ಹಳಿಯಾಳ:- ಹಿಂದೂಗಳ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಹಳಿಯಾಳದ ಕಿಲ್ಲಾ ಕೋಟೆ ಬಳಿ ಹಾಗೂ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿರುವ ಶ್ರೀ ಶಿವಾಜಿ ಮಹಾರಾಜರ ಪ್ರತಿಮೆಗೆ ಹಳಿಯಾಳ ಕ್ಷೇತ್ರದ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರು ಮಾಲಾರ್ಪಣೆ ಮಾಡಿ ಶಿವಾಜಿ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಘಟಕದ ಅಧ್ಯಕ್ಷ ಗಣಪತಿ ಕರಂಜೇಕರ, ಮುಖಂಡರಾದ ಶಿವಾಜಿ ನರಸಾನಿ, ಅನಿಲ್ ಮುತ್ನಾಳೆ, ವಿಲಾಸ ಯಡವಿ, ಯಲ್ಲಪ್ಪಾ ಹೊನ್ನೋಜಿ, ಚಂದ್ರಕಾಂತ ಕಮ್ಮಾರ, ನಾಗರಾಜ ಬಾಂದೇಕರ, ಕೆಕೆಎಮ್‍ಪಿ ಅಧ್ಯಕ್ಷ ಚೂಡಪ್ಪಾ ಬೋಬಾಟಿ, ಪ್ರಮುಖರಾದ ತುಕಾರಾಮ ಪಟ್ಟೇಕರ, ಮೋಹನ ಮೌಳಂಗಿ ಇತರರು ಇದ್ದರು.

Leave a Comment