• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಗರೀಕರಣದಲ್ಲಿ ಹೂಡಿಕೆಗೆ ಭಾರತದಲ್ಲಿ ಆಕರ್ಷಕ ಅವಕಾಶ – ಹೂಡಿಕೆದಾರರಿಗೆ ಪ್ರಧಾನಿ ಆಹ್ವಾನ

November 18, 2020 by Sachin Hegde Leave a Comment

ಭಾರತದ ನಗರೀಕರಣದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೂಡಿಕೆದಾರರನ್ನು ಆಹ್ವಾನಿಸಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬ್ಲೂಮ್ ಬರ್ಗ್ ನವ ಆರ್ಥಿಕ ವೇದಿಕೆಯ 3ನೇ ವಾರ್ಷಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನೀವು ನಗರೀಕರಣದ ಹೂಡಿಕೆಯ ಅವಕಾಶಗಳನ್ನು ಎದುರು ನೋಡುತ್ತಿದ್ದರೆ, ನಿಮಗೆ ಭಾರತದಲ್ಲಿ ಆಕರ್ಷಕ ಅವಕಾಶಗಳಿವೆ.

PM Modi to address Centenary Convocation of University of Mysore today

ನೀವು ಸಂಚಾರ ವಿಭಾಗದಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿದ್ದರೆ, ಅದಕ್ಕೂ ಭಾರತದಲ್ಲಿ ಅತ್ಯಾಕರ್ಷಕ ಅವಕಾಶಗಳು ನಿಮಗಿವೆ. ನೀವು ಆವಿಷ್ಕಾರದಲ್ಲಿ ಹೂಡಿಕೆಯನ್ನು ಬಯಸುತ್ತಿದ್ದರೆ, ಅದಕ್ಕೆ ಭಾರತದಲ್ಲಿ ಆಕರ್ಷಕ ಅವಕಾಶಗಳಿವೆ. ನೀವು ಸುಸ್ಥಿರ ಪರಿಹಾರಗಳಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿದ್ದರೆ, ಅದಕ್ಕೂ ಭಾರತದಲ್ಲಿ ನಿಮಗೆ ಆಕರ್ಷಕ ಅವಕಾಶಗಳು ಲಭ್ಯವಿವೆ. ಈ ಎಲ್ಲ ಅವಕಾಶಗಳು ನಿಮಗೆ ಕ್ರಿಯಾಶೀಲ ಪ್ರಜಾಪ್ರಭುತ್ವದ ಜೊತೆ ಬರಲಿವೆ. ಈಗ ನಾವು ಭಾರತವನ್ನು ಆದ್ಯತೆಯ ಜಾಗತಿಕ ಹೂಡಿಕೆಯ ತಾಣವನ್ನಾಗಿಸುವ ನಿಟ್ಟಿನಲ್ಲಿ ಉದ್ಯಮ ಸ್ನೇಹಿ ವಾತಾವರಣ, ಬೃಹತ್ ಮಾರುಕಟ್ಟೆ ಮತ್ತು ಸರ್ಕಾರ ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ” ಎಂದರು.
ಕೋವಿಡ್ ನಂತರದ ಜಗತ್ತಿನಲ್ಲಿ ವಿಶ್ವ ಪುನರಾರಂಭವಾಗುವ ಅಗತ್ಯವಿದ್ದು, ಅದಕ್ಕೆ ಮರು ಹೊಂದಾಣಿಕೆಯಾಗದೆ ಮರು ಆರಂಭ ಸಾಧ್ಯವಿಲ್ಲ. ನಾವು ನಮ್ಮ ಮನಸ್ಥಿತಿಯನ್ನು ಮರು ಹೊಂದಿಕೆ ಮಾಡಿಕೊಳ್ಳಬೇಕು ಮತ್ತು ಅಭ್ಯಾಸಗಳು ಮತ್ತು ಪ್ರಕ್ರಿಯೆಗಳನ್ನೂ ಸಹ ಮರು ಹೊಂದಿಕೆ ಮಾಡಿಕೊಳ್ಳಬೇಕು. ಸಾಂಕ್ರಾಮಿಕ ಪ್ರತಿಯೊಂದು ವಲಯದಲ್ಲೂ ಹೊಸ ಶಿಷ್ಟಾಚಾರಗಳ ಅಭಿವೃದ್ಧಿಗೆ ಅವಕಾಶವನ್ನು ನೀಡಿದೆ. “ನಾವು ಭವಿಷ್ಯಕ್ಕಾಗಿ ಸ್ಥಿತಿ ಸ್ಥಾಪಕತ್ವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಾದರೆ ಈ ಅವಕಾಶವನ್ನು ಜಗತ್ತಿನಿಂದ ನಾವು ಕಸಿದುಕೊಳ್ಳಬೇಕಿದೆ. ಕೋವಿಡ್ ನಂತರದ ಜಗತ್ತಿನ ಅಗತ್ಯತೆಗಳ ಬಗ್ಗೆ ನಾವು ಚಿಂತನೆ ಮಾಡಬೇಕಿದೆ. ಉತ್ತಮ ಆರಂಭದ ಕೇಂದ್ರ ಬಿಂದು ನಮ್ಮ ನಗರ ಕೇಂದ್ರಗಳ ನವೀಕರಣವಾಗಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
ನಗರ ಕೇಂದ್ರಗಳ ಪುನರುಜ್ಜೀವನ ಕುರಿತ ವಿಷಯವನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಈ ಚೇತರಿಕೆ ಪ್ರಕ್ರಿಯೆಯಲ್ಲಿ ಜನರೇ ಅತ್ಯಂತ ಕೇಂದ್ರ ಬಿಂದುವಾಗಲಿದ್ದಾರೆ ಎಂದರು. ಜನರೇ ಅತ್ಯಂತ ದೊಡ್ಡ ಸಂಪನ್ಮೂಲ ಎಂದು ಬಣ್ಣಿಸಿದ ಅವರು, ಸಮುದಾಯಗಳೇ ದೊಡ್ಡ ನಿರ್ಮಾಣ ಸಮುದಾಯಗಳಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. “ಸಾಂಕ್ರಾಮಿಕ ನಮ್ಮ ಅತಿ ದೊಡ್ಡ ಸಂಪನ್ಮೂಲಗಳಾದ ಸಮಾಜಗಳು, ವ್ಯವಹಾರಗಳು ಮತ್ತು ನಮ್ಮ ಜನರಿಗೆ ಹೆಚ್ಚಿನ ಒತ್ತು ನೀಡುವಂತೆ ಮಾಡಿದೆ. ಕೋವಿಡ್ ನಂತರದ ಜಗತ್ತನ್ನು ಪ್ರಮುಖ ಮತ್ತು ಮೂಲಭೂತ ಸಂಪನ್ಮೂಲಗಳ ಪೋಷಣೆಯೊಂದಿಗೆ ನಾವು ನಿರ್ಮಿಸಬೇಕಿದೆ’’ ಎಂದರು.
ಸಾಂಕ್ರಾಮಿಕ ಅವಧಿಯ ಕಲಿಕೆಗಳನ್ನು ನಾವು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಲಾಕ್ ಡೌನ್ ಅವಧಿಯ ಸ್ವಚ್ಛ ಪರಿಸರದ ಕುರಿತು ಮಾತನಾಡಿದ ಅವರು, ಸ್ವಚ್ಛ ಪರಿಸರವನ್ನು ಒಂದು ಕಡ್ಡಾಯ ನಿಯಮವನ್ನಾಗಿ ಮಾಡಿಕೊಂಡು ಅದು ಅಪೇಕ್ಷಣೀಯವಾಗದಂತೆ ಸುಸ್ಥಿರ ನಗರಗಳನ್ನು ನಾವು ನಿರ್ಮಿಸಬಹುದೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದರು. “ಭಾರತದ ನಗರ ಕೇಂದ್ರಗಳಲ್ಲಿ ನಗರ ಮೂಲಸೌಕರ್ಯಗಳು ಒಳಗೊಂಡಿದ್ದರೂ ಗ್ರಾಮಗಳಲ್ಲಿನ ಆತ್ಮ ತುಂಬಿರುವಂತೆ ಮಾಡಬೇಕು ಎಂಬುದು ನಮ್ಮ ಬಯಕೆಯಾಗಿದೆ” ಶ್ರೀ ಮೋದಿ ಹೇಳಿದರು.
ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಕೈಗೆಟಕುವ ದರದಲ್ಲಿ ವಸತಿ, ರಿಯಲ್ ಎಸ್ಟೇಟ್ (ನಿಯಂತ್ರಣ) ಕಾಯ್ದೆ ಮತ್ತು 27 ನಗರಗಳಲ್ಲಿ ಮೆಟ್ರೋ ರೈಲು ಸೇರಿದಂತೆ ಇತ್ತೀಚೆಗೆ ಭಾರತೀಯ ನಗರಗಳ ಆಯಾಮ ಬದಲಿಸಿ ಪುನಶ್ಚೇತನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಅವರು ವಿವರಿಸಿದರು. “ನಾವು 2022ರ ವೇಳೆಗೆ ದೇಶದಲ್ಲಿ ಸುಮಾರು 1000 ಕಿ.ಮೀ. ಮೆಟ್ರೋ ರೈಲು ಮಾರ್ಗದ ವ್ಯವಸ್ಥೆ ಹೊಂದುವ ಮಾರ್ಗದಲ್ಲಿ ನಡೆದಿದ್ದೇವೆ” ಎಂದು ಪ್ರಧಾನಮಂತ್ರಿ ಅವರು ವೇದಿಕೆಗೆ ತಿಳಿಸಿದರು.
“ನಾವು ಎರಡು ಹಂತಗಳಲ್ಲಿ ಆಯ್ದ 100 ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಹೊಂದಿದ್ದೇವೆ. ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ತತ್ವವನ್ನು ಎತ್ತಿಹಿಡಿಯುವ ರಾಷ್ಟ್ರವ್ಯಾಪಿ ಸ್ಪರ್ಧೆ ಇದಾಗಿದೆ. ಈ ನಗರಗಳು ಬಹುತೇಕ ಎರಡು ಲಕ್ಷ ಕೋಟಿ ರೂ.ಗಳು ಅಥವಾ 30 ಬಿಲಿಯನ್ ಡಾಲರ್ ಮೊತ್ತದ ಯೋಜನೆಗಳನ್ನು ಸಿದ್ಧಪಡಿಸಿವೆ ಮತ್ತು ಬಹುತೇಕ ಒಂದು ಲಕ್ಷ 40 ಸಾವಿರ ಕೋಟಿ ರೂ. ಅಥವಾ 20 ಬಿಲಿಯನ್ ಡಾಲರ್ ಮೊತ್ತದ ಯೋಜನೆಯ ಕಾಮಗಾರಿ ಪೂರ್ಣಗೊಂಡಿವೆ ಅಥವಾ ಪೂರ್ಣಗೊಳ್ಳುವ ಹಂತ ತಲುಪಿವೆ” ಎಂದು ಪ್ರಧಾನಮಂತ್ರಿ ಹೇಳಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending Tagged With: $ 30 Billion, 30 ಬಿಲಿಯನ್, Dollar Value Plan, government, Mass Market, Metro Rail Line, Smart City, Video Conference, ಡಾಲರ್ ಮೌಲ್ಯದ ಯೋಜನೆ, ಪುನರುಜ್ಜೀವನ ಕುರಿತ ವಿಷಯ, ಬೃಹತ್ ಮಾರುಕಟ್ಟೆ, ಭವಿಷ್ಯಕ್ಕಾಗಿ ಸ್ಥಿತಿ ಸ್ಥಾಪಕತ್ವ, ಮೆಟ್ರೋ ರೈಲು ಮಾರ್ಗ, ವಿಡಿಯೋ ಕಾನ್ಫರೆನ್ಸ್, ಸರ್ಕಾರ ಸೇರಿದಂತೆ, ಸ್ಮಾರ್ಟ್ ಸಿಟಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...