ಹೊಸ ವಾಹನ ಖರೀದಿ, ವಾಹನ ಚಾಲನೆ ಪವಾನಿಗೆ, ಕಲಿಕಾ ಪರವಾನಿಗೆ, ವಾಹನ ನೋಂದಣಿ, ಡಿಎಲ್ ನವೀಕರಣ, ವಿಳಾಸ ಬದಲಾವಣೆ, ಅಂತರಾಷ್ಟ್ರೀಯ ವಾಹನ ಜಾಲನೆ ಪರವಾನಿಗೆ ವಾಹನಗಳ ತಾತ್ಕಾಲಿಕ ನೋಂದಣಿ ಸೇರಿದಂತೆ ವೆಹಿಕಲ್ ಸಂಬಂದಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ.

ಕೇ0ದ್ರ ಸರ್ಕಾರ ವಾಹನದ ನಕಲಿ ನೊಂದಣಿಗೆ ಕಡಿವಾಣ ಹಾಕಲು ವಾಹನ ಸಂಬಂಧಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಿದೆ.
ಆಧಾರ್ ನೊಂದಿಗೆ ಸಂಯೋಜನೆಯಾಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ಬಳಿಕವಷ್ಟೇ ವಾಹನ ಸಂಬಂಧಿತ ಎಲ್ಲಾ ರೀತಿಯ ವ್ಯವಹಾರಗಳು ಪೂರ್ಣಗೊಳ್ಳಲಿವೆ. ಈ ಮೂಲಕ ಒಬ್ಬ ವ್ಯಕ್ತಿಯ ಬಳಿ ಎಷ್ಟು ವೆಹಿಕಲ್ ಗಳಿವೆ ಎಂಬ ಮಾಹಿತಿ ಸರ್ಕಾರಕ್ಕೆ ಸಿಗಲಿದೆ. ಜೊತೆಗೆ ನಕಲಿ ನೋಂದಣಿ ಸೇರಿದಂತೆ ಇತರ ಅಕ್ರಮಗಳಿಗೆ ಬ್ರೇಕ್ ಹಾಕಬಹುದಾಗಿದೆ ಎನ್ನಲಾಗಿದೆ.
Leave a Comment