ಹಳಿಯಾಳ :- ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಜಯ ಕರ್ನಾಟಕ ಸಂಘಟನೆಯ ಕಚೇರಿಯಲ್ಲಿ ಹಳಿಯಾಳ ತಾಲೂಕಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆದು ಹಳಿಯಾಳ ತಾಲೂಕಿನ ನೂತನ ತಾಲೂಕಾಧ್ಯಕ್ಷರಾಗಿ ಅಮರ ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.

ಜಯ ಕರ್ನಾಟಕ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪದಾಧಿಕಾರಿಗಳ ಆಯ್ಕೆ, ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಂಘಟನೆಯ ಗೌರವಾಧ್ಯಕ್ಷರಾಗಿ ಚಾಂದಸಾಬ ಕಟ್ಟಿಮನಿ, ಉಪಾಧ್ಯಕ್ಷರಾಗಿ ಸುಭಾಷ ಕೊಲಕರ, ಕಾರ್ಯದರ್ಶಿಯಾಗಿ ಮಹೇಶ ಹುಲಕೊಪ್ಪ, ಪ್ರ.ಕಾರ್ಯದರ್ಶಿಯಾಗಿ ಪರಶುರಾಮ ಶಹಪುರಕರ, ಖಜಾಂಚಿಯಾಗಿ ದಯಾನಂದ ನುಚ್ಚಂಬ್ಲಿ, ಅನಿಸ ಪಿರವಾಲೆ, ಸಂಚಾಲಕರಾಗಿ ನಾಗರಾಜ ಮರಾಠೆ, ಮಹದೇವ ಚಲವಾದಿ, ಕಾರ್ಯಕಾರಣಿ ಸಮೀತಿ ಅಧ್ಯಕ್ಷರಾಗಿ ಕಿರಣ ಕಮ್ಮಾರ, ರಾಕೇಶ ಚಕ್ರಸಾಲಿ, ಕ್ರೀಡಾ ಅಧ್ಯಕ್ಷರಾಗಿ ಸಂಜು ಚಲವಾದಿ ಅವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಮುಖರಾದ ಯಲ್ಲಪ್ಪ ಮಾಲವಣಕರ, ದತ್ತಾ ಬಾಂದೇಕರ, ಶಿರಾಜ ಮುನವಳ್ಳಿ, ದುರ್ಗಪ್ಪಾ ಇತರರು ಇದ್ದರು.
Leave a Comment