ಭಟ್ಕಳ: ತಾಲೂಕಿನ ಮುರ್ಡೇಶ್ವರದ ನೇತ್ರಾಣಿಯ ದ್ವೀಪದಲ್ಲಿರುವ ಅತಿ ಪುರಾತನವಾದ ಜಟ್ಟಿಗ ದೇವಸ್ಥಾನದ ವರ್ಧಂತ್ಯೋತ್ಸವ ಕಾರ್ಯಕ್ರಮವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ಬುಧವಾರ ದಂದು ಜರುಗಿತು
ಮುಂಜಾನೆ ಇಲ್ಲಿನ ಬಂದರ ಧಕ್ಕೆಯಿಂದ ಸುಮಾರಿಗೆ 10 ರಿಂದ 13 ಬೋಟಗಳಲ್ಲಿ 600 ರಿಂದ 800 ಜನರು ನೇತ್ರಾಣಿಯ ಜಟಗೇಶ್ವರ ದೇವರ ಪೂಜೆಗೆ ತೆರಳಿದ್ದಾರೆ.

ನೇತ್ರಾಣಿ ಜಟ್ಟಿಗ ದೇವಸ್ಥಾನವು ತಾಲೂಕಿನಲ್ಲೇ ಅತಿ ಪುರಾತನ ದೇವಸ್ಥಾನ ಎಂದು ಖ್ಯಾತಿಯನ್ನು ಪಡೆದಿದ್ದು, ಕಡಲ ತಡಿಯ ಮೀನುಗಾರಿಕೆಯನ್ನು ನಡೆಸುವ ಮೀನುಗಾರರ ಆರಾಧ್ಯ ದೈವವಾಗಿದೆ. ಈ ಜಟ್ಟಿಗನು ಮೀನುಗಾರರ ವೃತ್ತಿ ಹಾಗು ಅವರ ಕುಟುಂಬವನ್ನು ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ನಡೆದು ಬಂದಿದೆ. ಮೀನುಗಾರರ ವೃತ್ತಿಯಲ್ಲಿ ಮೀನುಗಾರರಿಗೆ ಉತ್ತಮವಾದ ಫಲವನ್ನು ನೀಡುವುದು ಈ ಜಟ್ಟಿಗ ದೇವನೆ ಎಂಬ ಬಲವಾದ ನಂಬಿಕೆ ಕಡಲ ತಡಿಯ ಮೀನುಗಾರರಲ್ಲಿದೆ.
ಪ್ರತಿವರ್ಷದಂದು ಈ ಸಂಧರ್ಭದಲ್ಲಿ ಮುರ್ಡೇಶ್ವರ, ಭಟ್ಕಳದ ಎಲ್ಲಾ ಮೀನುಗಾರರು ಇಲ್ಲಿನ ಬಂದರ್ ಸಮುದ್ರ ದಡದಿಂದ ನೇತ್ರಾಣಿ ದ್ವೀಪದಲ್ಲಿನ ಜಟಗ ದೇವನಿಗೆ ಪೂಜೆ ಸಲ್ಲಿಸಲು ಜಟ್ಟಿಗನ ಸನ್ನಿದಾನಕ್ಕೆ ಬಂದು ಸೇವೆಯನ್ನು ಸಲ್ಲಿಸುವುದು ಸಂಪ್ರದಾಯವಾಗಿದೆ. ಇಲ್ಲಿ ಇನ್ನೊಂದು ಸೋಜಿಗದ ವಿಷಯ ಎಂದರೆ ನೇತ್ರಾಣಿಯಲ್ಲಿ ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಈ ಮೂರು ಧರ್ಮದ ದೇವರುಗಳನ್ನು ಪೂಜಿಸಲಾಗುತ್ತಿದ್ದು, ಈ ಕ್ಷೇತ್ರದಲ್ಲಿ ಕುರಿ ಕೋಳಿಗಳನ್ನು ಜೀವಂತ ತಂದು ಬಿಡಲಾಗುತ್ತದೆ. ತಂದು ಬಿಟ್ಟ ಮೇಲೆ ವಾಪಸ್ಸು ತೆಗೆದುಕೊಂಡ ಹೋದ ವಾಡಿಕೆಯಿಲ್ಲವಾಗಿದೆ. ಇಲ್ಲಿನ ಬಂದರ ಕಡೆ ತೀರದಿಂದ ಬೆಳಿಗ್ಗೆ ಸುಮಾರು 7 ಗಂಟೆಯಿಂದ 15 ಬೋಟಗೂ ಅಧಿಕ ಭಕ್ತರು ಮೀನುಗಾರರು ನೇತ್ರಾಣಿ ದ್ವೀಪಕ್ಕೆ ಸುಂದರ ಸಮುದ್ರ ಯಾನವನ್ನು ಬೆಳೆಸಿ ಅಲ್ಲಿ ಮಧ್ಯಾಹ್ನ 12.30 ಸುಮಾರಿಗೆ ಅರ್ಚಕರ ನೇತೃತ್ವದಲ್ಲಿ ಸಕಲ ಪೂಜಾ ವಿಧಿ ವಿಧಾನಗಳು ಜರುಗಿವು.
ಕಡಲಿಗಿಳಿಯುವ ಮೊದಲು ಮೀನುಗಾರರು ಈ ಮೂರು ದೇವರಿಗೆ ಪೂಜೆ ಸಲ್ಲಿಸಿ ಮೀನುಗಾರಿಕೆ ತೆರಳುವುದು ಸಂಪ್ರದಾಯವಾಗಿದ್ದು ರೂಢಿ, ಮೀನುಗಾರಿಕೆಗೆ ತೆರಳುವಾಗ ಇದೇ ಮಾರ್ಗದಲ್ಲಿ ಹೋಗುವಾಗ ಪೂಜೆ ಸಲ್ಲಿಸಿ ಮುಂದೆ ಮೀನುಗಾರಿಕೆಗೆ ತೆರಳುತ್ತಾರೆ.
ಈ ಸಂದರ್ಭದಲ್ಲಿ ಪರ್ಶಿಯನ್ ಬೋಟ್ ಚಾಲಕರು, ಕಲಾಸಿಗಳು, ಮೀನುಗಾರ ಮುಖಂಡರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
Leave a Comment