ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಭಗತ್‍ಸಿಂಗ್ ಸ್ಪೋಟ್ರ್ಸ ಅಕಾಡೆಮಿ ಹಾಗು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ್ ಶಾಲೆ ಅವರ ಸಂಯುಕ್ತಾಶ್ರಯದಲ್ಲಿ ಹಳಿಯಾಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ್ ಶಾಲೆ ಮೈದಾನದಲ್ಲಿ ಜಿಲ್ಲಾ ಮಟ್ಟದ ಶಾರ್ಫ್ ಶೂಟಿಂಗ್ ಚಾಂಪಿಯನ್‍ಶಿಫ್ ಸ್ಪರ್ದೆ ನಡೆಯಿತು.

ಜಿಲ್ಲಾ ಮಟ್ಟದ ಈ ಶಾರ್ಫ್ ಶೂಟಿಂಗ್ ಚಾಂಪಿಯನ್‍ಶಿಫ್ ಕ್ರೀಡೆಗೆ ಶೂಟಿಂಗ್ ಮಾಡುವ ಮೂಲಕವೇ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ವಿಡಿ ಹೆಗಡೆ ಅವರು ಯುವಕ-ಯುವತಿಯರು ಆಸಕ್ತಿ ವಹಿಸಿ ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು, ತಮಗೆ ದೊರಕಿರುವ ವೇದಿಕೆಯ ಸದ್ಬಳಕೆ ಮಾಡಿಕೊಳ್ಳಬೇಕು, ಜೀವನದಲ್ಲಿ ಗುರಿ ಸಾಧಿಸಿಸಲು ಇದು ದೊರಕುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪುರಷರ ವಿಭಾಗದಲ್ಲಿ ಹಳಿಯಾಳದ ಸಾಗರ್ ಅಗಸರ ಪ್ರಥಮ್, ಓಂಕಾರ ಶಿವಾನಂದ ಬುಲಬುಲೆ ದ್ವಿತೀಯ,ಶಿರಸಿಯ ಗಿರೀಶ ಎಂ ಶೆಟ್ಟಿ-ತೃತೀಯ ಸ್ಥಾನ.
ಮಹಿಳೆಯರ ವಿಭಾಗದಲ್ಲಿ ನೇತ್ರಾವತಿ ಎಮ್ ಶಿರ್ಸಿ-ಪ್ರಥಮ, ಪಾರ್ವತಿ ಎಮ್ ಸಿದ್ಧಿ ಮಂಚಿಕೇರಿ -ದ್ವಿತೀಯ ಸ್ಥಾನ ಗಳಿಸಿದ್ದಾರೆ.

14 ವμರ್ïದೊಳಗಿನ ಬಾಲಕರ ವಿಭಾಗದಲ್ಲಿ : ಅನೂಪ್ ಎಲ್ ಮಿಂಡೋಳಕರ-ಹಳಿಯಾಳ [ಪ್ರಥಮ್], ಆದಿತ್ಯ ನಾಯ್ಕ್ ಯಲ್ಲಾಪುರ- ದ್ವಿತೀಯ, ಮಿಲಿಂದ ವಿನಾಯಕ ಶೇಠ ಹಾಗು ಮಹಮ್ಮದ ಉಜೆರ ಬಿಡಿವಾಲೆ ಹಳಿಯಾಳ ಇಬ್ಬರು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
16 ವರ್ಷದ ಒಳಗಿನ ವಿಭಾಗದಲ್ಲಿ: ಸಮರ್ಥ ಎಸ್ ಗುಪಿತ ಹಳಿಯಾಳ-ಪ್ರಥಮ, ಸ್ಟ್ಯಾನಿ ಲಿಯೊಸ ಫ್ರಾನ್ಸಿಸ ಬ್ರಿಗೆಂಝಾ ಹಳಿಯಾಳ-ದ್ವಿತೀಯ, ಪೈಹಿಮ ಎಮ್ ಖಾಜಿ-ತೃತೀಯ.
16 ವರ್ಷದ ಬಾಲಕಿಯರ ವಿಭಾಗದಲ್ಲಿ:- ಹಳಿಯಾಳದ ಸ್ವಾತಿ ಗೌಡರ-ಪ್ರಥಮ, ಸಾನಿಯಾ ನದಾಫ್-ದ್ವಿತೀಯ. ಕ್ರೀಡೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 102 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ವಿಜೇತರಿಗೆ ಮಾಜಿ ವಿಧಾನಪರಿಷತ್ ಸದಸ್ಯ ವಿ.ಡಿ ಹೆಗಡೆ ಅವರು ಬಹುಮಾನವನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಶಾರ್ಫ್ ಶೂಟಿಂಗ್ ತರಬೇತಿದಾರ ಜಗದೀಶಕುಮಾರ ನಾಯಕ, ಸ್ವಾಮಿ ವಿವೇಕಾನಂದ ಶಾಲೆ ಮುಖ್ಯೋಪಾಧ್ಯಾಯರಾದ ಗೀತಾ ಮತ್ತು ಸಂಜೀವಕುಮಾರ ಪಾಟೀಲ್, ದೈಹಿಕ ಶಿಕ್ಷಕ ಮಹಮ್ಮದ ಅಶ್ರಫ್, ಯಲ್ಲಾಪುರದ ಮಂಜುನಾಥ ನಾಯಕ್, ಮಾಜಿ ಕುಸ್ತಿ ಪಟು ಶ್ರೀಕಾಂತ ಹಳಬಂಡಿ, ಪ್ರಮುಖರಾದ ಉಜ್ವಲಾ ಶಿರೋಡಕರ, ಸೈಫಾನ್ ಪ್ರಮುಖರು ಇದ್ದರು.
Leave a Comment