ಹಳಿಯಾಳ:- ತಂತ್ರಜ್ಞಾನದಿಂದ ಕೇವಲ ದೊಡ್ಡ ನಗರಗಳು ಅಭಿವೃದ್ದಿ ಸಾಧಿಸುತ್ತಿವೆ. ಆದರೆ ಹಳ್ಳಿಗಳ ಸರ್ವಾಂಗೀಣ ಅಭಿವೃದ್ದಿಗೆ ಕೈ ಜೋಡಿಸಬೇಕಾಗಿದೆ. ಇಂದಿನ ದಿನಗಳಲ್ಲಿ ದುಡಿಯುವ ಪ್ರತಿ ಕೈಗೂ ಉದ್ಯೋಗ ನೀಡುವುದು ದುಸ್ತರವಾಗಿದ್ದು, ಸ್ವಯಂ ಉದ್ಯೋಗಗಳನ್ನು ಅವಲಂಬಿಸಬೇಕಾಗಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ ಮಂಜುನಾಥ ಮಹಾರಾಜರು ಅಭಿಪ್ರಾಯಪಟ್ಟರು.

ಪಟ್ಟಣದ ಟೊಸುರ್ ಟವರ್ನಲ್ಲಿಯ ಆರ್ವೈಇ ಸ್ಕೀಲ್ ಸೆಂಟರ್ನ ಪ್ರಾಕ್ಸೀನ್ ತಂತ್ರಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ಯುವ ಸಾಪ್ಟವೇರ್ ಇಂಜನಿಯರ್ಗಳಿಗೆ ಒಂದು ದಿನದ ಕೌಶಲ್ಯ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನವು ಅತ್ಯಂತ ವೇಗವಾಗಿ ಅಭಿವೃದ್ದಿಯಾಗುತ್ತಿದ್ದು, ಕೌಶಲ್ಯದೊಂದಿಗೆ ಉತ್ತಮ ತರಬೇತಿಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಉದ್ದಿಮೇಗಳನ್ನು ಸ್ಥಾಪಿಸಬೇಕಾಗಿದೆ ಎಂದರು.
ಶ್ರೀಕ್ಷೇತ್ರ ಕಾಶಿಯ ಸೋಹಂ ಚೈತನ್ಯಪುರಿ ಮಹಾಸ್ವಾಮಿಗಳು ಮಾತನಾಡಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಂತ್ರಜ್ಞಾನ ಸುಲಭವಾಗಿ ದೊರೆಯ ಬೇಕಾಗಿದೆ. ಇಡೀ ವಿಶ್ವದಲ್ಲಿಯೇ ಭಾರತವು ಸಾಪ್ಟವೇರ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು ಯುವ ಇಂಜನಿಯರ್ಗಳ ಕಠಿಣ ಪರಿಶ್ರಮದಿಂದ ಉನ್ನತಿ ಸಾಧ್ಯವಿದೆ ಎಂದರು.
ಸಾಪ್ಟವೇರ್ ಉದ್ಯಮಿ ಮತ್ತು ಪ್ರಾಕ್ಸೀನ್ ಟೆಕ್ ಕಂಪನಿಯ ಮಾಲಿಕ ನಾರಾಯಣ ಠೊಸೂರ ಅವರು ಮಾತನಾಡಿ, ಹಳಿಯಾಳದಂತಹ ಚಿಕ್ಕ ಊರಿನಲ್ಲಿ ದೊಡ್ಡ ಮಟ್ಟದ ಪ್ರಾಜೇಕ್ಟ್ಗಳನ್ನು ಮಾಡುವುದರ ಮೂಲಕ ಯುವ ಇಂಜನಿಯರ್ಗಳಿಗೆ ಅವಕಾಶಗಳನ್ನು ತೆರೆಯಲಾಗಿದೆ. ಇದರ ಸದುಪಯೋಗ ಪಡಿಸಿಕೊಂಡು ಸಾಪ್ಟವೇರ್ ಕ್ಷೇತ್ರಕ್ಕೆ ತಮ್ಮದೇ ಕೂಡುಗೆ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಖೇಮಣ್ಣಾ ಠೊಸುರ, ರಘು ಸಾಂಬ್ರೇಕರ, ಕಲ್ಲಯ್ಯ ಪೂಜಾರ, ಶ್ರೀಹರಿ ದೇಸಾಯಿ, ಅನಿಲ್ ಒಡೆಯರ, ಹರೀಶ ತಡಕೊಡ, ಸಂತೋಷ ಅಣ್ಣಿಗೇರಿ, ಶೀವಾಜಿ ನರಸಾನಿ ಇದ್ದರು.
Leave a Comment