ಹೊನ್ನಾವರ:ತಾಲೂಕಿನ ಇಕೋ ಬಿಚ್ ಸುತ್ತಮುತ್ತ ‘ಖಡಕ್’ ಸಿನಿಮಾ ಚಿತ್ರಿಕರಣ ನಡೆದಿದ್ದು ಉತ್ತರ ಕನ್ನಡದ. ಪ್ರಕ್ರತಿ ಸೊಬಗು, ಸಿನೆಮಾದ ಕುರಿತು ನಾಯಕ ನಟ ಧರ್ಮರಾಜ್ ಕಿರ್ತಿರಾಜ್ ಅನಿಸಿಕೆ ಹಂಚಿಕೊಂಡಿದ್ದಾರೆ.

ಹೊನ್ನಾವರ ತಾಲೂಕಿನ ಪ್ರಸಿಧ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಬಳ್ಕೂರಿನ ಶ್ರೀ ನೀಲಗೋಡೇಶ್ವರಿ ದೇವಾಲಯದ ಸುತ್ತಮುತ್ತಲಿನ ಪರಿಸರದಲ್ಲಿ ಕೆಲದ್ರಶ್ಯಾವಳಿ ಸೆರೆಹಿಡಿದ ಚಿತ್ರತಂಡ ನಂತರ ಇಕೋ ಬೀಚ್ ನಲ್ಲಿ ಹಾಗೂ ಗಾರ್ಡನ್ ನಲ್ಲಿ ಚಿತ್ರದಲ್ಲಿನ ಸಾಂಗ್ ವೊಂದರ ಚಿತ್ರಿಕರಣ ನಡೆಸಿತು. ಸಿನಿಮಾ ಶೂಟಿಂಗ್ ನಡೆಯುತ್ತಿರುವುದನ್ನು ಕಂಡು ನಾಯಕ ನಟ ಧರ್ಮರಾಜ್ ಕಿರ್ತಿ ಅವರೊಂದಿಗೆ ಫೋಟೋ ಕ್ಲಿಕ್ ಮಾಡಿಕೊಳ್ಳಲು ಮುಗಿಬಿದ್ದರು. ಇನ್ನೂ ಸಿನಿಮಾಕ್ಕೆ ರಾಜರತ್ನ ಎಂಬುವವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಾಪುರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಟ ಧರ್ಮ ಕಿರ್ತಿರಾಜ್ ಮಾತನಾಡಿ ಉತ್ತರ ಕನ್ನಡಕ್ಕೆ ಸಿನಿಮಾ ಚಿತ್ರಿಕರಣಕ್ಕೆ ಬಂದಾಗ ಜನರು ನಮಗೆ ತೋರುವ ಪ್ರೀತಿ ಬಹಳವೇ ಇಷ್ಟವಾಯಿತು.ಶಂಕರ್ ನಾಗ್ ರಂತಹ ಮಹಾನ್ ನಟರನ್ನು ನೀಡಿದ ಜಿಲ್ಲೆಗೆ ಆಗಮಿಸಿರುವುದು ಸಂತಸದ ಸಂಗತಿ. ಇಲ್ಲಿನ ಪೃಕ್ರತಿ ಸೋಬಗು,ರಮಣೀಯ ತಾಣಗಳ ಬಗ್ಗೆ ವರ್ಣಿಸಿದರು. ಕೇವಲ ನಾಲ್ಕೈದು ದಿನ ಜಿಲ್ಲೆಯಲ್ಲಿ ಚಿತ್ರಿಕರಣ ನಡೆಸಬೇಕೆಂದಿದ್ದೇವು ಆದರೆ ಇಲ್ಲಿನ ಸುಂದರ ತಾಣ ನೋಡೊದಾಗ ಇನ್ನಷ್ಟು ದಿನ ಚಿತ್ರೀಕರಣ ನಡೆಸಬೇಕೆನಿಸುತ್ತಿದೆ ಎಂದರು. ಕೊವಿಡ್ ನಿಂದ ಎಲ್ಲಾ ರೀತಿಯಿಂದಲೂ ಸಮಸ್ಯೆಯಾಗಿದೆ. ಕೊವಿಡ್ ಸಂದರ್ಭದಲ್ಲಿ ಕೆಲವು ವೃತ್ತಿಯನ್ನು ವರ್ಕ ಪ್ರಾಮ್ ಹೊಮ್ ಆಗಿ ಮಾಡಬಹುದು.ಆದರೆ ಸಿನಿಮಾ ಚಿತ್ರೀಕರಣದಲ್ಲಿ ಅದು ಸಾಧ್ಯವಾಗುವುದಿಲ್ಲ. ಆದರು ಕೊವಿಡ್ ನಿಂದ ದೂರ ಊಳಿಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆವಹಿಸುತ್ತೇವೆ ಎಂದರು.
Leave a Comment