ಹಳಿಯಾಳ:- ಹಳಿಯಾಳದ ಅಂಗಡಿ ಗ್ಯಾಸ್ ಸರ್ವಿಸ್ ವತಿಯಿಂದ ಜವಳಿ ಗಲ್ಲಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಲ್ ಪಿ ಜಿ ಪಂಚಾಯತ್, ಇಂಡೇನ್ ಸುರಕ್ಷಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಅಡಿಗೆ ಅನಿಲ ಸದ್ಬಳಕೆ, ಉಳಿತಾಯ, ಸುರಕ್ಷತೆ ಮಾಹಿತಿ ನೀಡುವ ಜೊತೆಗೆ ಕೊವಿಡ್ ರೋಗ ಬಾರದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳುವುದರ ಮಹತ್ವ ತಿಳಿಸಿ ವಿದ್ಯಾರ್ಥಿಗಳಿಗೆ ಎರಡು ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಇದೆ ಸಂದರ್ಭದಲ್ಲಿ ವಿತರಿಸಲಾಯಿತು.
ವಿದ್ಯಾರ್ಥಿನಿಯರಿಗೆ ಎಲ್ ಪಿ ಜಿ ಗೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ನೀಡಿದವರಿಗೆ ನೋಟ ಬುಕ್, ಪೆನ್, ಪೆನ್ಸಿಲ್, ಸ್ಕೆಚ್ ಪೆನ್ ಲೈಟರ್ ಗಳನ್ನು ಬಹುಮಾನವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಂಗಡಿ ಗ್ಯಾಸ್ ಸರ್ವಿಸನ ಮಾಲಕರಾದ ಚಂದ್ರಕಾಂತ ಅಂಗಡಿ, ಹಳಿಯಾಳ ಕಾರ್ಯನೀರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಸುಮಂಗಲಾ ಅಂಗಡಿ, ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿನಿಯರು, ಗ್ರಾಹಕ ಮಹಿಳೆಯರು ಇತರರು ಇದ್ದರು.

Leave a Comment