ಬೆಂಗಳೂರು: ಅಪಾರ್ಟ್ ಮೆಂಟ್ ಒಂದರಲ್ಲಿ ಬಲೂನ್ ಸಿಡಿದು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಬರ್ತ್ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸಿಲಿಂಡರ್ ಸ್ಫೋಟ ಸಂಭವಿಸಿದೆ.

ಸುದ್ದಿಗಳಿಗಾಗಿ ಈ ಗ್ರುಪ್ ಸೇರಿ; join our group
ಗ್ಯಾಸ್ ಫಿಲ್ ಮಾಡುತಿದ್ದ ವ್ಯಕ್ತಿ ಸ್ಫೋಟದಿಂದ ಮೃತಪಟ್ಟಿದ್ದಾರೆ. ಅಶೋಕ ನಗರದ ಅಪಾಟ್ರ್ಮಂಟ್ ಆವರಣದಲ್ಲಿ
ಈ ಘಟನೆ ನಡೆದಿದೆ.ಗ್ಯಾಸ್ ಮೂಲಕ ಬಲೂನ್ ಫಿಲ್ ಮಾಡುತ್ತಿದ್ದಾಗ ಭಯಾನಕ ಸ್ಫೋಟ ಸಂಭವಿಸಿದೆ.
ಪಾರ್ಟಿಗಳಿಗೆ ಬಲೂನ್ ಒದಗಿಸುತ್ತಿದ್ದ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ (19) ಸ್ಫೋಟದಲ್ಲಿ ಮೃತಪಟ್ಟಿದ್ದಾರೆ
ದಿನೇಶ್ ಬರ್ತ್ ಡೇ ಕಾರ್ಯಕ್ರಮಕ್ಕೆ ಬಲೂನ್ ಗ್ಯಾಸ್ ಸಹಿತ ಬೈಕ್ ನಲ್ಲಿ ಸಹಾಯಕ ಮಹದೇಶ್ ಜೊತೆಗೆ
ಅಶೋಕನಗರದ ಅಪಾಟ್ರ್ಮಂಟ್ಗೆ ಆಗಮಿಸಿದ್ದರು.ಅಪಾರ್ಟ್‍ಮೆಂಟ್ ಆವರಣದಲ್ಲೇ ಬೈಕ್ ನಿಲ್ಲಿಸಿಕೊಂಡು ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದರು. ಈ ವೇಳೆ ಜೊತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್‍ಮೆಂಟ್ ಒಳಗೆ ಹೋಗಿದ್ದ.
ಕ್ಷಣಗಳಲ್ಲಿ ದಿನೇಶ್ ಒಬ್ಬರೇ ಬಲೂನ್ ಫಿಲ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ದಿನೇಶ್ ಕೈ-ಕಾಲು, ದೇಹ
ಛಿದ್ರಗೊಂಡಿದೆ.ಫ್ಲ್ಯಾಟ್ ನಿವಾಸಿ, ಮನೆಯಲ್ಲಿ ಬರ್ತಡೇ ಪಾರ್ಟಿಗೆ ಬಲೂನ್ ಡಿಸೈನ್ ಆರ್ಡರ್ ಮಾಡಿದ್ದರು.
ಒಟ್ಟು 200 ಬಲೂನ್ ಗಳನ್ನು ತಯಾರಿಸಲು ತಿಳಿಸಿದ್ದರು.ನೂರು ಬಲೂನ್ ಮಾಡಿ ಕಳುಹಿಸಲಾಗಿತ್ತು.
ಉಳಿದ ನೂರು ಬಲೂನ್ಗಳನ್ನು ತಯಾರಿಸುತಿ�ದ್ದ ವೇಳೆ ಅವಘಡ ನಡೆಸಿದೆ. ಮೃತ ದಿನೇಶ್ ಕಳೆದ ನಾಲ್ಕು ವರ್ಷಗಳಿಂದ ಬಲೂನ್ ಕೆಲಸ ಮಾಡುತ್ತಿದ್ದರು. ಆನ್ ಲೈನ್ ಮುಖಾಂತರ ಸಿಕ್ಕ ಆರ್ಡರ್ಗೆ ಬಲೂನ್ ತಯಾರಿಕೆ ಮಾಡುತ್ತಿದ್ದರು.
. .
Leave a Comment