ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS) 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರಕ್ಕೂ ಅಧಿಕ ನೇಮಕಾತಿ ಘೋಷಿಸಿದೆ. 40,000 ಫ್ರೆಶರ್ಸ್ ನೇಮಕಾತಿಯೊಂದಿಗೆ ಮುಂಬರುವ ಕೆಲ ತಿಂಗಳುಗಳಲ್ಲಿ ಟಿಸಿಎಸ್ ಹೊಸ ದಾಖಲೆ ಬರೆಯಲಿದೆ.

ಕಳೆದ ಮೂರು ತಿಂಗಳಲ್ಲಿ ಸುಮಾರು 19,388 ಹೊಸ ಸಿಬ್ಬಂದಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸುಮಾರು 9.2 ಬಿಲಿಯನ್ ಡಾಲರ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸಂಸ್ಥೆಯ ಆಟ್ರಿಷನ್ ದರ ಶೇ 7.2ರಷ್ಟಿದೆ.
ಕೊರೊನಾ ಸಾಂಕ್ರಾಮಿಕದ ನಡುವೆಯೂ ನೇಮಕಾತಿ ಸಂಖ್ಯೆಯನ್ನು ಕಡಿತಗೊಳಿಸಿಲ್ಲ ಎಂದು ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.
ಟಿಸಿಎಸ್ ಒಟ್ಟಾರೆ, 4.88 ಲಕ್ಷ ಸಿಬ್ಬಂದಿ ಹೊಂದಿದ್ದು, ಮುಂದಿನ ಮೂರು ತಿಂಗಳಲ್ಲೇ ಟಿಸಿಎಸ್ 5 ಲಕ್ಷ ಉದ್ಯೋಗಿಗಳನ್ನು ಹೊಂದಿದ ಬೃಹತ್ ಐಟಿ ಸಂಸ್ಥೆಎನಿಸಿಕೊಳ್ಳಲಿದೆ.
ಜಾಗತಿಕವಾಗಿ ಆಕ್ಸೆಂಚರ್ ಅತಿ ದೊಡ್ಡ ಮಾನವ ಸಂಪನ್ಮೂಲ ಹೊಂದಿದ್ದು, 5.37 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಟಿಸಿಎಸ್ 4.88ಲಕ್ಷ ಹೊಂದಿದ್ದು, ಶೀಘ್ರವೇ 5 ಲಕ್ಷ ಗಡಿ ದಾಟಲಿದೆ. ಮಿಕ್ಕಂತೆ, ಇನ್ಫೋಸಿಸ್ 2.5 ಲಕ್ಷ, ಎಚ್ ಸಿ ಎಲ್ ಟೆಕ್ 1.6 ಲಕ್ಷ ಹಾಗೂ ವಿಪ್ರೋ 1.9 ಲಕ್ಷ ಉದ್ಯೋಗಿಗಳ ಬಲ ಹೊಂದಿವೆ. ಖಾಸಗಿ ವಲಯದಲ್ಲಿ ಐಟಿಯೇತರ ಸಂಸ್ಥೆಗಳ ಪೈಕಿ ಆದಿತ್ಯಾ ಬಿರ್ಲಾ ಸಮೂಹ ಸಂಸ್ಥೆಯಲ್ಲಿ 1.2 ಲಕ್ಷ, ಎಲ್ ಅಂಡ್ ಟಿಯಲ್ಲಿ 3.37 ಲಕ್ಷ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ 2 ಲಕ್ಷ ಸಿಬ್ಬಂದಿ ಇದ್ದಾರೆ.
last date;20/4/2021
ಅರ್ಜಿ ಸಲ್ಲಿಸಲು;NextStep- Tata Consultancy Services (tcs.com)
web site; www.tcs.com
Leave a Comment