ಹಳಿಯಾಳ ;- ಕೊರೊನಾ ಎರಡನೇ ಅಲೆ ಹಳಿಯಾಳ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಇನ್ನು ಮುಂದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ಬೇಕಾಬಿಟ್ಟಿಯಾಗಿ ರಸ್ತೆಗಿಳಿದರೇ ಮುಲಾಜಿಲ್ಲದೇ ಎಫ್ಐಆರ್ ದಾಖಲಿಸಲಾಗುವುದು ಎಂದು ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ಖಡಕ್ ಎಚ್ಚರಿಕೆ ನೀಡಿದರು.

ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಯ ಪರಿಣಾಮ ತಾಲೂಕಿನಲ್ಲಿ 468 ಸಕ್ರಿಯ ಕೊರೊನಾ ಸೊಂಕಿತ ಪ್ರಕರಣಗಳಿದ್ದು ಸರ್ಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ 16 ಜನರು ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿಯು ಉತ್ತಮವಾಗಿದೆ ಹಾಗೂ ಉಳಿದ 392 ಜನರು ಹೋಂ ಐಸೋಲೆಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದರು.
ಕಳೆದ ಬಾರಿಗಿಂತ ಈ ಬಾರಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಒಟ್ಟೂ 17 ಜನರು ಕೊರೊನಾ ಸೊಂಕಿನಿಂದ ನಿಧನರಾಗಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಜೌಷಧಿಗಳ ಕೊರತೆ ಇಲ್ಲವೆಂದು ತಿಳಿಸಿದ ತಹಶೀಲ್ದಾರ್ ಅವರು ಮುನ್ನಚ್ಚರಿಕೆಯ ಕ್ರಮವಾಗಿ ಕೊರೊನಾ ಸೊಂಕಿತರಿಗಾಗಿ ಯಾತ್ರಿ ನಿವಾಸ ಸಿದ್ದಗೊಳಿಸಲಾಗಿದೆ.
ತಾಪಂ ಇಒ ಪ್ರವೀಣಕುಮಾರ ಸಾಲಿ ಮಾತನಾಡಿ ತಾಲೂಕಿನ 106 ಗ್ರಾಮಗಳಲ್ಲಿ ನಿಗಾವಹಿಸಲಾಗಿದ್ದು, 20 ಗ್ರಾಪಂಗಳಲ್ಲಿ ಟಾಸ್ಕ್ ಪೋರ್ಸ ಕಮಿಟಿಗಳನ್ನು ರಚಿಸಿ ಪ್ರತಿ ಸೋಮವಾರ ಮತ್ತು ಶನಿವಾರ ಸಭೆಗಳ ಮೂಲಕ ಎಲ್ಲ ಬೆಳಗವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊರೊನಾ ತಡೆಗೆ ಪರಿಣಾಮಕಾರಿಯಾಗಿ ಶ್ರಮಿಸಲಾಗುತ್ತಿದೆ. ತಾಲೂಕಿನ 07 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆಗೆ ಅನುಕೂಲ ಮಾಡಿಕೊಡಲಾಗಿದ್ದು, ಇಗಾಗಲೇ ಮಾಸ್ಕ್ ಇಲ್ಲದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದವರಿಂದ ಗ್ರಾಮಾಂತರ ಭಾಗದಲ್ಲಿ 84 ಸಾವಿರ ರೂ ಹಾಗೂ ಪಟ್ಟಣದಲ್ಲಿ 1.64 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ ಎಂದರು.
ತಾಲೂಕಿನಲ್ಲಿ ಹೋಂ ಐಸೋಲೆಷನ್ಲ್ಲಿರುವ ಸೊಂಕಿತರು ಹಾಗೂ ಕಂಟೆನಮೆಂಟ್ನಲ್ಲಿರುವ ಸೊಂಕಿತರ ಸಂಪರ್ಕಕ್ಕೆ ಬಂದ ಜನತೆ ಹೊರಗೆ ಸುತ್ತಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಇನ್ನೂ ಮುಂದೆ ಅವರ ಮೇಲೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ, ಸಿಪಿಐ ಡಾ.ಮೋತಿಲಾಲ್ ಪವಾರ, ಪಿಎಸೈ ಶಿವಾನಂದ ನಾವದಗಿ ಇದ್ದರು.
Leave a Comment