ಭಟ್ಕಳ: ತಾಲೂಕಿನ ಪುರಸಭೆ, ಜಾಲಿ ಪಟ್ಟಣ ಪಂಚಾಯತ ಕಾಮಗಾರಿಗೆ ಚಾಲನೆ ನೀಡುವ ಹಂತದಿಂದ ಇಲ್ಲಿಯವರೆಗೆ ಸ್ಥಳೀಯ ಆಡಳಿತವನ್ನು ಕತ್ತಲಲ್ಲಿ ಇಡಲಾಗಿದೆ. ಭಟ್ಕಳದ ಜನಸಂಖ್ಯೆ, ಇಲ್ಲಿನ ಪರಿಸ್ಥಿತಿಯನ್ನು ಕಡೆಗಣಿಸಿ ಯೋಜನೆಯನ್ನು ರೂಪಿಸಲಾಗಿದೆ. ವೆಟ್ ವೆಲ್‌ಗಳ ನಿರ್ಮಾಣ ಇನ್ನೂ ಆರಂಭವಾಗಿಲ್ಲ. ಪೈಪ್ ಅಳವಡಿಕೆ, ಚೇಂಬರ್ ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಿಲ್ಲ
ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೋಟ್ಯಾಂತರ ರುಪಾಯಿ ವೆಚ್ಚದ ಒಳಚರಂಡಿ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತವನ್ನು ದೂರ ಇಡಲಾಗಿದ್ದು, ಕಾಮಗಾರಿಯ ವಿನ್ಯಾಸ,ಕಳಪೆ ಗುಣಮಟ್ಟದ ಬಗ್ಗೆ ಜನರಿಗೆ ಉತ್ತರಿಸುವವರುಯಾರು ಎಂದು ಪುರಸಭಾ ಸದಸ್ಯರು, ಸ್ಥಳೀಯ ಮುಖಂಡರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮಂಗಳವಾರ ಸಂಜೆ ಭಟ್ಕಳ ಪುರಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದ, ಭಟ್ಕಳ ಪರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್‌ಜಿ, ಉಪಾಧ್ಯಕ್ಷ ಕೈಸರ್ ಮೊತೇಶಮ್, ಜಾಲಿ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಆದಮ್ ಪಣಂಬೂರು, ಮಜ್ಜಿಸೇ ಇಸ್ಲಾ ವ ತಂಜೀಮ್ ಮುಖಂಡರಾದ ಎಸ್.ಎಮ್.ಫರ್ವೇಜ್, ಪ್ರಧಾನ ಕಾರ್ಯದರ್ಶಿ ಅಬ್ಬುರಕೀಬ್ ಎಮ್.ಜೆ., ಇನಾಯಿತುಲ್ಲಾ ಶಾಬಂದಿ ಮತ್ತಿತರರು, ಕಾಮಗಾರಿಗೆ ಚಾಲನೆ ನೀಡುವ ಹಂತದಿಂದ ಇಲ್ಲಿಯವರೆಗೆ ಸ್ಥಳೀಯ ಆಡಳಿತವನ್ನು ಕತ್ತಲಲ್ಲಿ ಇಡಲಾಗಿದೆ. ಭಟ್ಕಳದ ಜನಸಂಖ್ಯೆ, ಇಲ್ಲಿನ ಪರಿಸ್ಥಿತಿಯನ್ನು ಕಡೆಗಣಿಸಿ ಯೋಜನೆಯನ್ನು ರೂಪಿಸಲಾಗಿದೆ. ವೆಟ್‌ವೆಲ್‌ಗಳ ನಿರ್ಮಾಣ ಇನ್ನೂ ಆರಂಭವಾಗಿಲ್ಲ. ಪೈಪ್ ಅಳವಡಿಕೆ, ಚೇಂಬರ್ ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಿಲ್ಲ. ಕಾಮಗಾರಿಯ ಗುಣಮಟ್ಟ ಕಾಪಾಡಬೇಕಾದ ಅಧಿಕಾರಿಗಳು ನಿತ್ಯವೂ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡುತ್ತಿಲ್ಲ. ಕನಿಷ್ಠ ಸೂಪರ್‌ವೈಸರ್‌ಗಳೂ ಲಭ್ಯರಿಲ್ಲ. ಈಗಾಗಲೇ ಗೌಸಿಯಾ ಸ್ವೀಟ್ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆಯನ್ನು ಜನರು ಅನುಭವಿಸುತ್ತಲೇ ಇದ್ದಾರೆ. ಈ ಹಂತದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದರೆ ಜನರು ಸಹಿಸಿಕೊಳ್ಳುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ
ಮಹಾನಗರಗಳಿಗೆ ಭೇಟಿ ನೀಡಲಾಗಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ನಮಗೆ ಅರಿವಿಗೆ ಬಂದಿದೆ. ಅದೇ ಸಮಸ್ಯೆ ಇಲ್ಲಿ ಪುನರಾವರ್ತನೆ ಆಗಬಾರದು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರ ನೀರುಸರಬರಾಜು ಮತ್ತು ಒಳಚರಂಡಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಬಾಂದೇಕರ್, ಸಮಗ್ರ ಅಧ್ಯಯನದ ನಂತರವೇ ಸರಕಾರ ಯೋಜನೆ ರೂಪಿಸಿದೆ. ಕಾಮಗಾರಿಯ ಅನುಷ್ಠಾನದ ಸಂದರ್ಭದಲ್ಲಿ ಸಣ್ಣಪುಟ್ಟ ಲೋಪದೋಷ ಕಂಡು ಬಂದರೆ ಸರಿಪಡಿಸಲು ಮೊದಲ ಆದ್ಯತೆ ನೀಡಲಾಗುವುದು. ಒಂದು ವಾರದ ನಂತರ ಮತ್ತೊಮ್ಮೆ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಚರ್ಚಿಸಲಾಗುವುದು, ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ನಡೆಸಲಾಗುವುದು ಎಂದು ಭರವಸೆ ನೀಡಿದರು, ಪುರಸಭಾ ಮುಖ್ಯಾಧಿಕಾರಿ ದೇವರಾಜು. ವೇಣುಗೋಪಾಲ ಶಾಸ್ತ್ರೀ, ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನ ಹಿರಿಯ ಉಪನ್ಯಾಸಕ ಹಾಗೂ ಅಭಿಯಂತರ ಶಶಿಧರ ಯಲ್ಲೂರಕರ್, ಖಾಸಗಿ ಅಭಿಯಂತರರಾದ ಇಸ್ಟೈಲ್. ಮಿಸ್ಸಾ ಮೊದಲಾದವರು ಉಪಸ್ಥಿತರಿದ್ದರು.
Leave a Comment