ಹೊನ್ನಾವರ : ಶಿರಸಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟ ಅವರಿಗೆ ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ತುರ್ತು ಸಭೆ ನಡೆಸಿ ಅಗಲಿದ ವಿನಾಯಕ ಶೇಟರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷದ ಮೌನಾಚರಣೆ ನಡೆಸಿ ಶೃದ್ಧಾಂಜಲಿ ಸಲ್ಲಿಸತು.

ಈ ಸಂದರ್ಭದಲ್ಲಿ ಮೃತರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ, ವಿನಾಯಕ ಶೇಟ್ ಅಜಾತ ಶತ್ರುವಾಗಿದ್ದರು. ಅವರು ಎರಡು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಾಗಿದ್ದರೂ, ಕೂಡ ಎಲ್ಲಾ ಪಕ್ಷದವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಸದಾ ತಮ್ಮ ಕಿಸೆಯಲ್ಲಿ ಬಡವರು, ದುರ್ಬಲ ವರ್ಗದವರ ಪರವಾದ ಅರ್ಜಿ ಹಿಡಿದುಕೊಂಡೆ ಇರುತ್ತಿದ್ದರು. ಹಳದೀಪುರ ಗ್ರಾಮ ಪಂಚಾಯತನಲ್ಲಿ ಸತತವಾಗಿ ಆಯ್ಕೆಯಾಗುತ್ತಾ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಹಳದೀಪುರ ಗ್ರಾಮ ಪಂಚಾಯತದಲ್ಲಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಅವರು, ಕೊಟ್ಟ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು. ಈಗ ಅವರನ್ನು ಕಳೆದುಕೊಂಡ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಬಡವಾಗಿದೆ ಎಂದು ಮಮ್ಮಲ ಮರುಗಿದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ ಮಾತನಾಡಿ ವಿನಾಯಕ ಶೇಟ ಉತ್ತಮ ವ್ಯಕ್ತಿತ್ವ ಹೊಂದಿದವರಾಗಿದ್ದರು. ತಮ್ಮಲ್ಲಿ ಯಾರೇ ಸಹಾಯ ಕೇಳಿ ಬಂದರೂ ಅವರಿಗೆ ಸಹಾಯ ಮಾಡುವಂತ ಪರೋಪಕಾರಿ ಗುಣ ಅವರದಾಗಿತ್ತು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಹೊನ್ನಾವರ ಕಾಂಗೇಸ್ ಸೇವಾದಳ ಅಧ್ಯಕ್ಷ ಸಂತೋಷ ಮೇಸ್ತ, ಇಂಟಕ ಅಧ್ಯಕ್ಷ ಆಗ್ನೆಲ್ ಡಯಾಸ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಝಕ್ರಿಯ್ಯಾ ಸಾಬ್, ಶಕ್ತಿ ಸಂಚಾಲಕ ಬಾಲಚಂದ್ರ ನಾಯ್ಕ, ಮಾದೇವ ನಾಯ್ಕ, ಕರ್ಕಿ, ಸಾಲ್ವೋದರ ಡಿ’ಸೋಜಾ, ವಿನಾಯಕ ನಾಯ್ಕ, ಬ್ರಾಜಿಲ್ ಪಿಂಟೊ, ಚಂದ್ರಶೇಖರ ಚಾರೋಡಿ, ನೆಲ್ಸನ್ ರೊಡ್ರಿಗಿಸ್, ಜೋಸೆಪ್ ಡಿಸೋಜಾ, ಉದಯ ಮೇಸ್ತ, ಕೃಷ್ಣ ಹರಿಜನ, ಮದನ್ ರಾಜ್, ಮುಸಾ ಅಣ್ಣಿಗೇರಿ, ಮೋಹನ ಮೇಸ್ತ, ಅಜಮ್ ಶೇಖ, ಶಂಕರ ಮೇಸ್ತ, ಇನ್ನು ಮುಂತಾದವರು ಉಪಸ್ಥಿತರಿದ್ದರು.
ಇಂದು ಮುಂಜಾನೆ ವಿನಾಯಕ ಶೇಟ್‍ರವರ ಮನೆಗೆ ತೆರಳಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಮತ್ತು ಪಕ್ಷದ ಪ್ರಮುಖರು ಅವರ ಪ್ರಾರ್ಥಿವ ಶರೀರಕ್ಕೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹೊದಿಸಿ, ಗೌರವ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.
Leave a Comment