ಭಟ್ಕಳ : ಪ್ರವಾಸಕ್ಕೆಂದು ಬಂದು ಸಮುದ್ರದ ನೀರಿನ ಸೆಳೆತಕ್ಕೆ ಒಳಗಾಗಿ ಈಜಾಡಲು ತೆರಳಿದ ವ್ಯಕ್ತಿಯೊರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪಿರುವ ಘಟನೆ ಮುರ್ಡೇಶ್ವರ ಕಡಲ ತೀರದಲಿ ರವಿವಾರ ನಡೆದಿದೆ
ಮೃತ ವ್ಯಕ್ತಿ ಬೆಂಗಳೂರಿನ ಬಾಣಸಂದ್ರಿಯ ನಿವಾಸಿಮಂಜುನಾಥ ಮಡಿವಾಳ (20) ಎಂದು ತಿಳಿದು ಬಂದಿದೆ. ಈತ ತನ್ನ 8 ಜನ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ರವಿವಾರ ಬಂದಿದ್ದು. ದೇವರ ದರ್ಶನ ಪಡೆದು ತನ್ನ ಸ್ನೇಹಿತರೊಂದಿಗೆ ಮುರುಡೇಶ್ವರ ಕಡಲ ತೀರಕ್ಕೆ ಈಜಾಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮಂಜುನಾಥ ಮಡಿವಾಳ ಅಪಾಯಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ
ಈ ಕುರಿತು ಮುರುಡೇಶ್ವ ಪೋಲಿಸ ಠಾಣೆಯಲ್ಲಿಪ್ರಕರಣ ದಾಖಲಾಗಿದೆ

Leave a Comment