ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಕ್ರೀಡಾ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ/ ಅರ್ಜಿಗಳನ್ನು ಆಹ್ವಾನಿಸಿದೆ. ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿ, ರಾಷ್ಟ್ರೀಯ ಖೇಲ್ ರತ್ನ ಪುರಸ್ಕಾರ್ [ಆರ್.ಕೆ.ಪಿ.ಪಿ] ಮತ್ತು ಮೌಲಾನ ಅಬುಲ್ ಕಲಾಂ ಆಜಾದಿ [ಎಂ.ಎ.ಕೆ.ಎ] ಟ್ರೋಫಿಗಾಗಿ 2021 ರ ಮೇ 19 ಮತ್ತು 20 ರಂದು ಅರ್ಜಿ ಆಹ್ವಾನಿಸಲಾಗಿತ್ತು. ಸಚಿವಾಲಯದ ಜಾಲತಾಣ www.yas.nic.in ದಲ್ಲಿ ಅಧಿಸೂಚನೆಯನ್ನು ಅಪ್ ಲೋಡ್ ಮಾಡಲಾಗಿದೆ.

ನಾಮ ನಿರ್ದೇಶನಕ್ಕಾಗಿ ಕೊನೆಯ ದಿನಾಂಕ 2021 ರ ಜೂನ್ 21 ರಿಂದ 2021 ರ ಜೂನ್ 28 [ಸೋಮವಾರ] ಕ್ಕೆ ಮುಂದೂಡಲಾಗಿದೆ.
ಅರ್ಹ ಕ್ರೀಡಾಪಟುಗಳು/ ತರಬೇತುದಾರರು/ ಘಟಕಗಳು/ ವಿಶ್ವವಿದ್ಯಾಲಯಗಳಿಂದ ಅರ್ಜಿ/ ನಾಮ ನಿರ್ದೇಶನ ಆಹ್ವಾನಿಸಲಾಗಿದೆ. [email protected]ಅಥವಾ [email protected] ಈ ವಿಳಾಸಗಳಿಗೆ ಇ ಮೇಲ್ ಸಹ ಕಳುಹಿಸಬಹುದು.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್/ ಭಾರತೀಯ ಕ್ರೀಡಾ ಪ್ರಾಧಿಕಾರ/ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು/ ಕ್ರೀಡಾ ಉತ್ತೇಜನ ಮಂಡಳಿಗಳು/ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಸಹ ಇದಕ್ಕೆ ಅನುಗುಣವಾಗಿ ಮಾಹಿತಿ ತಿಳಿಸಲಾಗಿದೆ. 2021 ರ ಜೂನ್ 28 ರ ನಂತರ ಸ್ವೀಕರಿಸುವ ನಾಮನಿರ್ದೇಶನಗಳನ್ನು ಪರಿಗಣಿಸುವುದಿಲ್ಲ ತಿಳಿಸಲಾಗಿದೆ.
Leave a Comment