ಕೋಲಾರದ ಬೆಂಗಳೂರು ರಸ್ತೆಯಲ್ಲಿರುವ 220kv ಸ್ಟೇಷನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿದ್ಯುತ್ ಸರಬರಾಜು ಹಠಾತ್ ಸ್ಥಗಿತಗೊಂಡು ಇಡೀ ಕೋಲಾರ ಕಾರ್ಗತ್ತಲಲ್ಲಿ ಮುಳುಗ ಬೇಕಾಯಿತು.

100ಮೆಗಾವಾಟ್ ಟ್ರಾನ್ಸ್‌ಫಾರ‍್ಮರ್ ಸಿಡಿದು ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಮತ್ತು ದಟ್ಟ ಹೊಗೆ ಮುಗಿದು ಮುಟ್ಟಿತಾದ್ರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ. ಟ್ರಾನ್ಸ್ಫಾರ್ಮರ್ ನಲ್ಲಿ ಹೆಚ್ಚಿನ ಮಟ್ಟದ ಆಯಿಲ್ ಶೇಖರಿಸಿದ್ದ ರಿಂದ ಬೆಂಕಿಯ ಜ್ವಾಲೆಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಕೊನೆಗೆ ಬೆಂಕಿಯನ್ನು ನಂದಿಸಿ, ಆಗಬಹುದಾದ ದೊಡ್ಡಮಟ್ಟದ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾದರು, ಟ್ರಾನ್ಸ್‌ಫಾರ‍್ಮರ್ ಸಿಡಿಯುತ್ತಿದ್ದಂತೆ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
100 ಮೆಗಾವ್ಯಾಟ್ ಟ್ರಾನ್ಸ್‌ಫಾರ‍್ಮರ್ ಸಿಡಿಯುವುದರಿಂದ ಸದ್ಯ ಜಿಲ್ಲೆಯಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಸುಮಾರು 10 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಬೆಸ್ಕಾಂ ಸಿಬ್ಬಂದಿ ಬೆಂಕಿಗಾಹುತಿಯಾಗಿರುವ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
Leave a Comment