ಹಳಿಯಾಳ :- ಹಳಿಯಾಳ ಪುರಸಭೆಯ ಮೂಲಕ ರಸ್ತೆ ಅಂಚಿನ ನಿರುಪಯುಕ್ತ ಮಣ್ಣನ್ನು ಯಂತ್ರದ ಮೂಲಕ ಗುಡಿಸಿ ತೆಗೆಸುವ ಕೆಲಸ ಕಾರ್ಯ ಆರಂಭಿಸಲಾಗಿದೆ
ಹಳಿಯಾಳ ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆಯ ವಾಯುಮಾಲಿನ್ಯ ಒಂದು ಕಡೆ ಆದರೇ ಇನ್ನೊಂದು ಕಡೆ ಪ್ರತಿ ನಿತ್ಯ ಕಬ್ಬುಗಳನ್ನು ಹೇರಿಕೊಂಡು ಕಾರ್ಖಾನೆಗೆ ಸಾಗುವ ನೂರಾರು ವಾಹನಗಳಿಂದ ಪ್ರತಿದಿನ ರಸ್ತೆ ಉದ್ದಕ್ಕೂ ಧೂಳು ಏಳುತ್ತಿದ್ದು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವವಿಸುತ್ತಿದ್ದಾರೆ. ಹೀಗಾಗಿ ಪಟ್ಟಣದ ಜನತೆ ವಾಯು ಮಾಲಿನ್ಯದಿಂದ ಕಂಗೆಟ್ಟಿರುವುದಂತೂ ಸತ್ಯ.

ಈ ಬಗ್ಗೆ ಸಾರ್ವಜನಿಕರ ಬಂದ ದೂರುಗಳನ್ನು ಮನಗಂಡು ಈ ಬಗ್ಗೆ ತಿಳಿದುಕೊಂಡ ಪುರಸಭೆ ಅಧ್ಯಕ್ಷ ಅಝರ್ ಬಸರೀಕಟ್ಟಿ ಅವರು ಖುದ್ದಾಗಿ ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಕಾರ್ಖಾನೆಯ ವಾಹನಗಳು ಓಡಾಡುವ ರಸ್ತೆಗಳಲ್ಲಿ, ರಸ್ತೆ ಪಕ್ಕದ ಮಣ್ಣು ಗುಡಿಸಿ ತೆಗೆಸಿ ಮತ್ತು ಮಣ್ಣು ಏಳುತ್ತಿರುವ ರಸ್ತೆಗಳಿಗೆ ನೀರು ಹಾಕಿ ಎಂದು ಅವರಿಗೆ ಸೂಚಿಸಿದ್ದರು.
ಆದರೇ ಕಾರ್ಖಾನೆ ಮಾತ್ರ 2-3 ಸಲ ನೀರು ಹಾಕಿಸಿ ಬಳಿಕ ಸುಮ್ಮನಾಗಿ ಬಿಟ್ಟಿತು.
ಆದರೆ ಹಳಿಯಾಳ ಪುರಸಭೆ ಮಾತ್ರ ಪ್ಯಾರಿ ಕಾರ್ಖಾನೆಗೆ ಪುರಸಭೆ ವತಿಯಿಂದ ಮೇಲಿಂದ ಮೇಲೆ ನೋಟಿಸ್ ನೀಡಿದರೂ ಕಂಪೆನಿ ಮಾತ್ರ ತನ್ನ ಮೊಂಡುತನ, ಬೇಜವಾಬ್ದಾರಿ ಪ್ರದರ್ಶನ ಮಾಡಿ ಜನರ ಸಮಸ್ಯೆಗೆ ಕ್ಯಾರೆ ಎನ್ನಲಿಲ್ಲ. ನಾಗರಿಕ ಹಿತಾಸಕ್ತಿ ಮರೆತ ಕಂಪೆನಿ ವರಸೆಯಿಂದ ಬೇಸತ್ತ ಪುರಸಭೆ ಅಧ್ಯಕ್ಷ ಅಝರ್ ಬಸರೀಕಟ್ಟಿಯವರು ತಾವೇ ಮುಂದಾಗಿ ಪುರಸಭೆ ಸಿಬ್ಬಂದಿಗಳಿಂದ ರಸ್ತೆಯಲ್ಲಿ ಹಾಗೂ ರಸ್ತೆಯ ಪಕ್ಕದಲ್ಲಿ ತುಂಬಿಕೊಂಡಿರುವ ಮಣ್ಣನ್ನು ತೆಗೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಜರ್ ಅವರ ಈ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment