‘ನಿವೃತ್ತ ಗ್ರಾಮ ಸೇವಕ ಅನಂತ ಮಹಾಲೆಯಿಂದ ಅನ್ಯಾಯದಲ್ಲಿ ಖಾಲಿ ಹಾಳೆಯಲ್ಲಿ ಸಹಿ ಪಡೆದ ತಹಸೀಲ್ದಾರ ಕಾರು ಚಾಲಕ.’
ಭಟ್ಕಳ: ತಾಲೂಕಿನ ಸೂಸಗಡಿ ಭಾಗದ ಗ್ರಾಮ ಸೇವಕರಾಗಿ ಅನಂತ ಮಹಾಲೆ ಎಂಬುವವರು ಸುಮಾರು 35 ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಗೊಂಡಿದ್ದು ಮಾನವೀಯತೆ ಹಾಗೂ ಸರಕಾರದ ಆದೇಶದಂತೆ ಇವರ ನಿವೃತ್ತಿ ನಂತರ ಅವರ ಕುಟುಂಬದ ಓರ್ವರಿಗೆ ಕೆಲಸ ನೀಡಬೇಕೆಂಬ ಆದೇಶವಿದ್ದರು ಸಹ ‘ನಮಗೆ ಕೆಲಸ ಬೇಕಿಲ್ಲ ಎಂದು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ತಹಸೀಲ್ದಾರ ಕಾರು ಚಾಲಕ ಗಣಪತಿ ಶೇಟ್ ಎನ್ನುವವರು ಮೋಸದಲ್ಲಿ ಸಹಿ ಪಡೆದು ತನಗೆ ಆ ಕೆಲಸ ಹಾಕಿಸಿಕೊಂಡಿರುವ ಬಗ್ಗೆ ನಿವೃತ್ತ ಗ್ರಾಮ ಸೇವಕ ಅನಂತ ಮಹಾಲೆ ನೇರ ಆರೋಪ ಮಾಡಿದ್ದಾರೆ.

ಕಂದಾಯ ಇಲಾಖೆಯ ಗ್ರಾಮ ಸೇವಕ ಹುದ್ದೆಯಲ್ಲಿ ಕೆಲಸ ಮಾಡಿದ ವ್ಯಕ್ತಿ ಅವನ ನಿವೃತ್ತಿ ನಂತರ ಅವರ ಪುತ್ರ, ಪುತ್ರಿ ಅಥವಾ ಪತ್ನಿಗೆ ಆ ಕೆಲಸ ನೀಡಬೇಕೆಂದು ಸರಕಾರದ ನಿಯಮವಿದೆ. ಆದರೆ ಕಂದಾಯ ಇಲಾಖೆಯಲ್ಲಿ ಸತತ 35 ಕೆಲಸ ಮಾಡಿದ ನಿವೃತ್ತ ಗ್ರಾಮ ಸೇವಕನ ಕುಟುಂಬಕ್ಕೆ ಕೆಲಸ ಸಿಗಬಾರದು ಎಂಬ ದುರುದ್ದೇಶದಿಂದ ಗ್ರಾಮ ಸೇವಕರ ಮನೆಗೆ ತೆರಳಿ ಅವರಿಂದ ಖಾಲಿ ಹಾಳೆಯಲ್ಲಿ ಸಹಿ ಪಡೆದು ಅವರಿಂದ ಕೆಲಸ ತಪ್ಪಿಸುವ ಪ್ರಯತ್ನ ನಡೆದಿರುವುದು ಬಯಲಾಗಿದೆ.ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡದೇ ತಹಸೀಲ್ದಾರ ಅವರು ಗುತ್ತಿಗೆ ಆಧಾರದಲ್ಲಿ ತಹಸೀಲ್ದಾರ ಕಾರು ಚಾಲಕ ಹಾಗೂ ನಿವೃತ್ತ ಗ್ರಾಮ ಸೇವಕನ ಕೆಲಸ ಗಿಟ್ಟಿಳಿಸಿಕೊಳ್ಳಲು ಯತ್ನಿಸಿದ ಗಣಪತಿ ಶೇಟ್ ಅವರು ಅಧಿಕಾರಿಗಳ ಸಹಕಾರ ಬೆಂಬಲದಿಂದ ಹಾಗೂ ಕೆಲವೊಂದು ಪಟ್ಟಭಧ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಸಹಾಯಕ ಆಯುಕ್ತರಿಗೆ ಅನುಮೋದನೆ ನೀಡುವ ಹಂತಕ್ಕೆ ಕೆಲಸ ನಡೆಸಲಾಗಿದ್ದು, ಓರ್ವ ಗ್ರಾಮ ಸೇವಕ ಹುದ್ದೆಯ ಅನುಭವ ಇರದ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗೆ ಗ್ರಾಮ ಸೇವಕ ಹುದ್ದೆಯನ್ನು ನೀಡುವುದರ ಮೂಲಕ ಹಲವಾರು ವರ್ಷಗಳಿಂದ ನಿಸ್ವಾರ್ಥದಿಂದ ಕಂದಾಯ ಇಲಾಖೆಗೆ ಸೇವೆ ಸಲ್ಲಿಸಿದ ಅನಂತ ಮಹಾಲೆ ಅವರ ಕುಟುಂಬಕ್ಕೆ ಅನ್ಯಾಯ ಮಾಡಿದಂತಾಗಿದೆ.
ಸಹಿ ಪಡೆದ ರೀತಿ ಅರಿಯದೇ ಅನುಮೋದನೆಗೆ ಕಳುಹಿಸಿದ ತಹಸೀಲ್ದಾರ:ತಹಸೀಲ್ದಾರ್ ಮುಂದೆ ನಿವೃತ್ತ ಗ್ರಾಮ ಸೇವಕ ಬಾರದೇ ಅವರು ಮುಖಾಮುಖಿಯಲ್ಲಿ ಯಾವುದೇ ಲಿಖಿತ ಹೇಳಿಕೆ ಬರೆದು ಕೊಡದೇ ಇದ್ದರು ತಹಸೀಲ್ದಾರ ಅವರು ಯಾವ ಆಧಾರದ ಮೇಲೆ ಗುತ್ತಿಗೆ ಆಧಾರದಲ್ಲಿ ತಹಸೀಲ್ದಾರ ಕಾರು ಚಾಲಕ ತಂದು ಕೊಟ್ಟ ಸಹಿ ಹಾಕಿ ಪತ್ರವನ್ನು ಅನುಮೋದನೆಗೆ ಸಲ್ಲಿಸಿದ್ದಾರೆಂಬುದು ಕುಟುಂಬದವರ ಪ್ರಶ್ನೆಯಾಗಿದೆ. ಹಾಗಿದ್ದರೆ ಯಾರೋ ಎಲ್ಲಿಯೋ ಯಾರ ಮುಂದೆಯೋ ಸಹಿ ಪಡೆದಲ್ಲಿ ಅದಕ್ಕೆ ತಹಸೀಲ್ದಾರ ಪರಿಶೀಲನೆ ಮಾಡದೇ ಅನುಮೋದಿಸಬಹುದೇ ಎಂಬುದು ಅವರ ಜವಾಬ್ದಾರಿಯನ್ನು ಪ್ರಶ್ನಿಸಿದಂತಾಗಿದೆ.
ಭಟ್ಕಳ ಕಂದಾಯ ಇಲಾಖೆ ವರ್ತಿಸುತ್ತಿದೆ. ಸುಮಾರು 35 ವರ್ಷಗಳಿಂದ ಅನಂತ ಮಹಾಲೆ ಅವರು ಪ್ರಾಮಾಣಿಕವಾಗಿ ನಿಸ್ವಾರ್ಥ ಕೆಲಸ ಮಾಡಿದ್ದು, ತಮ್ಮ ಸುದೀರ್ಘ ಅವದಿಯ ಸೇವೆಯ ನಂತರ ಅವರು ಸೆಪ್ಟೆಂಬರ್ 30ರಂದು ತಹಸೀಲ್ದಾರ ಸಮ್ಮುಖದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಹ ಮಾಡಿ ಗೌರವಿಸಲಾಗಿತ್ತು. ಜನರಿಂದಲೂ ಉತ್ತಮ ಸಂಬಂಧ ಹೊಂದಿರುವ ಇರುವ ಸರಕಾರಕ್ಕೂ ಅವರ ಸೇವೆ ಅತ್ಯಂತ ತೃಪ್ತಿಯನ್ನು ನೀಡಿತ್ತು. ಆದರೆ ಇವರ ಕೆಲಸಕ್ಕೆ ಈಗ ಕಂದಾಯ ಇಲಾಖೆ ಅಧಿಕಾರಿಗಳಿಂದಲೇ ಮಹಾಮೋಸ ನಡೆದಿರುವದು ಬಟಾಬಯಲಾಗಿದ್ದು, ಅಧಿಕಾರಿ ವರ್ಗವನ್ನು ಪ್ರಶ್ನಿಸುವ ಕೆಲಸ ಮಾಡಬೇಕಾಗಿದೆ.ಕಾನೂನು ಮರೆತರೇ ಕಂದಾಯ ಇಲಾಖೆ ಅಧಿಕಾರಿಗಳು:ಮುಖ್ಯವಾಗಿ ನಿವೃತ್ತ ಬಳಿಕ ಓರ್ವ ಗ್ರಾಮ ಸೇವಕ ಹುದ್ದೆಯ ನೇಮಕಾತಿಯಲ್ಲಿ ನಿಯಮದಂತೆ ಯಾರು ಗ್ರಾಮ ಸೇವಕ ಹುದ್ದೆಯಿಂದ ನಿವೃತ್ತರಾಗುತ್ತಾರೋ ಅವರ ಹುದ್ದೆ ಅವರ ಕುಟುಂಬಕ್ಕೆ ನೀಡಬೇಕು ಎಂಬ ಕಾನೂನಿದೆ. ಇದು ತಪ್ಪಿದಲ್ಲಿ ಆ ಹುದ್ದೆ ಭರ್ತಿ ಮಾಡಿಕೊಳ್ಳಲು ಪತ್ರಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಿ ಎಲ್ಲರ ಗಮನಕ್ಕೆ ತಂದು ಕಾನೂನಿನ ಪ್ರಕಾರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಬೇಕಾಗಿದೆ. ಆದರೆ ಇವೆಲ್ಲ ಕಾನೂನನ್ನು ಅಧಿಕಾರಿಗಳು ಮರೆತರೇ ಅಥವಾ ಇದರಲ್ಲಿ ಏನಾದರು ಒತ್ತಡ ಅಥವಾ ಇನ್ಯಾವುದೇ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ನಡೆದಿರುವ ಅನುಮಾನವೂ ವ್ಯಕ್ತವಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.ಆದರೆ ಈ ಯಾವ ನಿಯಮವನ್ನು ಪಾಲಿಸದೇ ಏಕಾಏಕಿ ತಹಸೀಲ್ದಾರ್ ಕಾರು ಚಾಲಕ ಗಣಪತಿ ಶೇಟ್ ಅವರನ್ನು ಗ್ರಾಮ ಸಹಾಯಕ ಹುದ್ದೆಗೆ ನೇಮಕ ಮಾಡಿಕೊಂಡಿರುತ್ತದೆ. ಈ ಬಗ್ಗೆ ತಹಸೀಲ್ದಾರ್ ಅವರ ಗಮನಕ್ಕೆ ತಂದಾಗ ಈ ಹುದ್ದೆ ಮೂರು ತಿಂಗಳ ಹಿಂದೆ ಭರ್ತಿ ಮಾಡಿಕೊಳ್ಳಲಾಗಿದೆ. ಅನಂತ ಮಹಾಲೆ ತನ್ನ ಕುಟುಂಬಕ್ಕೆ ಯಾವುದೇ ಹುದ್ದೆ ಬೇಡ ಎಂದು ಬರೆದುಕೊಟ್ಟಿರುತ್ತಾರೆ ಎಂಬ ಹೇಳಿಕೆ ನೀಡಿದ್ದು ಮಾತ್ರ ಬಾಲಿಸವೇ ಸರಿ.ಇನ್ನು ಮುಖ್ಯವಾಗಿ ಈ ನಿವೃತ್ತ ಗ್ರಾಮ ಸೇವಕ ಅನಂತ ಮಹಾಲೆ ಕುಟುಂಬವು ಕಡು ಬಡತನದಲ್ಲಿ ಜೀವನ ನಡೆಸುತ್ತಿದೆ. ಒಂದು ಗಂಡು, ಒಂದು ಹೆಣ್ಣು ಮಗುವಿದ್ದು ಮಕ್ಕಳಿಬ್ಬರು ಕಲಿಯುತ್ತಿದ್ದಾರೆ. ಈ ಆರ್ಥಿಕ ಸಂಕಷ್ಟದ ಸಮಯದಲ್ಲಿ ಅನಂತ ಮಹಾಲೆ ಯಾವ ಧೈರ್ಯದಲ್ಲಿ ತನ್ನ ಕುಟುಂಬಕ್ಕೆ ಸರಕಾರಿ ಕೆಲಸ ಬೇಡ ಎಂದು ಬರೆದುಕೊಡಲು ಸಾಧ್ಯ ಎಂಬುದನ್ನು ಸಹ ಅಧಿಕಾರಿಗಳು ಮರು ಪರಿಶೀಲಿಸಿ ಸಹಾಯಕ ಆಯುಕ್ತರಿಗೆ ಹುದ್ದೆ ಅನುಮೋದನೆಗೆ ಕಳುಹಿಸಿಕೊಡುವ ಜವಾಬ್ದಾರಿಯುತ ಕೆಲಸ ಮಾಡಬಹುದಾಗಿತ್ತು. ಎರಡು ಹುದ್ದೆಯಲ್ಲಿ ಕೆಲಸ ನಿರ್ವಹಣೆ ಹುನ್ನಾರ:ಸದ್ಯ ಗ್ರಾಮ ಸೇವಕ ಹುದ್ದೆ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕ ಕೆಲಸ ಮಾಡುತ್ತಿರುವ ಗಣಪತಿ ಶೇಟ್ ಯಾವ ಹಿನ್ನೆಲೆ ಎರಡು ಹುದ್ದೆಯಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯವಿದೆ. ಸದ್ಯ ಚಾಲಕ ಹುದ್ದೆಯ ಸಂಬಳ ಗುತ್ತಿಗೆ ಕಂಪನಿಯಿಂದ ಪಡೆದಿದ್ದು ತಹಸೀಲ್ದಾರ ಹಂತದಲ್ಲಿ ಗ್ರಾಮ ಸೇವಕ ಹುದ್ದೆಗೆ ಅನುಮೋದನೆ ನೀಡಿ ಸಹಾಯಕ ಆಯುಕ್ತರ ಹಂತದಲ್ಲ ಅನುಮೋದನೆ ಹಂತದಲ್ಲಿದ್ದ ಹಿನ್ನೆಲೆ ಗ್ರಾಮ ಸೇವಕ ಹುದ್ದೆಯ ಸಂಬಳ ಬಂದಿಲ್ಲವಾಗಿದೆ. ಸದ್ಯ ಈತ ಚಾಲಕ ಹುದ್ದೆಗೂ ರಾಜೀನಾಮೆ ನೀಡದೇ ಇನ್ನೊಂದು ಕಡೆ ಗ್ರಾಮ ಸೇವಕ ಹುದ್ದೆ ಮಾಡುತ್ತಿರುವುದು ಯಾವ ರೀತಿ ನ್ಯಾಯ ಎಂಬುದು ಅಧಿಕಾರಿಗಳಿಗೆ ತಿಳಿಸಿಬೇಕು.
ಅನಂತ ಮಹಾಲೆ- ನಿವೃತ್ತ ಕಂದಾಯ ಇಲಾಖೆ ಗ್ರಾಮ ಸೇವಕ’‘ಸುಮಾರು 35 ವರ್ಷಗಳಿಂದ ಗ್ರಾಮ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಹೊಂದಿದ್ದೇನೆ. ನನ್ನ ಕೆಲಸ ನನ್ನ ಮಗನಿಗೆ ಸಿಗಬೇಕಾಗಿತ್ತು. ಆದರೆ ನನಗೆ ಆದರೆ ಹುದ್ದೆಯನ್ನು ತಹಸೀಲ್ದಾರ್ ವಾಹನ ಚಾಲಕನಿಗೆ ನೀಡಿದ್ದಾರೆ. ಇದು ನನಗೆ ಆದ ಅನ್ಯಾಯವಾಗಿದೆ. ನನ್ನ ಮನೆಗೆ ಕುದ್ದು ಕಾರು ಚಾಲಕ ಗಣಪತಿ ಶೇಟ್ ಹಾಗೂ ಇನ್ನೋರ್ವ ಗ್ರಾಮ ಸೇವಕ ಬಂದು ಖಾಲಿ ಹಾಳೆಯಲ್ಲಿ ಸಹಿ ಹಾಕುವಂತೆ ತಿಳಿಸಿದ್ದು ನನ್ನ ಪತ್ನಿ ಸಹಿ ಮಾಡದಂತೆ ತಿಳಿಸಿದ್ದಳು ಆದರೆ ಊಟಕ್ಕೆ ಸಮಯಕ್ಕೆ ಮನೆಗೆ ಬಂದು ಗಡಿಬಿಡಿಯಲ್ಲಿ ಸಹಿ ಪಡೆದು ತೆರಳಿದ್ದು ನಮಗೆ ಈಗ ಅನುಮಾನ ಸರಿಯಾಗಿದೆ. ನಮಗೆ ನ್ಯಾಯ ಸಿಗಬೇಕು. ಈ ಬಗ್ಗೆ ಸಹಾಯಕ ಆಯುಕ್ತರಿಗೆ ಮನವಿ ಸಹ ಸಲ್ಲಿಸಿದ್ದು ನನ್ನ ಹುದ್ದೆಗೆ ನನ್ನ ಮಗನನ್ನು ಆಯ್ಕೆ ಮಾಡಬೇಕು ಎಂಬುದು ನನ್ನ ಒತ್ತಾಯ’
ರವಿಚಂದ್ರ ಎಸ್. – ತಹಸೀಲ್ದಾರ ಭಟ್ಕಳ.‘ನಿವೃತ್ತ ಗ್ರಾಮ ಸೇವಕ ಅನಂತ ಮಹಾಲೆ ಅವರು ತಮಗೆ ಕೆಲಸ ಬೇಡವೆಂದು ಸಹಿ ನೀಡಿದ ಪತ್ರವನ್ನು ಆಧರಿಸಿ ಅದನ್ನು ಅನುಮೋದನೆ ಮಾಡುವ ಕೆಲಸ ಮಾಡಿದ್ದೇವೆ. ಮೊದಲು ಹುದ್ದೆಗೆ ಅವರ ಕುಟುಂಬದವರಿಗೆ ಪ್ರಾಶಸ್ತ್ಯವಿದ್ದು ಅವರು ಬೇಡವೆಂದ ಹಿನ್ನೆಲೆ ಸಹಾಯಕ ಆಯುಕ್ತರ ಅನುಮೋದನೆಯ ಹಂತದಲ್ಲಿದೆ. ಒಂದು ವೇಳೆ ನಾವು ಸಲ್ಲಿಸಿದ ಅನುಮೋದನೆ ತಪ್ಪಿದಲ್ಲ ಅದನ್ನು ಅಪೀಲ್ ಸಹ ಮಾಡುವ ಅವಕಾಶವಿದೆ ಎಂದು ತಿಳಿಸಿದರು.
Leave a Comment