ಹೊನ್ನಾವರ ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಸಂಕಷ್ಟಿ ಚತುರ್ಥಿಯಂದು ವಿಷೇಶ ಪೂಜೆ ನಡೆಯಿತು.

ಲೋಕ ಕಲ್ಯಾರ್ಣಾರ್ಥ ವಿಶೇಷ ಪ್ರಾರ್ಥನೆ ,ಪೂಜೆ, ಅಭಿಷೇಕ್ ನಡೆದವು.ಪರಂಪರಾಗತ ಅರ್ಚಕರಾದ ವೇದಮೂರ್ತಿ ಮಂಜುನಾಥ ಭಟ್ಟರವರು ಸಂಕಷ್ಟಿ ಚತುರ್ಥಿಯಂದು ವಿಘ್ನವಿನಾಶಕನಿಗೆ ಅಭಿಷೇಕ ಮಹಾಪೂಜೆ ನೇರವೇರಿಸಿದರು.ಜಗತ್ತಿಗೆ ಆವರಿಸಿದ ಕರೋನಾ ಮಹಾಮಾರಿ ಉಪಟಳ ದೂರವಾಗಿ ದೇಶದಲ್ಲಿ ಎಲ್ಲಾ ಜನತೆಗೆ ಉತ್ತಮ ಆರೋಗ್ಯ ದೊರೆಯುವಂತಾಗಲಿ ಎಂದು ಮಹಾಗಣಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕೋವಿಡ್ ಹಿನ್ನಲೆಯಲ್ಲಿ ದೇವಾಲಯದ ಅರ್ಚ ಕರಿಗೆ ಹೊರತುಪಡಿಸಿ ಯಾರಿಗೂ ದೇವಸ್ಥಾನದ ಪ್ರವೇಶಕ್ಕೆ ಅವಕಾಶವಿರಲಿಲ್ಲ.
Leave a Comment