• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗ್ರಾಮಪಂಚಾಯತ್ ಚುನಾವಣೆಗೆ ಜಿಲ್ಲೆಯಲ್ಲಿ ಎರಡು ಹಂತದ ಮತದಾನ : ಡಿಸಿ

December 7, 2020 by Sachin Hegde Leave a Comment

ಕಾರವಾರ ಡಿ.7 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಡಿ.22 ಮತ್ತು 27 ರಂದು ಎರಡು ಹಂತಗಳಲ್ಲಿ ಗ್ರಾಮಪಂಚಾಯತ್ ಚುನಾವಣೆ ನಡೆಸಲಾಗುತ್ತಿದ್ದು, ಮೊದಲನೆಯ ಹಂತದ ಚುನಾವಣೆಗೆ ಡಿ.7 ರಿಂದ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ತಿಳಿಸಿದರು ಜಿಲ್ಲಾಧಿಕಾರಿ ಕಚೇರಿ

129952553 221055142789665 3331828201306231387 o

ನ್ಯಾಯಾಲಯ ಸಂಭಾಗಣದಲ್ಲಿ ಸೊಮವಾರ ಗ್ರಾಮಪಂಚಾಯತ್ ಚುನಾವಣೆ ಕುರಿತು ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ ಮೊದಲನೆಯ ಹಂತದ ಚುನಾವಣೆಗೆ ಜಿಲ್ಲೆಯ 5 ತಾಲೂಕುಗಳ 101 ಗ್ರಾಮಪಂಚಾಯತಗಳಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 698 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಪ್ರತಿ 10-15 ಮತಗಟ್ಟೆಗಳಿಗೆ ಸೆಕ್ಟರ್ ಆಫೀಸರ್ ಮತ್ತು ಸೆಕ್ಟರ್ ಹೆಲ್ತ್ ರೆಗ್ಯುಲೆಟರ್, ಪ್ರತಿ ತಾಲೂಕಿಗೆ ಫ್ಲಾಯಿಂಗ್ ಸ್ಕ್ಯಾಡ್, ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್ ನೆತ್ರತ್ವದಲ್ಲಿ ಮಾದರಿ ನಿತಿಸಂಹಿತೆಯ ತಂಡವನ್ನು ರಚಿಸಲಾಗಿದ್ದು, ಈ ತಂಡದಲ್ಲಿ ತಾಲೂಕ್ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ, ಪೋಲಿಸ್ ವೃತ್ತ ನೀರಿಕ್ಷಕ ,ಪೋಲಿಸ್ ಸಬ್ ಇನ್ಸ್ಪೆಕ್ಟರ್ , ಕಂದಾಯ ನೀರಿಕ್ಷಕ ಕಾರ್ಯ ನಿರ್ವಹಿಸಲಿದ್ದಾರೆ ಎಂದರು ಮೊದಲನೆ ಹಂತದ ಚುನಾವಣೆಗಾಗಿ ಡಿ.7 ಸೋಮುವಾರದಂದು ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿ.12 ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದರೆ ಡಿ.14 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಡಿ.22 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಘಂಟೆಯವರಗೆ ಮತದಾನ ನಡೆಯಲಿದ್ದು ಡಿ. 30 ರಂದು ಆಯಾ ತಾಲೂಕ ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದೆಂದರು.ಮೊದಲ ಹಂತದ ಚುನಾವಣೆಯಲ್ಲಿ ಕಾರವಾರ, ಅಂಕೋಲಾ ,ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಗ್ರಾಮಪಂಚಾಯತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ ಹೊನ್ನಾವರ ತಾಲೂಕಿನ ಗ್ರಾಮಪಂಚಾಯತಗಳ ಪೈಕಿ ಹೊನ್ನಾವರ ತಾಲೂಕಿನ (ಗುಳದಕೇರಿ)ಮಂಕಿ-ಎ (ಹಳೇಮಠ), ಮಂಕಿ ಬಿ (ಅನಂತವಾಡಿ) ಮತ್ತು ಮಂಕಿ-ಸಿ(ಚಿತ್ತಾರ) ಗ್ರಾಮ ಪಂಚಾಯತಗಳನ್ನು ಹೊರತುಪಡಿಸಿ ಚುನಾವಣೆ ನಡೆಸಲಾಗುವುದು. ಮಂಕಿ ಗ್ರಾಮಪಂಚಾಯತವನ್ನು ಪಟ್ಟಣ ಪಂಚಾಯತವನ್ನಾಗಿ ಮೇಲ್ರ್ದಜೆ ಎರಿಸಲು ಸರಕಾರವು ಅಧಿಸೂಚನೆ ಹೊರಡಿಸುವುದರಿಂದ ಚುನಾವಣೆಯನ್ನು ಆಯೋಗವು ಕೈ ಬಿಟ್ಟಿರುತ್ತದೆ ಎಂದು ತಿಳಿಸಿದರು. ಡಿ.31 ವರೆಗೆ ನೀತಿಸಂಹಿತೆ : ಚುನಾವಣೆ ನಡೆಯುವ ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಡಿ.31 ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರುವುದು ಪಟ್ಟಣ ಪಂಚಾಯಿತಿ ಪುರಸಭೆ , ನಗರಸಭೆ ನಗರ ಪಾಲಿಕೆಯ ಪ್ರದೇಶಗಳಿಗೆ ಈ ನೀತಿಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪೊಲೀಸ ಬಿಗಿ ಬಂದೋಬಸ್ತ : ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಬಿಗಿ ಬಂದೋಬಸ್ತ ಮಾಡಲಾಗಿದ್ದು , ಮೊದಲ ಹಂತದ ಚುನಾವಣೆಯಲ್ಲಿ 53 ಅತೀ ಸೂಕ್ಷ್ಮ 164 ಸೂಕ್ಷ್ಮ ಮತ್ತು 513 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನವಣೆ ಸಂದರ್ಭದಲ್ಲಿ ಗಲಭೆ ಅಥವಾ ಚುನಾವಣೆ ಕರ್ತವ್ಯಗಳಿಗೆ ಅಡ್ಡಿಪಡಿಸಬಹುದಾದ ಸಮಾಜಘಾತಕ ವ್ಯಕ್ತಿಗಳನ್ನು ಈಗಾಗಲೇ ಪಟ್ಟಿಮಾಡಿ ಅವರ ಮೇಲೆ ಸೂಕ್ತ ನಿಗಾವಹಿಸಲಾಗಿದ್ದು ಮುಂಜಾಗ್ರತೆಯ ಕ್ರಮವಾಗಿ ಭದ್ರತಾ ಕಾಯಿದೆಯ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು ಪ್ರತಿ ಮತಗಟ್ಟೆ ಭದ್ರತೆಗಾಗಿ ಪೋಲಿಸ್ ಸಿಬ್ಬಂದಿಗಳನ್ನು ಅವಶ್ಯಕತೆ ಅನುಗುಣವಾಗಿ ನೇಮಿಸಲಾಗುವುದು. ಡಿ.ಎಸ್.ಪಿ 5, ಸಿ.ಪಿ.ಐ/ಪಿಐ-17, ಪಿಎಸ್‍ಐ-70, ಎಎಸ್‍ಐ-160, ಎಚ್‍ಸಿ/ಪಿಸಿ-1160 ಪೋಲಿಸ್ ಅಧಿಕಾಅರಿ/ಸಿಬ್ಬಂದಿ, 15 ಡಿಎಆರ್ ತುಕಡಿಗಳು ಮತ್ತು 6 ಕೆಎಸ್‍ಆರ್‍ಪಿ ತುಕಡಿಗಳನ್ನು ಹಾಗೂ ಸುಮಾರು 400 ಗೃಹರಕ್ಷಕ ದಳದ ಸಿಬ್ಬಂದಿಯನ್ನು ಚುನವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಜಿಲ್ಲೆಯಾದ್ಯಂತ 54 ಚೆಕ್ ಪೋಸ್ಟಗಳನ್ನು ತೆರೆಯಲಾಗಿದ್ದು ಚುನಾವಣಾ ಅಕ್ರಮಗಳ ಬಗ್ಗೆ ನೀತಿಸಂಹಿಯಂತೆ ನಿಗಾವಹಿಸೆದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಪ್ರಿಯಾಂಗಾ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ.ಕೆ. ಅವರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karwar News Tagged With: press conference, Shivaprakash Devaraju, Social Victim, Superintendent of Police, ಗ್ರಾಮಪಂಚಾಯತ್ ಚುನಾವಣೆ, ನಗರಸಭೆ ನಗರ ಪಾಲಿಕೆಯ ಪ್ರದೇಶ, ಪಟ್ಟಣ ಪಂಚಾಯಿತಿ ಪುರಸಭೆ, ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ ಮೊದಲನೆ, ಪೊಲೀಸ್ ವರಿಷ್ಠಧಿಕಾರಿ ಶಿವಪ್ರಕಾಶ ದೇವರಾಜು, ಸಮಾಜಘಾತಕ ವ್ಯಕ್ತಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...