ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾದ ಲಿಂಡಾ ಎನ್ನುವ ಮಹಿಳೆಯ ಜಿಲ್ಲೆಯ ಹೊನ್ನಾವರದ ಗುಣವಂತೆಯ ಶ್ರೀಪಾದ ಹೆಗಡೆ ಯುವಕನಿಗೆ 4.90 ಲಕ್ಷ ರೂ ವಂಚಿಸಿದ್ದು. ಈ ಬಗ್ಗೆ ಅವರು ಕಾರವಾರದ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ಬುಧವಾರ ದೂರು ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪೋರ್ಚುಗಲ್ ದೇಶದ ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿಕೊಂಡು ನಂತರದಲ್ಲಿ ವಾಟ್ಸಪ್ ಮೂಲಕ ಸಂಪರ್ಕದಲ್ಲಿದ್ದರು. ಮಹಿಳೆ ತಾನು ವಿದೇಶದಲ್ಲಿದ್ದು ಭಾರತ ದೇಶದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣ ಹೂಡಿಕೆ ಮಾಡಬೇಕು ಹಾಗೂ ಭಾರತದಲ್ಲಿ ಒಬ್ಬರು ನಂಬಿಕೆ ಉಳ್ಳವರು ಬೇಕಾಗಿದ್ದಾರೆ, ನಿಮ್ಮ ಮೇಲೆ ನನಗೆ ನಂಬಿಕೆ ಇದೆ ಎಂದು ಮಹಿಳೆ ಶ್ರೀಪಾದ ಹೆಗಡೆ ಗೆ ಹೇಳಿ ನಂಬಿಸಿದ್ದಾ ಳೆ.
ತಾನು ಭಾರತ ದೇಶಕ್ಕೆ ಬಂದ ಮೇಲೆ ಹಣ ಹೂಡಿಕೆ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತೇನೆ. ಈ ನನ್ನ ಪ್ರತಿನಿಧಿ ನಮ್ಮ ದೇಶದಿಂದ ವಿಲಿಯಂ ಜೆ ಮೀಲ್ಸ್ ವ್ಯಕ್ತಿಯು ಭಾರತಕ್ಕೆ ಬರುತ್ತಿ ದು, ಅವರ ಜೊತೆ ನಾನು ಉಡುಗೊರೆಯಾಗಿ ಬಟ್ಟೆ ಶೂ,ಮೊಬೈಲ್ ಹಾಗೂ 2 ಲಕ್ಷ ಡಾಲರ್ ಕಳುಹಿಸಿಕೊಡುವುದಾಗಿ ನಂಬಿಸಿದ್ದಾಳೆ.
ಬಳಿಕ ಜೂನ್ 10ರಂದು ವಿಲಿಯಂ ಜೆ ಮೀಲ್ಸ್ ಶ್ರೀಪಾದ ಹೆಗಡೆ ಅವರನ್ನು ಸಂಪರ್ಕಿಸಿ ತಾನು ಲಿಂಡಾ ಅವರ ಪ್ರತಿನಿಧಿಯಾಗಿದ್ದು ಭಾರತಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ. ವಿಮಾನಯಾನದ ವೆಚ್ಚ ಕೋವಿಡ್ ಸರ್ಟಿಫಿಕೇಟ್ ಕರ್ಚು ,ಏರ್ಪೋರ್ಟ್ ಪಾರ್ಸಲ್ ವೆಚ್ಚ, ಪಾರ್ಸಲ್ ತೆಗೆದುಕೊಳ್ಳಲು ಅಲ್ಲಿನ ತನಿಖಾಧಿಕಾರಿಗಳಿಗೆ ನೀಡಬೇಕಾದ ಹಣ, ಪೋಲಿಸ್ ವೆರಿಫಿಕೇಶನ್ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ತುಂಬುವಂತೆ ವಿಲಿಯಂ ಶ್ರೀಪಾದ್ ಹೆಗಡೆ ತಿಳಿಸಿದ್ದಾನೆ , ಇದನ್ನು ನಂಬಿದ ಶ್ರೀಪಾದ ಹೆಗಡೆ ವಿಲಿಯಮ್ ನೀಡಿದ ವಿವಿಧ ಖಾತೆಗೆ ಜೂನ್ 10 ರಿಂದ 26 ರವರೆಗೆ ಒಟ್ಟು 4,90,350 ರೂ ವರ್ಗಾವಣೆ ಮಾಡಿದ್ದಾರೆ. ಆದರೂ ಯಾವುದೇ ಪಾರ್ಸೆಲ್ ಬಂದಿಲ್ಲ. ಇದರಿಂದ ತನಗೆ ಮೋಸವಾಗಿದೆ ಎಂದು ಅರಿವಾದ ನಂತರ ಅವರ ಕಾರವಾರದ cen ಅಪರಾಧ ಪೊಲೀಸ್ ಠಾಣೆಯಲ್ಲಿ ಶ್ರೀಪಾದ ಹೆಗಡೆ ದೂರು ದಾಖಲಿಸಿದ್ದಾರೆ .
Leave a Comment