ಹಳಿಯಾಳ:- ಹುಬ್ಬಳ್ಳಿಯ ಬೈಸೈಕಲ್ ಕ್ಲಬ್ ತಂಡವು “ರಾಜ್ಯೋತ್ಸವ ಎಕ್ಸಪ್ರೇಸ್” ಘೊಷವಾಕ್ಯದಡಿ ಹುಬ್ಬಳ್ಳಿಯಿಂದ ಸೈಕಲ್ ಸವಾರಿಯ ಮೂಲಕ ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗೆ ಭಾನುವಾರ ಭೇಟಿ ನೀಡಿತು.
ಹುಬ್ಬಳ್ಳಿಯಿಂದ ಹಳಿಯಾಳ ಕೊಟೆ ಹಾಗೂ ಮತ್ತೇ ಹುಬ್ಬಳ್ಳಿಯ ವರೆಗೆ ಅಂದರೇ 100 ಕೀಮಿ ಸೈಕಲ್ ಸವಾರಿಯ 35 ಜನರ ಈ ಸೈಕ್ಲಿಂಗ್ ತಂಡಕ್ಕೆ ಹಳಿಯಾಳದ ಫಿಟ್ ಇಂಡಿಯಾ ಸೈಕ್ಲಿಂಗ್ ತಂಡದ ರೂವಾರಿ ಉದಯ ಜಾಧವ ಅವರ ನೇತೃತ್ವದಲ್ಲಿ ಹೃದಯಸ್ಪರ್ಶಿ ಸ್ವಾಗತವನ್ನು ಕೊರಲಾಯಿತು.

ಹಳಿಯಾಳದ ಶಿವಾಜಿ ಮಹಾರಾಜರ ಕಿಲ್ಲಾ ಕೋಟೆ ಪ್ರದೇಶಕ್ಕೆ ಆಗಮಿಸಿದ ಹುಬ್ಬಳ್ಳಿಯ ಸೈಕ್ಲಿಂಗ್ ತಂಡಕ್ಕೆ ಸ್ವಾಗತ ಕೊರಿದ ಹಳಿಯಾಳ ತಂಡದವರು ಅವರನ್ನು ಸನ್ಮಾನಿಸಿದರು. ಬಳಿಕ ಅವರಿಗೆ ಕಿಲ್ಲಾ ಕೋಟೆ ಪ್ರದೇಶ, ಕೊಟೆ ನಿಸರ್ಗ ಧಾಮ, ಕೊಟೆ ಮಲ್ಲೀಕಾರ್ಜುನ ದೇವಸ್ಥಾನದ ಪರಿಚಯ ಮಾಡಿಸಿಕೊಟ್ಟರು.
ಈ ಸಂದರ್ಭದಲ್ಲಿ ಈ ಭಾಗದ ಪುರಸಭಾ ಸದಸ್ಯ ಚಂದ್ರಕಾಂತ ಕಮ್ಮಾರ, ಪುರಸಭಾ ಸದಸ್ಯ ಉದಯ ಹೂಲಿ, ಹುಬ್ಬಳ್ಳಿಯ ಬೈಸೈಕಲ್ ಕ್ಲಬ್ ತಂಡದ ಸಂಚಾಲಕರಾದ ಕಿಶೋರ್ ರೈಕರ್, ಆನಂದ ಮೊಕಾಶಿ, ಹಳಿಯಾಳದ ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಪ್ರಮುಖರಾದ ಮಹೇಶ ಮಿಂಡೊಳಕರ, ನಿಖಿಲ್ ಡಾಂಗೆ, ವಿನಾಯಕ ಕಟ್ಟಿ, ಜಗದೀಶ ಉಪ್ಪಿನ, ಅಭಿರಾಂ ಐತಾಳ, ಅನೂಪ್ ಮಹಾಲಿಂಗಪೂರ,ಮಹಾಲಿಂಗೇಶ ಓಶಿಮಠ, ಕಾರ್ತಿಕ ಜಾಧವ್, ಸೂರಜ್ ಹೊನ್ನಾವರ ಮೊದಲಾದವರು ಇದ್ದರು.
Leave a Comment