ಭಟ್ಕಳ: ಕೊರೊನಾ ಕುರಿತು ಯೂಟ್ಯೂಬ್ ಹಾಗೂ ವಾಟ್ಸಾಪ್‌ನಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಭಯವನ್ನುಂಟು ಮಾಡಿದ ಅಪರಿಚಿತ ಮಹಿಳೆಯ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್ ೨೮ ರಂದು ಬುರ್ಖಾ ಧರಿಸಿ ಮುಖ ಕಾಣದಂತೆ ವಿಡಿಯೋ ಮಾಡಿರುವ ಯಾರೋ ಅಪರಿಚಿತ ಮಹಿಳೆಯೋರ್ವಳು ಕೋವಿಡ್-೧೯ ಕಾಯಿಲೆಯ ವಿರುದ್ಧ ಜನರಿಗೆ ದಿಕ್ಕು ತಪ್ಪಸುವ ವಿಡಿಯೋವನ್ನು ಮಾಡಿ ಅದನ್ನು ಶಾಬಾಂದ್ರಿ ಆನ್‌ಲೈನ್ ಭಟ್ಕಳ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದು ಆ ಬಳಿಕ ಈ ವಿಡಯೋ ಲಿಂಕ್ ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಆಗಿದೆ. ವಿಡಿಯೀದಲ್ಲಿ ‘ಈ ರೋಗದಿಂದ ದೂರವಿರಿ. ಕೊರೋನಾ ಖತಂ ಆಗಿದೆ, ಟಿ.ವಿ ಗಳು ಆಂಧ್ರದಲ್ಲಿ, ಮಹಾರಾಷ್ಟ್ರದಲ್ಲಿ, ಎಷ್ಟು ಜನ ಸತ್ತಿದ್ದಾರೆ ಅಂತಾ ಜನರಿಗೆ ಹೆದರಿಸುತ್ತಾರೆ, ಆದ ಕಾರಣ ನೀವು ಯಾರೂ ಹೆದರಬಾರದು. ಮನೆಯಲ್ಲಿ ಇರಿ. ಆಸ್ಪತ್ರೆಗೆ ಹೋಗಬೇಡಿ, ಕೊರೋನಾ ಇಂಜೆಕ್ಷನ್ ಕೊಟ್ಟು ಜನರಿಗೆ ನಿಶ್ಯಕ್ತಿ ಮಾಡುತ್ತಿದ್ದಾರೆ, ಇಂಜೆಕ್ಷನ್ ಕೊಟ್ಟ ನಂತರ ಮೂಳೆ ಸವೆಯುತ್ತವೆ. ನಂತರ ಜನರು ಸಾಯುತ್ತಾರೆ. ಯಾವ ಇಂಜೆಕ್ಷನ್ ಕೊಟ್ಟಿದ್ದು ಅಂತಾ ಜನರು ಕೇಳಬೇಕು, ಜನರು ಯಾರೂ ಕೂಡ ಆಸ್ಪತ್ರೆಗೆ ಹೋಗಬೇಡಿ. ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಅಂತಾ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿ ಭಯವನ್ನುಂಟು ಮಾಡಿರುವ ಆರೋಪದ ಮೇಲೆ ಭಟ್ಕಳ ಠಾಣೆಯ ಪಿಎಸ್.ಐ ಸುಮಾ.ಬಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
Leave a Comment