ಭಟ್ಕಳ: ಬೇರೆ ವ್ಯಕ್ತಿಯ ಬೈಕೊಂದನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡು ಇಟ್ಟುಕೊಡಿದ್ದ್ದಾನೆ ಎನ್ನುವ ಎಂದು 1995 ನೇ ಇಸವಿಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಧಿಸಿದತೆ ವ್ಯಕ್ತಿಯೊರ್ವನನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಂದ ವಶಕ್ಕೆ ನೀಡಿದ ಪ್ರಕರಣ ಬುಧವಾರ ನಡೆದಿದೆ.ಮದಿನಾ ಕಾಲನಿ ನಿವಾಸಿ ಮಹ್ಮದ ಮೀರಾ ಕೋಲಾ ಬಂಧಿತ ಆರೋಪಿ.

ಈತನು 1995 ರಲ್ಲಿ ಸಂಬಧಿಕನೊರ್ವನ ಬೈಕನ್ನು ಅಕ್ರಮವಾಗಿ ತನ್ನ ವಶಕ್ಕೆ ಇಟ್ಟುಕೊಂಡಿದ್ದ. ಈ ಕುರಿತು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಮ್ಮೆ ಠಾಣೆಗೆ ಬಂದ ವ್ಯಕ್ತಿ ನಂತರ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಕೋವಿಡ್ ಸಂದರ್ಬದಲ್ಲಿ ಭಟ್ಕಳಕ್ಕೆ ಬಂದ ಇತನ ಮಾಹಿತಿ ಪಡೆದ ಭಟ್ಕಳ ಸಿಪಿಐ ದಿವಾಕರ ನೇತೃತ್ವದ ತಂಡ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದೆಸದರಿ ಪ್ರಕರಣದ ಪತ್ತೆ ಕಾರ್ಯವನ್ನು ಶ್ರೀ ಶಿವಪ್ರಕಾಶ ದೇವರಾಜು ಐ.ಪಿ.ಎಸ್, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಕಾರವಾರ ಹಾಗೂ ಶ್ರೀ ಎಸ್ ಭದ್ರಿನಾಥ ಕೆ.ಎಸ್.ಪಿ.ಎಸ್. ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಕೆ.ಯು ಬೆಳ್ಳಿಯಪ್ಪ ಮಾನ್ಯ ಪೊಲೀಸ ಉಪಾಧೀಕ್ಷಕರು ಭಟ್ಕಳ ಉಪ ವಿಭಾಗ ರವರ ನೇತ್ರತ್ವದಲ್ಲಿ ಭಟ್ಕಳ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದಿವಾಕರ ಪಿ.ಎಮ್ ಪೊಲೀಸ್ ಸಬ್ ಇನ್ಸಪೆಕ್ಟರಗಳಾದ ಶ್ರೀ ಭರತಕುಮಾರ ವಿ. ಹೆಚ.ಡಿ ಕುಡಗುಂಟಿ, ಹಾಗೂ ಪ್ರೋಬೆಷನರಿ ಪಿ.ಎಸ್.ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಯವರಾದ ದಿನೇಶ ನಾರಾಯಣ ನಾಯಕ, ಈರಣ್ಣ ಪೂಜೇರಿ, ಲೋಕಪ್ಪ ಕತ್ತಿ ರವರ ತಂಡವು ಕಳೆದ 25 ವರ್ಷಗಳಿಂಧ ತಲೆ ಮರೆಸಿಕೊಂಡಿದ್ದ ಆರೋಫಿತನನ್ನು ಪತ್ತೆ ಮಾಡಿರುತ್ತದೆ.
Leave a Comment