ಭಟ್ಕಳ: ಕೋವಿಡ ಕಾರಣದಿಂದ ಸ್ಥಗಿತಗೊಂಡಿದ್ದ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವವೂ ಫೆ.೨೬ರಂದು ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ಇಲ್ಲಿನ ಮಿನಿವಿಧಾನಸೌಧದಲ್ಲಿರುವ ಸಹಾಯಕ ಅಯುಕ್ತರ ಕಚೇರಿಯಲ್ಲಿ ಹಿಂದೂ-ಮುಸ್ಲಿಮ್ ಸಮುದಾಯದೊಂದಿಗೆ ಶಾಂತಿಪಾಲನ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ್ ರವಿಚಂದ್ರ ರಥೋತ್ಸವಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ತಾಲೂಕಾಡಳಿತ ನೀಡಲಿದೆ ಕೋವಿಡ್ ಮುಂಜಾಗ್ರತ ನಿಯಮಗಳನ್ನು ಪಾಲಿಸುತ್ತ ಶಾಂತರೀತಿಯಲ್ಲಿ ರಥೋತ್ಸವ ಆಚರಿಸುವಂತೆ ಎರಡು ಸಮುದಾಯಗಳಲ್ಲಿ ಮನವಿ ಮಾಡಿಕೊಂಡಿರು.ಹನುಮಂತ ದೇವಸ್ಥಾನದ ಅರ್ಚಕರು ಮಾತನಾಡಿ ‘ಫೆ.೧೯ರಂದು ಜಾತ್ರಾ ಮಹೋತ್ಸವದ ಮೊದಲದಿನದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಪ್ರತಿ ವರ್ಷದಂತೆ ಉಳಿದೆಲ್ಲ ಕಾರ್ಯಕ್ರಮವೂ ಜರುಗಲಿದೆ. ಫೆ. ೨೪ರಂದು ಹೂವಿನ ರಥ(ಚಿಕ್ಕ ರಥ)ವೂ ನಡೆಯಲಿದೆ. ಹಾಗೂ ಫೆ.೨೬ರಂದು ಮಹಾರಥೋತ್ಸವ ಹಾಗೂ ಫೆ.೨೮ರಂದು ಓಕುಳಿ ನಡೆಯಲಿದೆ. ಇವೆಲ್ಲವೂ ಧಾರ್ಮಿಕವಾಗಿ ನಡೆಸಿಕೊಂಡು ಬಂದಿರುವAತಹದ್ದಾಗಿದ್ದು, ಎಲ್ಲದಕ್ಕೂ ಸಹಕಾರ ನೀಡಬೇಕು ಎಂದರು.ಇದೇ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಸದ್ಯ ರಥ ಕಟ್ಟುವ ಕಾರ್ಯವೂ ಆರಂಭಗೊAಡಿದ್ದು ದೇವಸ್ಥಾನ ಮಾರ್ಗದ ರಸ್ತೆಯಲ್ಲಿ ವಿಪರೀತ ವಾಹನಗಳ ಓಡಾಟವಾಗಲಿದೆ. ಎರಡು ಕಡೆಯಿಂದ ಬರುವ ವಾಹನಗಳು ದೇವಸ್ಥಾನದ ಹಿಂಬದಿಯಿAದ ಓಡಾಟ ನಡೆಸಿದ್ದು ಅಪಘಾತದ ಜೊತೆಗೆ ಇಕ್ಕಟಿನ ರಸ್ತೆಯಾದ ಹಿನ್ನೆಲೆ ಮಾರಿಗುಡಿ ದೇವಸ್ಥಾನದಿಂದ ಮುಂಡಳ್ಳಿ ಯಕಡೆಗೆ ತೆರಳುವ ಏಕಮುಖ ಸಂಚಾರದ ರಸ್ತೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿ ಭಾರಿವಾಹನ, ಕಾರು, ಆಟೋ ರಿಕ್ಷಾಗಳು ಸಂಚರಿಸುವAತೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.ಇದಕ್ಕೆ ಸಿಪಿಐ ದಿವಾಕರ ಅವರು ಈ ಬಗ್ಗೆ ಒಂದು ಬಾರಿ ಸ್ಥಳ ಭೇಟಿ ನಡೆಸಿ ರಸ್ತೆಯಲ್ಲಿನ ಪಾರ್ಕಿಂಗ ವ್ಯವಸ್ಥೆಗೆ ಒಂದೂ ಸೂಕ್ತ ಕ್ರಮ ಜರುಗಿಸಿ ಬಳಿಕ ವ್ಯವಸ್ಥಿತವಾಗಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಲಿದ್ದೇವೆ ಎಂದರು.ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಪರ್ವೇಜ ಕಾಶೀಂಜಿ ಮಾತನಾಡಿ ‘ಕೋವಿಡನಿಂದ ಎಲ್ಲಾ ಧರ್ಮದ ಹಬ್ಬ, ಊರ ಜಾತ್ರೆಗೆ ಸಮಸ್ಯೆಯಾಗಿದೆ. ಆದರೆ ಈಗ ಕೋರೋನಾ ಇಳಿಮುಖವಾಗುತ್ತಿದ್ದು ಜನರು ಜಾಗೃತರಾಗಿಯೇ ಹಬ್ಬದ ಆಚರಣೆ ಮಾಡಬೇಕು ಹಾಗೂ ಊರ ರಥೋತ್ಸವ ಕಳೆದ ವರ್ಷ ನಿಂತಿದ್ದರ ಹಿನ್ನೆಲೆ ಫೆ.೨೬ರಂದು ನಡೆಸಲು ತೀರ್ಮಾನಿಸಿದಂತೆ ಉತ್ತಮ ರೀತಿಯಲ್ಲಿ ನಡೆಯಲಿ ಹಾಗೂ ಜಾತ್ರಾ ರಥೋತ್ಸವಕ್ಕೆ ಪುರಸಭೆಯಿಂದ ಆಗಬೇಕಾದ ಎಲ್ಲಾ ಸಹಕಾರ ನೀಡಲಿದ್ದೇವ ಎಂದರು.ಸಭೆಯಲ್ಲಿ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಹಿರಿಯರಾದ ಶಂಕರ ಶೆಟ್ಟಿ, ನಾಮಧಾರಿ ಸಮಾಜದ ಗೌರವಧ್ಯಕ್ಷ ಎಂ.ಆರ್.ನಾಯ್ಕ, ತಂಝೀಮ್ ಹಾಗೂ ಜಿ.ಡಿ.ಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ಮಾಜಿ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಮುಂತಾದವರು ಇದ್ದರು.

Leave a Comment