ಹಳಿಯಾಳ:- ಬಿಕೆ ಹಳ್ಳಿಯ ಜಾತ್ರಾ ಮಹೋತ್ಸವ ಹಿನ್ನೆಲೆ ದಿ.19 ರಂದು ಮಹಾರಥೋತ್ಸವ ಅಂಗವಾಗಿ ಸಂಪೂರ್ಣ ಬಂದೋಬಸ್ತ್ ಜೊತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹಳಿಯಾಳ ಸಿಪಿಐ ಮೋತಿಲಾಲ್ ಪವಾರ್ ಹೇಳಿದ್ದಾರೆ.

ಬಿಕೆ ಹಳ್ಳಿ ಜಾತ್ರೆ ಹಿನ್ನೆಲೆ ಪೆÇಲೀಸರು ಮುಂಜಾಗೃತಾ ಕ್ರಮವಾಗಿ ಗ್ರಾಮದ ಹೊರಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ, ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಜಾತ್ರೆಗೆ ಆಗಮಿಸುವ ಸಾರ್ವಜನಿಕರು ಕಳ್ಳಕಾಕರರಿಂದ ಎಚ್ಚರದಿಂದಿರಬೇಕು ಎಂದಿರುವ ಅವರು ಎಲ್ಲೆಡೆ ಸಿಸಿ ಕ್ಯಾಮೇರಾ ಅಳವಡಿಸಿಸಲಾಗಿದೆ ಎಂದು ತಿಳಿಸಿದ್ದಾರೆ.
ರಥೋತ್ಸವದ ದಿನ ಗ್ರಾಮದಲ್ಲಿ ಒಂದು ವಾಹನಗಳು ಇರದೆ ಎಲ್ಲವನ್ನು ಊರ ಹೊರಗೆ ನಿಲುಗಡೆ ಮಾಡಿ ಸಮಸ್ಯೆ ಆಗದಂತೆ ಜಾತ್ರೆ ನಡೆಸಲು ಗ್ರಾಮಸ್ಥರಿಗೆ ಕೊರಿದ್ದರಿಂದ ಅವರು ಇದಕ್ಕೆ ಒಪ್ಪಿದ್ದಾರೆಂದು ತಿಳಿಸಿರುವ ಪೋಲಿಸರು ಯಾವುದಾದರೂ ಅನಾಹುತಗಳು ಸಂಭವಿಸಿದಲಿ ಕೂಡಲೇ ಪೆÇಲೀಸರಿಗೆ ಮಾಹಿತಿ ಒದಗಿಸಬೇಕೆಂದು ಪಿಎಸ್‍ಐ ಯಲ್ಲಾಲಿಂಗ್ ಕುನ್ನೂರ್ ಅವರು ಮನವಿ ಮಾಡಿದ್ದಾರೆ.
Leave a Comment