ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಹೊರಡುವ ಜಿಲ್ಲೆಯ ಹೆಮ್ಮೆಯ ದಿನಪತ್ರಿಕೆ ಕಡಲವಾಣಿ ಪತ್ರಿಕೆಯ ಸಂಪಾದಕ ದೀಪಕ ಕುಮಾರ ಅವರಿಗೆ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಪ್ರೆಸ್ ಗಿಲ್ಡ್ ಬೆಂಗಳೂರು ಇವರು ಪತ್ರಿಕೋದ್ಯಮ ದ ಸೇವೆಗಾಗಿ ಕನ್ನಡಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಬೆಂಗಳೂರಿನಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದೆ ಸುಧಾ ರಾಣಿ ಪ್ರಶಸ್ತಿ ಪ್ರದಾನ ಮಾಡಿದರು. ಪತ್ರಿಕಾರಂಗ ಸಿನೆಮಾ, ಸಂಗೀತ ಹಾಗೂ ಕಲಾ ಕ್ಷೇತ್ರ ದಲ್ಲಿ ಸೇವೆ ಸಲ್ಲೂಸಿದವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಹಿನ್ನಲೆ ಗಾಯಕ ಹೇಮಂತ್ ಮಾನಸಿ ಹೊಳ್ಳ ಹಾಗೂ ಇತರರು ಹಾಜರಿದ್ದರು.
Leave a Comment