
ಭಟ್ಕಳ: ಅಮೇರಿಕಾದ ಇ-ಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿಯನ್ನು ವಿದ್ಯುದಲಂಕಾರಗೊಂಡ ಮುರುಡೇಶ್ವರದ ದೇವಾಲಯ ಪಡೆದುಕೊಂಡಿದೆ.
ಈ ಸ್ಪರ್ಧೆಯಲ್ಲಿ ಜಗತ್ತಿನ ಒಟ್ಟು 25 ಗ್ಲೋಬಲ್ ಪ್ರಾಜೆಕ್ಟ್ ಸಂಸ್ಥೆ ಭಾಗವಹಿಸಿದ್ದು. ಆನ್ಲೈನ್ ಮೂಲಕ 6,871 ಮಂದಿ ಮತ ಚಲಾಯಿಸಿದ್ದು. ಆದರೆ ಜಗತ್ತಿನ 24 ಗ್ಲೋಬಲ್ ಪ್ರಾಜೆಕ್ಟನ ಹಿಂದಿಕ್ಕಿ ತಾಲೂಕಿನ ವಿಶ್ವ ಪ್ರಸಿದ್ಧ ಮುರುಡೇಶ್ವರ ದೇವಾಲಯದ ವಿದ್ಯುದಲಂಕಾರಕ್ಕೆ
2500 ಮತ ಪಡೆಯುವದರ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡು. ಈ ಮೂಲಕ ಅಮೇರಿಕಾದ ಈಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ
ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಈ ವಿದ್ಯುದಲಂಕಾರ ಮಾಡಿದ ಬೆಂಗಳೂರಿನ ಸಂಚನ ಗುರು ಡಿಸ್ತ್ರಿಬ್ಯೂಟರ್ಸ್ ಗೆ ಈ ವರ್ಷದ ಪ್ರಶಸ್ತಿ ದೊರಕಿದೆ.
Leave a Comment