ಹಳಿಯಾಳ:- ಹಳಿಯಾಳ ಅರಣ್ಯ ಇಲಾಖೆಯ ಉಪ ವಿಭಾಗದ ವಲಯ ಅರಣ್ಯ ಅಧಿಕಾರಿ(ಆರ್ಎಫ್ಓ)ಯಾದ ಮಹೇಶ ಹಿರೇಮಠ ಅವರು ತಮ್ಮ ಸ್ವಂತ ಹಣದಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಫೇಸ್ ಶೀಲ್ಡ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಿದರು.

ಪಟ್ಟಣದಲ್ಲಿರುವ ತಮ್ಮ ಕಚೇರಿ ಮುಂಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ, ಪತ್ರಕರ್ತರಿಗೆ ಕೋವಿಡ-19 ರೋಗದ ಕುರಿತು ಜಾಗೃತಿ ಮೂಡಿಸಿ ಫೇಸ್ ಶೀಲ್ಡ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಿದ ಮಾತನಾಡಿದ ಅವರು ಕೊವಿಡ್ ಮಹಾಮಾರಿಯ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸದಾಕಾಲ ಅರಣ್ಯ ರಕ್ಷಣೆಯಲ್ಲಿ ತೊಡಗಿದ್ದು ಅವರ ಆರೋಗ್ಯ ರಕ್ಷಣೆ ಕೂಡ ಅತಿ ಮುಖ್ಯವಾಗಿದೆ ಅದು ನಮ್ಮ ಜವಾಬ್ದಾರಿಯೂ ಆಗಿದೆ ಎಂದರು.
ಹತ್ತು ಜನ ಸಿಬ್ಬಂದಿಗೆ ಸೋಂಕು ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ದಿನಗಳ ಹಿಂದೆ ಮಾವಿನಕೊಪ್ಪ ಚೆಕ್ ಪೆÇೀಸ್ಟ್ ನಲ್ಲಿ ಕಾರ್ಯನಿರ್ವಹಿಸುವ ವಲಯ ಅರಣ್ಯ ಅಧಿಕಾರಿ ಮೈಲಾರಪ್ಪ ಕೊಂಗಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಆದ್ದರಿಂದ ಡಿಎಫ್ಓ ಅವರ ಮಾರ್ಗದರ್ಶನದಂತೆ ಸಿಬ್ಬಂದಿಗಳಿಗಾಗಿಯೇ ಐಬಿ, ವಸತಿಗೃಹಗಳನ್ನು ಐಸೋಲೇಶನ್ ಕೇಂದ್ರಗಳಾಗಿ ಕಾಯ್ದಿರಿಸಲಾಗಿದೆ.
ಹಳಿಯಾಳ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ 85 ಸಿಬ್ಬಂದಿಗಳಲ್ಲಿ 40 ಸಿಬ್ಬಂದಿಗಳು ಕೋವಿಡ -19 ಲಸಿಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿ.ಎಪ್.ಓ ಡಾ. ಅಜ್ಜಯ್ಯ ಜಿ.ಆರ್ ,ಎ ಸಿ.ಎಪ್ ಶಿವಶರಣಯ್ಯ ಸಿಬ್ಬಂದಿಗಳು ಇದ್ದರು.
Leave a Comment