ಹೊನ್ನಾವರ; ದರ್ಶನ ಮಂಜು ಮುಕ್ರಿ ಕರ್ಕಿಯ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮೀಕವಾಗಿ ಮೃತಪಟ್ಟಿದ್ದು, ಶಾಸಕ ದಿನಕರ ಶೆಟ್ಟಿ ವಿಶೇಷ ಮುತುವರ್ಜಿ ವಹಿಸಿ ೨ ಲಕ್ಷ ಮುಖ್ಯಮಂತ್ರಿ ಪರಿಹಾರವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು, ಸೋಮವಾರ ತಹಶೀಲ್ದಾರ ಕಛೇರಿಯಲ್ಲಿ ಮೃತನ ತಾಯಿಯ ಬಳಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೆಣ್ವಿ, ಶ್ರೀಕಾಂತ ಮೊಗೇರ, ರವಿ ಮುಕ್ರಿ, ಸುಬ್ರಾಯ ನಾಯ್ಕ ಮತ್ತಿತರರು ಹಾಜರಿದ್ದರು.

Leave a Comment