ಹಳಿಯಾಳ :- ಸರ್ಕಾರದ ಆದೇಶದಂತೆ ಮುಂಚುನಿಯಲ್ಲಿರುವ ಕೊರೊನಾ ವಾರಿಯರ್ಸ್ಗಳಿಗೆ ಶನಿವಾರ ಕೊವಿಡ್ ಲಸಿಕೆ ಕೊಡುವ ಕಾರ್ಯಕ್ಕೆ ಹಳಿಯಾಳ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.

ಪಟ್ಟಣದ ಶಿವಾಜಿ ಕಾಲೇಜ್ನಲ್ಲಿಯ ಕೊವಿಡ್ ಲಸಿಕಾ ಕೇಂದ್ರದಲ್ಲಿ ಹಳಿಯಾಳ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್ಎ ಅವರು ಕೊವಿಡ್ ಲಸಿಕೆಯ ಪ್ರಥಮ ಡೊಸ್ ಪಡೆದರು. ಬಳಿಕ ನ್ಯಾಯಾಲಯ ಸಿಬ್ಬಂದಿ, ವಕೀಲರು ಹಾಗೂ ಹಳಿಯಾಳ ಮಾಧ್ಯಮದವರು ಕೂಡ ಲಸಿಕೆ ಪಡೆದರು.
ಆರೋಗ್ಯ ಇಲಾಖೆಯ ನರ್ಸಗಳಾದ ರಾಜೇಶ್ವರಿ ಚೌಗಲೆ, ಸುನಂದಾ, ಶ್ರೇಯಸ್ ಶಾನಭಾಗ, ಆಶಾ ಕಾರ್ಯಕರ್ತೆ ಸರಸ್ವತಿ ಇದ್ದರು.
Leave a Comment