ಭಟ್ಕಳ: ತಾಲೂಕಿನ ಯಲ್ವಡಿಕವೂರ ಪಂಚಾಯಿತಿ ವ್ಯಾಪ್ತಿಯ ಸರ್ಪನಕಟ್ಟೆಯ ಯಲ್ವಡಿಯಲ್ಲಿ ಐತಿಹಾಸಿಕ ಕೋಣನ ಕಂಬಳ ಮಹೋತ್ಸವದ ಅಂಕಣ ಉದ್ಘಾಟನೆಯನ್ನು ಊರಿನ ಹಿರಿಯರಾದ ಗೋಯ್ದಪ್ಪ ನಾಗಪ್ಪ ನಾಯ್ಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಯಲ್ವಡಿಕವೂರನ ಈ ಕಂಬಳವೂ ಅನಾದಿಕಾಲದಿಂದಲೂ ನಡೆಯುತ್ತಿದೆ. ಗ್ರಾಮೀಣ ಭಾಗದ ಕ್ರೀಡೆ, ಸಂಸ್ಕೃತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವಲ್ಲಿ ಇಂತಹ ಕ್ರೀಡೆಗಳು ಸಹಕಾರಿ ಎಂದರು. ಕುಂಟುವಾಣಿ ಕೋಣನ ಕಂಬಳದ ರೂವಾರಿ ಸೋಮಯ್ಯ ಗೊಂಡ ತನಗೆ ಕುಂಟವಾಣಿಯಲ್ಲಿ ಕೋಣನ ಕಂಬಳ ಆರಂಭಿಸಲು ಯಲ್ವಡಿಕವೂರನ ಕಂಬಳವೆ ಪ್ರೇರಣೆ. ತಾನು ೪೧ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ ಅಂದರೆ ಇದು ಇನ್ನು ಎಷ್ಟು ಪುರಾತನವಾಗಿರಬಹುದು ಎಂದು ಉಹಿಸಲು ಅಸಾಧ್ಯ. ಸರ್ಕಾರದ ನಿಯಮಗಳನ್ನು ಪಾಲಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು, ಪರಸ್ಪರ ಅಂತರ ಕಾಯ್ದುಕೊಂಡು ಈ ಕಂಬಳ ಮಹೋತ್ಸವ ನಡೆಯುತ್ತಿರುವ ಶ್ಲಾಘನೀಯ ಎಂದರು.
ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ, ಉತ್ತರ ಕನ್ನಡದ ವಿವಿಧ ತಾಲೂಕುಗಳ ಕೋಣಗಳು ಕಂಬಳಕ್ಕೆ ಆಗಮಿಸಿವೆ. ಸ್ಪರ್ಧೆಯಲ್ಲಿ ಹಲಗೆ ವಿಭಾಗದಲ್ಲಿ: ಪ್ರಥಮ ಗಳಿಸಿದ ಪಸ್ನಗ ಹೆಬ್ಬಾರ್ ತಲಾಂದ ಇವರ ಕೋಣ, ದ್ವಿತೀಯವಿಭಾಗದಲ್ಲಿ ಗಣೇಶ ನಾಯ್ಕ ಹೊಳಗದ್ದೆ ಇವರ ಕೋಣ ತೃತೀಯ ವಿಭಾಗದಲ್ಲಿ ನಂದಯ್ಯ ಮಾಸ್ತಯ್ಯ ನಾಯ್ಕ ಇವರ ಕೋಣ ಗಳಿಸಿದು ಹಾಗೂ
ಹಗ್ಗ ವಿಭಾಗದಲ್ಲಿ: ಪ್ರಥಮ H.N ನಿವಾಸ ಪಿನುಪಾಲ,ಇವರ ಕೋಣ,ದ್ವಿತೀಯ ದಿಶಾ ಶ್ರೆಯೇಶ ನಾರಾಯಣ ದೇವಾಡಿಗ ಬೈಂದೂರು ಇವರ ಕೋಣ,ತೃತೀಯ ವೆಂಕ್ಟ ಪೂಜಾರಿ ಬೈಂದೂರು ಇವರ ಕೋಣ ಜಯಗಳಿಸಿದೆ.
ಕೋವಿಡ್ನ ಬಳಿಕ ತಾಲೂಕಿನಲ್ಲಿ ಮೊದಲ ಕ್ರೀಡೆ ಇದಾಗಿದ್ದು ನೂರಾರು ಸಂಖ್ಯೆಯ ಜನರು ವೀಕ್ಷಣೆಗೆ ಅಗಮಿಸಿದ್ದರು. ಕಂಬಳದ ಅಧ್ಯಕ್ಷ ಮಾದೇವ ಗೋಯ್ದಪ್ಪ ನಾಯ್ಕ, ಗೌರವಾಧ್ಯಕ್ಷ ರಮೇಶ ಈರಾ ನಾಯ್ಕ,ಕಾರ್ಯದರ್ಶಿ ರಾಮಚಂದ್ರ ಗೊಂಡ, ನಂದಯ್ಯ ಮಾಸ್ತಯ್ಯ ನಾಯ್ಕ,ಮಂಜುನಾಥ ನಾಯ್ಕ ಕರಾವಳಿ, ಮಾಸ್ತಯ್ಯ ನಾಯ್ಕ, ಮಾಸ್ತಿ ಭೀಮಾ ಗೊಂಡ ಸೇರಿ ಇತರರು ಇದ್ದರು.
Leave a Comment