• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

21ನೇ ಶತಮಾನದ ಭಾರತದ ಭೂಪಟ

February 15, 2021 by Sachin Hegde Leave a Comment

ರಾಷ್ಟ್ರೀಯ ಮೂಲ ಸೌಕರ್ಯ ಯೋಜನೆಗಳಾದ ನದಿಗಳ ಸಂಪರ್ಕ, ಕೈಗಾರಿಕಾ ಕಾರಿಡಾರ್ ಗಳ ರಚನೆ ಮತ್ತು ಚತುರ ವಿದ್ಯುತ್ ವ್ಯವಸ್ಥೆಗಳನ್ನು ಸ್ಥಾಪಿಸಲು ನಕ್ಷೆಗಳು ಮತ್ತು ನಿಖರವಾದ ಭೂ ಪ್ರಾದೇಶಿಕ ದತ್ತಾಂಶ ಮಹತ್ವದ ಪಾತ್ರವಹಿಸುತ್ತದೆ.

ಡಿಜಿಟಲ್ ಇಂಡಿಯಾ, ಸ್ಮಾರ್ಟ್ ನಗರಗಳು, ಇ ಕಾಮರ್ಸ್, ಡ್ರೋನ್ ಗಳ ಬಳಕೆಗೆ ಸ್ವಾಯತ್ತತೆ, ವಿತರಣೆ, ವ್ಯವಸ್ಥಾಪನಾ ತಂತ್ರಗಾರಿಕೆ ಮತ್ತು ನಗರ ಸಾರಿಗೆಯಂತಹ ರೋಮಾಂಚಕ ತಂತ್ರಜ್ಞಾನಗಳು, ಹೆಚ್ಚಿನ ಆಳ, ಪರಿಹಾರ, ನಿಖರತೆಯೊಂದಿಗೆ ಸಾಗಲಿದೆ.

ಕೃಷಿ, ಹಣಕಾಸು, ನಿರ್ಮಾಣ ತಂತ್ರಜ್ಞಾನ, ಗಣಿಗಾರಿಕೆ ಮತ್ತು ಸ್ಥಳೀಯ ಉದ್ಯಮಗಳು, ಭೂ ಪ್ರಾದೇಶಿಕ ದತ್ತಾಂಶ ತಂತ್ರಜ್ಞಾನ, ಭೂಪಟದಂತಹ ಪ್ರತಿಯೊಂದು ನವೀನ ತಂತ್ರಜ್ಞಾನಗಳ ಮೂಲಕ ಮಹತ್ವದ ಲಾಭ ಗಳಿಸಲು ಸಹಕಾರಿಯಾಗಲಿದೆ.

ಆದರೂ ಅಸ್ಥಿತ್ವದಲ್ಲಿರುವ ಆಡಳಿತ, ಭೂಪಟದ ಉದ್ಯಮದ ಮೇಲೆ ಮಹತ್ವದ ನಿರ್ಬಂಧಗಳನ್ನು ವಿಧಿಸಿದೆ. ನಕ್ಷೆಗಳ ರಚನೆಯಿಂದ ಹಿಡಿದು ಪ್ರಸಾರದವರೆಗೆ, ವಿವಿಧ ಪರವಾನಗಿಗಳನ್ನು ಪಡೆಯುವ ಅಗತ್ಯವಿದೆ. ಇಂತಹ ಪೂರ್ವ ಅನುಮತಿಗಳ ತೊಡಕಿನ ವ್ಯವಸ್ಥೆಯನ್ನು ಅನುಸರಿಸುವುದರಿಂದ ನಿಯಂತ್ರಿತ ನಿರ್ಬಂಧಗಳ ಅನುಸರಣೆಗೆ ಸಹಕಾರಿಯಾಗಲಿದೆ. ಇದರಿಂದ ದೇಶದ ನವೋದ್ಯಮಗಳನ್ನು ಅನಗತ್ಯವಾಗಿ ರೆಡ್ ಟೇಪಿಸಂಗೆ ಒಳಪಡಿಸಿದಂತಾಗಿದೆ. ಇದರಿಂದ ದಶಕಗಳಿಂದ ದೇಶದಲ್ಲಿ ನಕ್ಷೆ ತಂತ್ರಜ್ಞಾನ ದೇಶದ ಅವಿಷ್ಕಾರಕ್ಕೆ ಅಡ್ಡಿಯಾಗಿದೆ ಎಂಬುದನ್ನು ಗೌರವಾನ್ವಿತ ಪ್ರಧಾನಮಂತ್ರಿಯವರು ಗಮನಿಸಿದ್ದಾರೆ.

ದೇಶದ ಆತ್ಮ ನಿರ್ಭರ್ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ಮತ್ತು 5 ಶತಕೋಟಿ ಡಾಲರ್ ಆರ್ಥಿಕತೆ ರಾಷ್ಟ್ರವಾಗಿ ಹೊರ ಹೊಮ್ಮಲು ಭೂ ಪ್ರಾದೇಶಿಕ ದತ್ತಾಂಶ ಮತ್ತು ಭೂಪಟ ವಯಲದಲ್ಲಿ ಅನ್ವಯವಾಗುವ ನಿಯಮಗಳು ಇನ್ನು ಮುಂದೆ ಅಮೂಲಾಗ್ರವಾಗಿ ಬದಲಾವಣೆಯಾಗಲಿವೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ದೇಶದ ಭೂಪಟ ನೀತಿಯಲ್ಲಿ ವಿಶೇಷವಾಗಿ ಭಾರತೀಯ ಕಂಪೆನಿಗಳಿಗೆ ಹೆಚ್ಚಿನ ಬದಲಾವಣೆಗಳನ್ನು ಪ್ರಕಟಿಸುತ್ತಿದೆ. ಜಾಗತಿಕವಾಗಿ ಲಭ್ಯವಿರುವುದನ್ನು ಭಾರತದಲ್ಲಿ ನಿರ್ಬಂಧಿಸುವ ಅಗತ್ಯವಿಲ್ಲ ಮತ್ತು ನಿರ್ಬಂಧಿತವಾಗಿದ್ದ ಭೂ ದತ್ತಾಂಶದ ಮಾಹಿತಿ ಈಗ ದೇಶದಲ್ಲಿ ಉಚಿತವಾಗಿ ಲಭ್ಯವಿರಲಿದೆ. ಇನ್ನು ಮುಂದೆ ನಮ್ಮ ವಿವಿಧ ನಿಗಮಗಳು ಮತ್ತು ನಾವೀತ್ಯತಾ ವಲಯದವರು ನಿರ್ಬಂಧಗಳಿಗೆ ಒಳಪಡುವುದಿಲ್ಲ ಅಥವಾ ಭಾರತದ ಭೂ ಪ್ರದೇಶದೊಳಗೆ ಭೂ ಪ್ರಾದೇಶಿಕ ದತ್ತಾಂಶಗಳನ್ನು, ನಕ್ಷೆಗಳನ್ನು ಸಂಗ್ರಹಿಸುವ, ಉತ್ಪಾದಿಸುವ, ತಯಾರಿಸುವ, ಪ್ರಸಾರ ಮಾಡುವ, ಪ್ರಕಟಿಸುವ, ಭೂ ಪ್ರಾದೇಶಿಕ ಡಿಜಿಟಲ್ ದತ್ತಾಂಶವನ್ನು ಮೇಲ್ದರ್ಜೆಗೇರಿಸುವ ಮತ್ತು ದೇಶದೊಗಳಗೆ ನಕ್ಷೆಗಳ ವಿಚಾರದಲ್ಲಿ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದೆ.

ನಮ್ಮ ನವೋದ್ಯಮಗಳು ಮತ್ತು ಭೂ ಪಟ ರಚಿಸುವ ನಾವೀನ್ಯತೆ ವಲಯದವರು ಸ್ವಯಂ ಆಗಿ ಪ್ರಾಮಾಣಿಕರಿಸಲು, ಉತ್ತಮ ಆದೇಶಗಳನ್ನು ಅಳವಡಿಸಿಕೊಳ್ಳಲು, ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಪ್ರದರ್ಶಿಸಲು ಅವಲಂಬಿಸಿರುತ್ತಾರೆ. ಇದರ ಜತೆಗೆ ಭಾರತೀಯ ನಕ್ಷೆ ತಯಾರಿಸುವ ತಂತ್ತಜ್ಞಾನದ ಲಾಭ ಪಡೆಯಲು ಭಾರತೀಯ ಭೂ ವೈಜ್ಞಾನಿಕ ಅವಿಷ್ಕಾರಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಮುಂದಿನ ಪೀಳಿಗೆಯ ನಕ್ಷೆ ತಯಾರಿಕೆ ತಂತ್ರಜ್ಞಾನ ಜಗತ್ತಿನಾದ್ಯಂತ ಇರುವ ಅಂಶಗಳು ಅಡಕಗೊಳ್ಳುತ್ತಿದ್ದು, ಈ ನೀತಿ ನಾವೀನ್ಯಕಾರರಿಗೆ ನಕ್ಷೆ ತಯಾರಿಕೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಅನುವು ಮಾಡಿಕೊಡುತ್ತದೆ ಮತ್ತು ಅಂತಿಮವಾಗಿ ಜನಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಸಣ್ಣ ಉದ್ಯಮ ವಲಯವನ್ನು ಸಬಲೀಕರಣಗೊಳಿಸುತ್ತದೆ. ಭಾರತ ನಕ್ಷೆ ತಯಾರಿಕೆಯಲ್ಲಿ ಶಕ್ತಿಶಾಲಿಯಾಗಿ ಹೊರ ಹೊಮ್ಮುವುದನ್ನು ಎದುರು ನೋಡುತ್ತಿದ್ದೇವೆ. ಭಾರತದ ದೇಶೀಯ ನಕ್ಷೆಗಳನ್ನು ಮುಂದಿನ ಪೀಳಿಗೆ ರಚಿಸುತ್ತದೆ ಮತ್ತು ಜಗತ್ತಿನ ಇತರೆ ಭಾಗಳಿಗೆ ಈ ತಂತ್ರಜ್ಞಾವನ್ನು ಕೊಂಡೊಯ್ಯುತ್ತದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar