ಜೋಯಿಡಾ :- ತಾಲೂಕಿನ ಅನಮೋಡ ಅಬಕಾರಿ ಚೆಕಪೋಸ್ಟ ಬಳಿ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಗೋವಾ ಸರಾಯಿಯನ್ನು ಮಂಗಳವಾರ ಅನಮೋಡ ಅಬಕಾರಿ ಪೋಲಿಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಾಹನ ಸಂಖ್ಯೆ MH 10 Z 3750 ಲಾರಿಯಲ್ಲಿ 144 ಲೀ ಗೋವಾ ಮಧ್ಯ ಸಾಗಿಸುತ್ತಿದ್ದ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಲಾರಿಯಲ್ಲಿ ಸಂಗ್ರಹಿಸಿಟ್ಟ ಮಧ್ಯ ದೊರೆತಿದೆ. ಚಾಲಕನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಬಕಾರಿ ಉಪನಿರೀಕ್ಷಕ ಎಂ ವಿ ಜೋಗಳೆಕರ ಅಬಕಾರಿ ಪೇದೆಗಳಾದ ಶ್ರೀ ಆರ್ ಎನ್ ನಾಯ್ಕ್, ಶ್ರೀ ಮೋಹನ್ ಮೊಗೇರ್, ಶ್ರೀ ಸದಾಶಿವ ರಾಠೋಡ್ ಪಾಲ್ಗೊಡಿದ್ದರು.
Leave a Comment