಸ್ಥಾನ2,4252,96622%
ಉತ್ತರ ಪ್ರದೇಶ 5,1035,4717%
ಬಿಹಾರ 9401,0107%
ಸಿಕ್ಕಿಂ 186177-5%
ಅರುಣಾಚಲ ಪ್ರದೇಶ  4198138%
ನಾಗಾಲ್ಯಾಂಡ್ 253020%
ಮಣಿಪುರ43430%
ಮಿಜೋರಾಂ 183272%
ತ್ರಿಪುರ  54575%
ಮೇಘಾಲಯ1131174%
ಅಸ್ಸಾಂ 8881,01714%
ಪಶ್ಚಿಮ ಬಂಗಾಳ3,2633,73815%
ಜಾರ್ಖಂಡ್1,4371,77123%
ಒಡಿಶಾ1,9942,41921%
ಛತ್ತೀಸ್‌ಗಢ1,5701,97426%
ಮಧ್ಯಪ್ರದೇಶ2,0532,40317%
ಗುಜರಾತ್5,8886,78715%
ದಮನ್ ಮತ್ತು ದಿಯು837-91%
ದಾದ್ರಾ ಮತ್ತು ನಗರ ಹವೇಲಿ 130283118%
ಮಹಾರಾಷ್ಟ್ರ15,10915,7995%
ಕರ್ನಾಟಕ6,6756,9985%
ಗೋವಾ3113100%
ಲಕ್ಷದ್ವೀಪ  21-55%
ಕೇರಳ1,5491,6657%

ತಮಿಳುನಾಡು6,1096,90113%
ಪುದುಚೇರಿ  14616110%
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 3219-42%
ತೆಲಂಗಾಣ3,2303,3835%
ಆಂಧ್ರಪ್ರದೇಶ1,9752,48026%
ಲಡಾಖ್ 015 
ಇತರೆ ಪ್ರದೇಶ  12791-28%
ಕೇಂದ್ರ ವ್ಯಾಪ್ತಿ  9711417%
ಒಟ್ಟು73,15980,84811%

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News Tagged With: ‌, 411 crore, 411 ಕೋಟಿ ರೂ., 540 crore, 540 ಕೋಟಿ, IGST 52, the state GST was Rs 25, the total revenue center of the state government, This year's revenues were higher than the GST, ಐಜಿಎಸ್‌ಟಿ 52, ಜಿಎಸ್‌ಟಿ ಆದಾಯಕ್ಕಿಂತ ಈ ವರ್ಷದ ಆದಾಯ, ರಾಜ್ಯ ಜಿಎಸ್‌ಟಿ 25, ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಕೇಂದ್ರ, ಸರಕುಗಳ ಆಮದಿನಿಂದ ಸಂಗ್ರಹಿಸಿದ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...