ಹಳಿಯಾಳ: ರಾಜ್ಯದ ಸಹಕಾರಿ ರಂಗದಲ್ಲಿಯೇ ಅತ್ಯಂತ ಕ್ರಿಯಾಶೀಲ ಮತ್ತು ಜೀವಾಳ ಸಹಕಾರಿ ರಂಗವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷರು ಹಾಗೂ ಹಳಿಯಾಳ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವಪುತ್ರಪ್ಪ ನುಚ್ಛಂಬ್ಲಿ ಹೇಳಿದರು.

ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಶನಿವಾರ ಹಳಿಯಾಳದ ರೈತರ ಸೇವಾ ಸಹಕಾರಿ ಸಂಘದ ಕಚೇರಿಯ ಮೇಲೆ ಸಹಕಾರಿ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು. ಸಹಕಾರಿ ಸಹಭಾಗಿತ್ವದಲ್ಲಿ ಜನಸಾಮಾನ್ಯರನ್ನು ಪರಿಣಾಮಕಾರಿಯಾಗಿ ತಲಪುಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಹಕಾರ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರ್ಕಾರಗಳು ಹಲವಾರು ಸವಲತ್ತುಗಳನ್ನು ಸಂಘಗಳ ಮೂಲಕವೇ ನೀಡುತ್ತಿದ್ದು, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೈತರಿಗೆ ತಲಪಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ಸಹಕಾರಿ ರಂಗ ಯಶಸ್ವಿಯಾಗಿ ಮಾಡುತ್ತಿದೆ ಎಂದು ನುಚ್ಚಂಬ್ಲಿ ಹೇಳಿದರು.
ಈ ಸಂದರ್ಭದಲ್ಲಿ ಆರ್‍ಎಸ್ ಎಸ್ ಸೊಸೈಟಿ ನಿರ್ದೇಶಕರುಗಳಾದ ಅನಂತ ಘೊಟ್ನೇಕರ, ಮನೋಹರ ಅಂಗ್ರೊಳ್ಳಿ, ಬಸವರಾಜ ಮಡ್ಡಿ, ಲತಿಫಷಾ ಲತಿಫನವರ, ಸಂಘದ ಮ್ಯಾನೇಜರ್ ಬಸವಂತ ಪವಾರ, ಸಿಬ್ಬಂದಿಗಳು ಇದ್ದರು.

Leave a Comment