ಹಳಿಯಾಳ :- ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಟಿಎಂಸಿ ಕಾರ್ಯಕರ್ತರು ನಡೆಸಿದ ಭೀಕರ ಹಿಂಸಾಚಾರವನ್ನು ಖಂಡಿಸಿ ಹಳಿಯಾಳ ತಾಲೂಕಾ ಬಿಜೆಪಿ ಘಟಕದ ವತಿಯಿಂದ ಮಾಜಿ ಶಾಸಕರಾದ ಸುನೀಲ್ ಹೆಗಡೆ

ಅವರ ನೇತೃತ್ವದಲ್ಲಿ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು.
ಕೂಡಲೇ ಹಿಂಸಾಚಾರ ನಡೆಸಿದವರನ್ನು ಬಂಧಿಸಬೇಕು, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಘಟಕದ ಅಧ್ಯಕ್ಷ ಗಣಪತಿ ಕರಂಜೆಕರ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಮುತ್ನಾಳೆ, ಮುಖಂಡರಾದ ವಿಲಾಸ ಯಡವಿ, ಯಲ್ಲಪ್ಪಾ ಹೊನ್ನೋಜಿ, ತಾನಾಜಿ ಪಟ್ಟೇಕರ, ನಾಗರಾಜ ಬಾಂದೇಕರ, ಆಕಾಶ, ಜ್ಯೋತಿಬಾ ಇದ್ದರು.
Leave a Comment