ಕುಮಟಾ : ಖಚಿತ ಮಾಹಿತಿ ಮೇರೆಗೆ ತಾಲೂಕಿನ ಹೆಗಡೆ ಗ್ರಾ, ಪಂ ವ್ಯಾಪ್ತಿಯ ಲುಕ್ಕೇರಿ ಬಳಿ ಕೋಳಿ ಅಂಕದ ಮೇಲೆ ದಾಳಿ ನಡೆಸಿ ಕೋಳಿ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡ ವಿದ್ಯಾಮಾನ ಶನಿವಾರ ನಡೆದಿದೆ. ಕಳೆದ ಹಲವಾರು ದಿನಗಳಿಂದ ಲುಕ್ಕೇರಿ ದೇವಸ್ಥಾನ ಬಳಿ ಬಯಲು ಜಾಗದಲ್ಲಿ ಕೋಳಿ ಅಂಕ ಅವ್ಯಾಹತವಾಗಿ ನಡೆಯುವ ಕುರಿತು ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಿಪಿಐ ಪರಮೇಶ್ವರ ಗುನಗಾ ಮತ್ತು ಪಿಎಸ್ ಐ ಆನಂದಮೂರ್ತಿ ಅವರ ಮಾರ್ಗದರ್ಶನದ ಮೇರೆಗೆ ಕುಮಟಾ ಪೊಲೀಸರು ಅಫರಾದ ವಿಭಾಗದ ಪಿ ಎಸ್ ಆಯ್ ಸುಧಾ ಅಘನಾಶಿಯವರ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಂದಿತರಿಂದ 12 ಮೋಟಾರು ಸೈಕಲುಗಳು,2 ಕೋಳಿ ಹಾಗೂ 2200 ರೂ ನಗದು ಮತ್ತು ಕೋಳಿ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment